Vidura Neeti: ಪ್ರತೀ ಉದ್ಯೋಗಸ್ಥರೂ ವಿದುರರ ಈ ನಿಯಮಗಳನ್ನು ಅನುಸರಿಸಲೇಬೇಕು..

Vidur Neeti: ಚಾಣಕ್ಯರು ಯಾವ ರೀತಿಯಾಗಿ ಜೀವನದ ಬಗ್ಗೆ ತಮ್ಮ ಚಾಣಕ್ಯ ನೀತಿಯಲ್ಲಿ ವಿವರಿಸಿದ್ದಾರೋ, ಅದೇ ರೀತಿ ವಿದುರ ನೀತಿಯಲ್ಲೂ ಕೂಡಾ ಕೆಲ ವಿಚಾರಗಳನ್ನು ವಿವರಿಸಿದ್ದಾರೆ. ಅದೇ ರೀತಿ ಉದ್ಯೋಗಸ್ಥರಾದವರು ಯಾವ ನಿಯಮಗಳನ್ನು ಅನುಸರಿಸಬೇಕು ಎಂದು ಕೂಡ ವಿದುರರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..

ಮಾತು ಮಿತವಾಗಿರಲಿ: ನೀವು ಆಫೀಸಿನಲ್ಲಿ ನಿಮ್ಮ ಸಹೋದ್ಯೋಗಿಯ ಜತೆ ಮಾತನಾಡುವಾಗ, ನಿಮ್ಮ ಮಾತಿನ ಮೇಲೆ ಗಮನವಿರಲಿ. ಮಾತಿನ ಭರದಲ್ಲಿ ಬೇರೆ ಸಹೋದ್ಯೋಗಿಗಳನ್ನು ಹೀಯಾಳಿಸುವುದು, ದೂರು ಹೇಳುವ ಸಾಧ್ಯತೆ ಇರುತ್ತದೆ. ಅಂಥ ಸಮಯದಲ್ಲಿ ನೀವು ಕಷ್ಟಕ್ಕೆ ಸಿಲುಕಬಹುದು. ನಿಮ್ಮ ಹೆಸರು ಹಾಳಾಗುವ ಎಲ್ಲಾ ಸಾಧ್ಯತೆಗಳಿರುತ್ತದೆ. ಹಾಗಾಗಿ ಮಾತನಾಡುವಾಗ, ನಿಮ್ಮ ಪರ್ಸನಲ್ ವಿಷಯ ಪ್ರಸ್ತಾಪಿಸುವುದು. ಬೇರೆಯವರನ್ನು ದೂರುವ ಕೆಲಸ ಬೇಡಾ.

ಸ್ನೇಹ ಬೆಳೆಸುವ ಮುನ್ನ ಎಚ್ಚರ: ಆಫೀಸಿನಲ್ಲಿ ಯಾರ ಜತೆಗಾದರೂ ಸ್ನೇಹ ಮಾಡುವ ಮುನ್ನ ಎಚ್ಚರವಾಗಿರಿ. ಏಕೆಂದರೆ ತುಳಿದು ಬೆಳೆಯುವ ಬುದ್ಧಿ ಹಲವರಿಗಿರುತ್ತದೆ. ಅಂಥವರು ಮಾಡುವ ಪ್ರಥಮ ಪ್ರಯತ್ನ ಎಂದರೆ ಎಲ್ಲರ ಜತೆ ಹೆಚ್ಚು ಸ್ನೇಹದಿಂದ ಬೆರೆಯುವುದು ಮತ್ತು ಅವರ ವೀಕ್ನೆಸ್ ತಿಳಿಯುವುದು. ಬಳಿಕ ಆ ವೀಕ್ನೇಸ್ ಲಾಭ ಪಡೆಯುವುದು. ಹಾಗಾಗಿ ಸ್ನೇಹ ಮಾಡುವ ಮುನ್ನ ಎಚ್ಚರ.

ಲಾಭಕ್ಕಿಂತ ಪರಿಣಾಮದ ಬಗ್ಗೆ ಯೋಚಿಸಿ: ನೀವು ಉದ್ಯೋಗ ಮಾಡುವ ಜಾಗದಲ್ಲಿ ನಿಮಗೆ ಲಾಭವಾಗುವಂಥ ಅಡ್ಡ ದಾರಿ ಇದ್ದರೆ, ಅಡ್ಡ ದಾರಿ ಹಿಡಿಯುವ ಮುನ್ನ, ಮುಂದಿನ ಪರಿಣಾಮಗಳ ಬಗ್ಗೆ ಖಂಡಿತವಾಾಗಿಯೂ ಯೋಚಿಸಿ. ಅಲ್ಲದೇ ಬೇಗ ಭಡ್ತಿ ಪಡೆಯಲು, ಸಂಬಳ ಹೆಚ್ಚಿಸಲು ಯಾರಾದ್ರೂ ಆಸೆ ತೋರಿಸಿದರೆ, ಆ ಆಸೆಗೆ ಎಂದಿಗೂ ಮರುಳಾಗದಿರಿ. ನಿಯತ್ತಾಗಿ ದುಡಿದಾಗ ಮಾತ್ರ ನೀವು ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ.

ಕೋಪ, ಅಸೂಯೆ ನಿಮ್ಮ ನಿರ್ಧಾರಗಳ ಮೇಲೆ ಪರಿಣಾಮ ಬೀರದಿರಲಿ: ನಿಮ್ಮ ಸಹೋದ್ಯೋಗಿಗೆ ಸಿಕ್ಕ ಭಡ್ತಿ ನಿಮಗೆ ಸಿಗದಿರಬಹುದು. ಅವರಿಗೆ ಸಿಕ್ಕ ಯಶಸ್ಸು ನಿಮಗೆ ಸಿಗದಿರಬಹುದು. ಆಗ ಅಸೂಯೆ ಆಗಬಹುದು. ಅದು ಮನುಷ್ಯನ ಸಹಜ ಗುಣ. ಆದರೆ ಆ ಅಸೂಯೆಯನ್ನು ತೋರ್ಪಡಿಸಿದ್ದಲ್ಲಿ ನಿಮ್ಮ ಬಗ್ಗೆ ತಪ್ಪು ಅಭಿಪ್ರಾಯ ವ್ಯಕ್ತವಾಗಬಹುದು. ಹಾಗಾಗಿ ಕೋಪ, ಅಸೂಯೆ ನಿಮ್ಮ ನಿರ್ಧಾರಗಳ ಮೇಲೆ ಪರಿಣಾಮ ಬೀರದಂತೆ ನೋಡಿಕ“`ಳ್ಳಿ ಅಂತಾರೆ ವಿದುರರು.

About The Author