Recipe: ಮನೆಯಲ್ಲೇ ಸುಲಭವಾಗಿ ತಯಾರಿಸಿ ಹೈ ಪ್ರೋಟಿನ್ ವೆಜ್ ಪಿಜ್ಜಾ

Recipe: ಬೇಕಾಗುವ ಸಾಮಗ್ರಿ: 1 ಕಪ್ ಹೆಸರು ಬೇಳೆ, ಗರಂ ಮಸಾಲೆ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಎಲ್ಲವೂ 1 ಸ್ಪೂನ್, 1 ಈರುಳ್ಳಿ, ಕ್ಯಾಪ್ಸಿಕಂ, ಕಾರ್ನ್, ಪನೀರ್, ಮನೆಯಲ್ಲೇ ತಯಾರಿಸಿದ ಸಾಸ್, ಬೆಣ್ಣೆ, ಸ್ವಲ್ಪ ಚೀಸ್ ಮತ್ತು ಉಪ್ಪು. ಅಗತ್ಯವಿದ್ದಲ್ಲಿ, ಆರೆಗ್ಯಾನೋ, ಚಿಲ್ಲಿ ಫ್ಲೇಕ್ಸ್ ಬಳಸಿ.

ಮಾಡುವ ವಿಧಾನ: 2 ತಾಸು ನೆನೆಸಿದ ಹೆಸರು ಬೇಳೆಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಅದರ ಜತೆಗೆ ಗರಂ ಮಸಾಲೆ, ಧನಿಯಾ ಪುಡಿ, ಜೀರಿಗೆ ಪುಡಿ, ಖಾರದ ಪುಡಿ, ಉಪ್ಪು, ಎಲ್ಲವನ್ನೂ ಹಾಕಿ ದೋಸೆ ಹಿಟ್ಟು ತಯಾರಿಸಿ.

ಬಳಿಕ ಇದರಿಂದ ದೋಸೆ ಮಾಡಿ. ಈ ದೋಸೆಯ ಮೇಲೆ ಬೆಣ್ಣೆ, ಸಾಸ್ ಸವರಿ, ಈರುಳ್ಳಿ, ಕಾರ್ನ್, ಕ್ಯಾಪ್ಸಿಕಂ, ಪನೀರ್ ಹಾಕಿ ನಂತರ ಚೀಸ್, ಆರೆಗ್ಯಾನೋ, ಚಿಲ್ಲಿ ಫ್ಲೇಕ್ಸ್ ಎಲ್ಲವನ್ನೂ ಪಿಜ್ಜಾ ರೀತಿಯಲ್ಲೇ ಹಾಕಿ ಮತ್ತೆ ತವಾದ ಮೇಲೆ ಇರಿಸಿ ಮಂದ ಉರಿಯಲ್ಲಿ ಚೀಸ್ ಮೆಲ್ಟ್ ಆಗುವವರೆಗೂ ಕಾಯಿಸಿ.

ಇದು ಆರೋಗ್ಯಕರವಾಗಿರುವ ಪೀಜ್ಜಾ ಆಗಿದ್ದು, ಅಪರೂಪಕ್ಕೆ ನೀವು ಮನೆಯಲ್ಲೇ ತಯಾರಿಸಿ ತಿನ್ನಬಹುದು. ಮಕ್ಕಳಿಗೆ ಆಚೆ ಸಿಗುವ ಮೈದಾ ಪಿಜ್ಜಾ ನೀಡುವ ಬದಲು, ಮನೆಯಲ್ಲೇ ಹೀಗೆ ತಯಾರಿಸಿ, ತಿನ್ನಿಸುವುದು ಉತ್ತಮ.

About The Author