Recipe: ಬೇಕಾಗುವ ಸಾಮಗ್ರಿ: 1 ಕಪ್ ಹಸಿ ಬಟಾಣಿ, 1 ಈರುಳ್ಳಿ, 2 ಹಸಿಮೆಣಸು, ಸ್ವಲ್ಪ ಕೊತ್ತೊಂಬರಿ ಸೊಪ್ಪು, ಕಾಲು ಕಪ್ ಮೊಸರು, 4ರಿಂದ 5 ಸ್ಪೂನ್ ಎಣ್ಣೆ, ಬೆಳ್ಳುಳ್ಳಿ, ಗರಂ ಮಸಾಲೆ, ಅರಿಶಿನ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ, ಉಪ್ಪು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಈರುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ಬಳಿಕ ಮಿಕ್ಸಿ ಜಾರ್ಗೆ ಹುರಿದ ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಕಪ್ ಮೊಸರು, ಹಸಿಮೆಣಸು ಹಾಕಿ ರುಬ್ಬಿ, ಮಸಾಲೆ ತಯಾರಿಸಿ.
ಬಳಿಕ ಮತ್ತೆ ಪ್ಯಾನ್ ಬಿಸಿ ಮಾಡಿ, ಅದಕ್ಕೆ ಎಣ್ಣೆ, ಬೆಳ್ಳುಳ್ಳಿ ಹಾಕಿ ಚೆನ್ನಾಗಿ ಹುರಿಯಿರಿ. ನಂತರ, ಬಟಾಣಿ ಗರಂ ಮಸಾಲೆ, ಅರಿಶಿನ, ಖಾರದ ಪುಡಿ, ಜೀರಿಗೆ ಪುಡಿ, ಧನಿಯಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ರೆಡಿ ಮಾಡಿದ ಮಸಾಲೆ, ಉಪ್ಪು ಸೇರಿಸಿ, 5 ನಿಮಿಷ ಬೇಯಿಸಿದ್ರೆ ಗ್ರೇವಿ ರೆಡಿ. ಪೂರಿ, ಚಪಾತಿ ಜತೆ ಈ ಗ್ರೇವಿ ಉತ್ತಮ ಕಾಂಬಿನೇಷನ್.




