Chanakya Neeti: ನಿಮ್ಮ ಜೀವನದಲ್ಲಿ ನೀವು ಖುಷಿಯಾಗಿರಬೇಕು, ನೆಮ್ಮದಿಯಾಗಿರಬೇಕು ಅಂದ್ರೆ ಕೆಲ ಕೆಲಸಗಳನ್ನು ಮಾಡಬಾರದು ಅಂತಾ ಚಾಣಕ್ಯರು ಹೇಳಿದ್ದಾರೆ. ಹಾಗಾದ್ರೆ ಆ ಕೆಲಸಗಳನ್ನು ಯಾವುದು ಅಂತಾ ತಿಳಿಯೋಣ ಬನ್ನಿ..
ಮೂರ್ಖರಿಗೆ ಎಂದಿಗೂ ವಿವರಣೆ ನೀಡಬೇಡಿ: ಕೆಲ ಜನರ ಸಂಗ ಮಾಡಿದ ಕೆಲ ದಿನಗಳಲ್ಲೇ ಅವರು ಮೂರ್ಖರಾ ತಿಳುವಳಿಕೆ ಉಳ್ಳವರಾ ಎಂದು ನಿಮಗೆ ಗೊತ್ತಾಗುತ್ತದೆ. ಅಂಥ ಸಂದರ್ಭದಲ್ಲಿ ಅವರು ಮೂರ್ಖರು. ಎಷ್ಟೇ ತಿಳುವಳಿಕೆ ನೀಡಿದರೂ, ಅವರು ಅದನ್ನು ಅರಿಯುವ ಅಥವಾ ನಿಮ್ಮ ಮಾತು ಕೇಳುವ ತಾಳ್ಮೆ ಉಳ್ಳವರಲ್ಲ ಎಂದು ನಿಮಗೆ ತಿಳಿದ ತಕ್ಷಣ. ಅಂಥವರಿಗೆ ಎಂದಿಗೂ ವಿವರಣೆ ನೀಡಲು ಹೋಗಬೇಡಿ. ಏಕೆಂದರೆ ಎಲ್ಲವನ್ನೂ ಎಲ್ಲರಿಗೂ ವಿವರಿಸುವ ಅಗತ್ಯವಿಲ್ಲ. ಅದರಲ್ಲೂ ತಮ್ಮ ತಪ್ಪನ್ನು ಒಪ್ಪಿಕೊಳ್ಳದೇ, ವಾದ ಮಾಡುವ ಮೂರ್ಖರ ಎದುರಂತೂ ನಿಮ್ಮನ್ನು ನೀವು ಎಂದಿಗೂ ವಿವರಿಸಿಕೊಳ್ಳಬೇಡಿ.
ದುರ್ಜನರ ಸಹವಾಸ ಮಾಡಬೇಡಿ: ನೀವು ಯಾರದ್ದಾದರೂ ಸ್ನೇಹ ಮಾಡಿದಾಗ, ನಿಮಗೆ ಅವರು ಎಂಥವರು ಎಂದು ತಿಳಿಯಲು ನಿಮಗೆ ಸ್ವಲ್ಪ ಸಮಯ ಸಾಕಾಗುತ್ತದೆ. ಆ ಸಮಯದಲ್ಲೇ ಅವರು ಸಜ್ಜನರೇ, ದುರ್ಜನರೇ ಅಥವಾ ಸಮಯ ವ್ಯರ್ಥ ಮಾಡುವವರೇ ಅಂತಾ ತಿಳಿಯಿರಿ. ಅವರೇನಾದರೂ ಸಜ್ಜನರು, ಬುದ್ಧಿವಂತರು, ಸಮಯ ವ್ಯರ್ಥ ಮಾಡದೇ, ಯಶಸ್ಸು ಗಳಿಸಲು ಶ್ರಮಿಸುವವರಾದರೆ, ಅಂಥವರ ಸ್ನೇಹ ಮುಂದುವರಿಸಿ. ದುರ್ಜರು ಅಂತಾದರೆ ಅಂಥವರಿಂದ ದೂರವಾಗಿಬಿಡಿ.
ಅತೃಪ್ತರಿಂದ ದೂರವಿರಿ: ಜೀವನದಲ್ಲಿ ತೃಪ್ತಿ ಇರುವುದು ತುಂಬಾ ಮುಖ್ಯ. ಯಾವ ಮನುಷ್ಯನಿಗೆ ಎಷ್ಟು ಮಾಡಿದರೂ, ಏನು ನೀಡಿದರೂ, ಹೇಗಿದ್ದರೂ ತೃಪ್ತಿಯಾಗಿಡಲು ಸಾಧ್ಯವಿಲ್ಲವೋ, ಅಂಥ ಮನುಷ್ಯನೊಂದಿಗೆ ಎಂದಿಗೂ ಜೀವನ ಮಾಡಲೇಬೇಡಿ. ಏಕೆಂದರೆ, ಅಂಥವರ ಜೊತೆಗಿದ್ದರೆ, ನಿಮಗೆಂದಿಗೂ ನೆಮ್ಮದಿ ಸಿಗಲು ಸಾಧ್ಯವೇ ಇಲ್ಲ.




