Life Lesson: ಬುದ್ಧಿವಂತರು ಈ ವಿಷಯಗಳನ್ನು ಎಂದಿಗೂ ಶೇರ್ ಮಾಡುವುದಿಲ್ಲ

Life Lesson: ಮನುಷ್ಯನೆಂದ ಮೇಲೆ ಅವನು ಸಾಕಷ್ಟು ತಪ್ಪು ಕೆಲಸಗಳನ್ನೂ ಮಾಡುತ್ತಾನೆ. ಕೆಲ ಉತ್ತಮ ಕೆಲಸಗಳನ್ನೂ ಮಾಡುತ್ತಾನೆ. ಅಂತೆಯ ಮಾಡಿದ ತಪ್ಪಿಗೆ ಕೆಲವರು ಪ್ರಾಯಶ್ಚಿತವನ್ನೂ ಮಾಡಿಕೊಳ್ಳುತ್ತಾರೆ. ಮತ್ತೆ ಕೆಲವರು ಅಂಥ ತಪ್ಪು ಮರುಕಳಿಸದಂತೆ ನೋಡುತ್ತಾರೆ. ಅಲ್ಲದೇ, ಮನುಷ್ಯನ ಜೀವನದಲ್ಲಿ ಹಲವು ಸಿಕ್ರೇಟ್‌ಗಳೂ ಇರುತ್ತದೆ. ಬುದ್ಧಿವಂತವನಾದವರು ಈ ಸಿಕ್ರೇಟ್‌ಗಳನ್ನು, ಮಾಡಿದ ತಪ್ಪುಗಳ ಬಗ್ಗೆ ಯಾರಿಗೂ ಹೇಳುವುದಿಲ್ಲ. ಅದೇ ಮೂರ್ಖನಾದವನು ತನ್ನ ಜೀವನದ ವಿಷಯಗಳನ್ನು ಡಂಗುರ ಸಾರಿ ಬರುತ್ತಾನೆ. ಹಾಗಾದ್ರೆ ಬುದ್ಧಿವಂತರು ಶೇರ್ ಮಾಡದ ವಿಷಯಗಳು ಯಾವುದು ಅಂತಾ ತಿಳಿಯೋಣ ಬನ್ನಿ.

ಆಂತರಿಕ ದೌರ್ಬಲ್ಯ: ಆಂತರಿಕ ದೌರ್ಬಲ್ಯ ಎಂದರೆ ನಮ್ಮ ವೀಕ್‌ನೆಸ್. ನಮ್ಮಲ್ಲಿ ಯಾವುದೇ ದೌರ್ಬಲ್ಯವಿರಬಹುದು. ಆ ಬಗ್ಗೆ ನಾವು ಎಲ್ಲಿಯೂ ಹೇಳಬಾರದು. ಏಕೆಂದರೆ, ಕೆಲವರು ಸಮಯದ ಲಾಭ ಪಡೆದು, ನಮ್ಮ ದೌರ್ಬಲ್ಯವನ್ನು ತಮಾಷೆ ಮಾಡಬಹುದು. ನಮಗೆ ಅವಮಾನ ಮಾಡಬಹುದು. ನಮ್ಮನ್ನು ಕೀಳಾಗಿ ನೋಡಲು ಯತ್ನಿಬಹುದು. ಹಾಗಾಗಿ ನಿಮ್ಮಲ್ಲಿನ ದೌರ್ಬಲ್ಯವನ್ನು ಯಾರಲ್ಲಿಯೂ ಹೇಳಬೇಡಿ.

ಮನೆ ಜಗಳ: ಬುದ್ಧಿವಂತರಾದವರು ಮನೆ ಜಗಳದ ಬಗ್ಗೆ ಡಂಗುರ ಸಾರುವುದಿಲ್ಲ. ಆ ಜಗಳದ ಗುಟ್ಟನ್ನು ನಾಲ್ಕು ಗೋಡೆಗಳ ಮಧ್ಯೆಯೇ ಜೋಪಾನ ಮಾಡುತ್ತಾರೆ. ಅಲ್ಲೇ ಬಗೆಹರಿಸಿಕೊಳ್ಳುತ್ತಾರೆ. ಆದರೆ ಮೂರ್ಖರು ತಮ್ಮ ಮನೆಯವರ ಬಗ್ಗೆಯೇ, ಇತರರಲ್ಲಿ ಹೇಳಿ ಮನೆ ಮರ್ಯಾದೆಯನ್ನು ಹರಾಜು ಹಾಕುತ್ತಾರೆ. ಹಾಗೆ ಹರಾಜು ಹಾಕುವಾಗ ಹೋಗುವುದು ತಮ್ಮದೇ ಮರ್ಯಾದೆ ಅನ್ನೋವ ಕನಿಷ್ಟ ಪರಿಜ್ಞಾನವೂ ಅವರಿಗಿರುವುದಿಲ್ಲ.

ತಮಗಾದ ಅವಮಾನ:ಯಾವುದಾದರೂ ವಿಷ್ಯಕ್ಕೆ ಸಂಬಂಧಿಸಿದಂತೆ, ನಿಮ್ಮನ್ನು ಯಾರಾದರೂ ಅವಮಾನಿಸಿರಬಹುದು. ಆದರೆ ಆ ಅವಮಾನದ ಬಗ್ಗೆ ಯಾರಲ್ಲಿಯೂ ಚರ್ಚಿಸಬೇಡಿ. ಏಕೆಂದರೆ, ನಿಮಗಾದ ನೋವು, ಅವಮಾನ ಬೇರೆಯವರಿಗೆ ಖುಷಿ ನೀಡಬಹುದು. ಅಲ್ಲದೇ, ಅದನ್ನ ಬೇರೆಯವರ ಬಳಿ ಹೇಳಿ ಅವರು ತಮಾಷೆ ತೆಗೆದುಕೊಳ್ಳಬಹುದು. ಹಾಗಾಗಿ ಬುದ್ಧಿವಂತರಾದವರು ಅವರಿಗಾದ ಅವಮಾನವನ್ನು ಯಾರಲ್ಲಿಯೂ ಹೇಳುವುದಿಲ್ಲ.

ಯಶಸ್ಸಿಗಾಗಿ ಪಡುತ್ತಿರುವ ಪ್ರಯತ್ನದ ಗುಟ್ಟು: ನೀವು ಜೀವನದಲ್ಲಿ ಏನನ್ನೋ ಸಾಧಿಸುವ ಗುರಿ ಹೊಂದಿರುತ್‌ತೀರಿ. ಉದಾಹರಣೆಗೆ ಬ್ಯುಸಿನೆಸ್ ಮಾಡಬೇಕು. ಅದರಲ್ಲಿ ಸಕ್ಸಸ್ ಆದಮೇಲೆ ಮನೆ, ಕಾರು ಖರೀದಿಸಬೇಕು. ನಂತರ ಮದುವೆಯಾಗಬೇಕು ಎಂಬ ಗುರಿ ನಿಮ್ಮದಾಗಿರುತ್ತದೆ. ಆ ವೇಳೆ ಯಾರಿಗೂ ತಿಳಿಸದಂತೆ ಬ್ಯುಸಿನೆಸ್ ಮಾಡಿ. ಬ್ಯುಸಿನಲ್ಲಿ ಬಂದ ಲಾಭದ ಬಗ್ಗೆ ಯಾರಲ್ಲಿಯೂ ಹೇಳಬೇಡಿ. ನಂತರ ಮನೆ, ಕಾರನ್ನು ಸೈಲೆಂಟ್ ಆಗಿಯೇ ಖರೀದಿಸಿ. ಮದುವೆ ಫಿಕ್ಸ್ ಆದ ಬಳಿಕ, ಮದುವೆಗೆ ಆಮಂತ್ರಿಸಿದಾಗಲೇ, ನಿಮ್ಮ ಸಕ್ಸಸ್‌ ಬಗ್ಗೆ ಜನರಿಗೆ ತಿಳಿಯಬೇಕು.

ಆರ್ಥಿಕ ನಷ್ಟ: ಮನುಷ್ಯ ಜೀವಿಸಲು ಎಲ್ಲಕ್ಕಿಂತ ಮುಖ್ಯವಾಗಿ ಬೇಕಾಗಿರುವುದೇ ಹಣ. ಹಣವಿಲ್ಲದಿದ್ದರೆ, ನಾಯಿಯೂ ಮೂಸುವುದಿಲ್ಲವೆಂದು ಹೇಳಲಾಗುತ್ತದೆ. ಇಂದಿನ ಕಾಲದಲ್ಲಂತೂ ಹಣವಿಲ್ಲದ ಮಕ್ಕಳನ್ನು ಕಂಡರೆ ಅಪ್ಪ ಅಮ್ಮನಿಗೂ ತಾತ್ಸಾರವೇ. ಯಾವ ಮಗುವಿನ ಬಳಿ ಹೆಚ್ಚು ಹಣವಿರುತ್ತದೆಯೋ, ತಂದೆ ತಾಯಿಯ ಪ್ರೀತಿ, ಕಾಳಜಿ, ಮಮತೆ ಎಲ್ಲವೂ ಆ ಮಗುವಿಗೇ ಹೆಚ್ಚು ಸಿಗುತ್ತದೆ. ಹಾಗಾಗಿ ಜೀವನದಲ್ಲಿ ಯಶಸ್ಸು ಗಳಿಸಿ, ಹಣ ಸಂಪಾದಿಸಿ. ನಿಮಗೂ ಆರ್ಥಿಕ ನಷ್ಟ ಸಂಭವಿಸಬಹುದು. ಆ ವೇಳೆ ಯಾರಿಗೂ ನಿಮ್ಮ ಬಳಿ ಹಣವಿಲ್ಲವೆಂದು ಹೇಳಲೇಬೇಡಿ. ಬೇಡದ ಖರ್ಚುಗಳಿಂದ ದೂರವಿದ್ದುಬಿಡಿ. ನಷ್ಟ ಸರಿಯಾಗುವವರೆಗೂ ಯಾರಲ್ಲಿಯೂ ಹಣ ಕೇಳದ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಿ.

About The Author