Bigg Boss: ಲವ್‌ಲ್ಲಿ ಬಿದ್ದ ಸ್ಪರ್ಧಿ: ಮಗಳನ್ನು ಕರೆದೊಯ್ಯಲು ಬಿಗ್‌ಬಾಸ್‌ ಮನೆಗೇ ಬಂದ ಪೋಷಕರು

Bigg Boss Malayali: ಬಿಗ್‌ಬಾಸ್ ಮನೆಯಲ್ಲಿ ಹಲವು ದಿನಗಳ ಕಾಲ ಇದ್ದಾಗ, ಪರಸ್ಪರ ಪ್ರೇಮಾಂಕುರವಾಗೋದು ಕಾಮನ್. ಕನ್ನಡದಲ್ಲೇ ಎಷ್ಟೋ ಜೋಡಿಗಳು ಪ್ರೀತಿಯಲ್ಲಿ ಬಿದ್ದಿವೆ. ಕೆಲವರು ಸ್ನೇಹ ಮುಂದುವರಿಸಿದರೆ, ಕೆಲವರದ್ದು ಬ್ರೇಕಪ್ ಆಗಿದೆ. ಇನ್ನು ಕೆಲವರು ಮದುವೆಯೂ ಆಗಿದ್ದಾರೆ. ಆದರೆ ಮಲಯಾಳಿ ಬಿಗ್‌ಬಾಸ್‌ನಲ್ಲಿ 1 ಜೋಡಿ ಪ್ರೀತಿಯಲ್ಲಿ ಬಿದ್ದಿದ್ದು, ಸ್ಪರ್ಧಿಯ ಪೋಷಕರು ಆಕೆಯನ್ನು ಕರೆದ“ಯ್ಯಲು ಬಿಗ್‌ಬಾಸ್ ವೇದಿಕೆಗೇ ಬಂದಿದ್ದಾರೆ.

ನೇಹಾ ಫಾತಿಮಾ ಎಂಬಾಕೆ ತಾಶಿ ಎಂಬುವನನ್ನು ಪ್ರೀತಿಸುತ್ತಿದ್ದು, ಈ ಬಗ್ಗೆ ಆಕೆ ಬಿಗ್‌ಬಾಸ್‌ನಲ್ಲಿ ಮಾತನಾಡಿದ್ದಳು. ಈ ವಿಷಯ ತಿಳಿದ ಆಕೆಯ ತಂದೆ ತಾಯಿ, ಆಟ ಬಿಟ್ಟು ಮನೆಗೆ ಬರುವಂತೆ ಸಂದೇಶದ ಮೂಲಕ ಸೂಚಿಸಿದ್ದರು. ಆದರೂ ನೇಹಾ ಆಟ ಮುಂದುವರಿಸಿದ್ದರು. ಇದೀಗ ಆಕೆಯ ಪೋಷಕರು ಬಿಗ್ ಬಾಸ್‌ ವೇದಿಕೆ ತನಕ ಬಂದಿದ್ದು, ಆಕೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವೇದಿಕೆಗೆ ಬಂದ ನೇಹಾಳ ಅಪ್ಪ, ನೇಹಾ ನಮ್ಮನ್ನೆಲ್ಲಾ ಮರೆತೆಯಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ನೇಹಾ, ನಾನು ಯಾರನ್ನೂ ಮರೆತಿಲ್ಲ ಎಂದು ಹೇಳಿದ್ದಾರೆ. ಆಗ ಆಕೆಯ ತಾಯಿ, ಎಲ್ಲರೂ ಚೆನ್ನಾಗಿ ಆಡುತ್ತಿದ್ದಾರೆ. ಆದರೆ ನೀನು ಮಾತ್ರ, ಎಮೋಷನಲ್‌ ಆಗಿ ಮಾತನಾಡುತ್ತಾ ಇದ್ದೀಯಾ. ನಿನ್ನನ್ನು ಚೆನ್ನಾಗಿ ಯ್ಯೂಸ್ ಮಾಡಿಕ“ಳ್ಳುತ್ತಿದ್ದಾರೆ ಎಂದಿದ್ದಾರೆ.

ಆಗ ನೇಹಾ, ಹಾಗೇನಿಲ್ಲಾ.. ಇದೆಲ್ಲಾ ನ್ಯಾಚುರಲ್ ಆಗಿಯೇ ನಡೀತಿದೆ ಎನ್ನುತ್ತಾರೆ. ಅದಕ್ಕೆ ಅವರ ತಾಯಿ ಏನು ನ್ಯಾಚುರಲ್ ಆಗಿದೆ ಎಂದು ಪ್ರಶ್ನಿಸಿದ್ದಲ್ಲದೇ, ಈ ರೀತಿಯ ಆಟವೆಲ್ಲ ಆಡುವ ಅಗತ್ಯವೇನಿದೆ ಎಂದು ಪ್ರಶ್ನಿಸಿದ್ದಾರೆ. ಆಗ ಮೋಹನ್‌ ಲಾಲ್ ನೇಹಾ, ನಿನ್ನನ್ನು ಕರೆದ“ಯ್ಯಲು ನಿಮ್ಮ ಪೋಷಕರು ಬಂದಿದ್ದಾರೆ ಎಂದು ಹೇಳಿದ್ದಾರೆ.

ನೇಹಾ ಮನೆಗೆ ತೆರಳಿದ್ದಾಳೋ ಇಲ್ಲವೋ ಎಂಬ ಇನ್ನೂ ಸಿಕ್ಕಿಲ್ಲವಾಗಿದ್ದು, ಮುಂದೆ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

About The Author