Political News: ಕೇಡು ಬಯಸಿ ಪೂಜೆ ಮಾಡಿದ್ರೆ ದೇವರು ಯಾವತ್ತೂ ಒಳ್ಳೇದು ಮಾಡಲ್ಲಾ: ಸಿದ್ದರಾಮಯ್ಯ

Political News: ಕೇಡು ಬಯಸಿ ಪೂಜೆ ಮಾಡಿದ್ರೆ ದೇವರು ಯಾವತ್ತೂ ಒಳ್ಳೇದು ಮಾಡಲ್ಲಾ. ಯಾರಿಗೂ ಕೇಡು ಬಯಸದಿದ್ದಾಗ ಮಾತ್ರ ನಮಗೆ ಒಳ್ಳೆಯದಾಗುತ್ತದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನ ಕೆ.ಆರ್.ನಗರದಲ್ಲಿ ಬಸವ ಜಯಂತಿ ಅಂಗವಾಗಿ ಭಾಷಣ ಮಾಡುತ್ತಿದ್ದಾಗ ಸಿದ್ದರಾಮಯ್ಯ ಈ ಮಾತನ್ನು ಹೇಳಿದ್ದಾರೆ. ದೇವರು ಇರೋದು ನಿಜ. ದೇವರು ಇಲ್ಲಾ ಅಂತಾ ನಾನು ಹೇಳುವುದಿಲ್ಲ. ಆದರೆ ದೇವರು ನಿಮಗೆ ಯಾವಾಗ ಒಳ್ಳೇದು ಮಾಡ್ತಾನೆ ಅಂದ್ರೆ ಇನ್ನ“ಬ್ರಿಗೆ ಕೇಡು ಬಯಸದಿದ್ದಾಗ. ಅನಾಚಾರ ಮಾಡಿ ಪೂಜೆ ಮಾಡಿದ್ರೆ ದೇವರು ಹೇಳೆ ಒಳ್ಳೇದು ಮಾಡೋಕ್ಕೆ ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಅಲ್ಲದೇ ತಮ್ಮ ರಾಜಕೀಯ ಜೀವನದ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ನಾನು ರಾಜ್ಯದಲ್ಲಿ 17 ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ. 8 ವರ್ಷ ಸಿಎಂ ಆಗಿದ್ದೇನೆ. ಇದೆಲ್ಲ ರೆಕಾರ್ಡ್. ಆದರೆ ನಾನು ಸಕ್ರೀಯ ರಾಜಕಾರಣದಲ್ಲಿ ಮುಂದುವರಿಯುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

About The Author