Ott Web series: ಭಯ್.. Paranormal Investigator ಗೌರವ್ ತಿವಾರಿಯ ಸಾವಿನ ರಹಸ್ಯದ ಸುತ್ತ ಸುತ್ತುವ ಕಥೆ..

Ott Web series: ಭಯ್.. ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಗೌರವ್ ತಿವಾರಿ ಅವರ ಸಾವಿನ ರಹಸ್ಯದ ಸುತ್ತ ಇರುವ ಕಥೆ. ಭಾರತದ ಪ್ರಸಿದ್ಧ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಎನ್ನಿಸಿಕ“ಂಡಿದ್ದ ಗೌರವ್, ಮುಂಚೆ ಪೈಲಟ್ ಆಗಿದ್ದವರು. ಆದರೆ ಅವರಲ್ಲಿ 1 ಕಾಣದ ಶಕ್ತಿ ಅಡಗಿದೆ ಎಂದು ಪದೇ ಪದೇ ಅನ್ನಿಸುತ್ತಿತ್ತಂತೆ. ಅಲ್ಲದೇ 1 ಬಾರಿ ವಿಮಾನ ಪತನವಾಗುವ ಹಂತಕ್ಕೆ ಬಂದಾಗ, ವಿಮಾನ ಪತನದಲ್ಲೇ ಮರಣವಾಗಿದ್ದ ಹಿರಿಯ ಪೈಲಟ್ ಗಾರವ್ ತಿವಾರಿ ಸಹಾಯಕ್ಕೆ ಬಂದಿದ್ದರಂತೆ.

ಇದೆಲ್ಲ ಆದ ಬಳಿಕ ಇರುವ ಪೈಲಟ್ ಕೆಲಸ ಬಿಟ್ಟು ಗೌರವ್ ಹಿಡಿದಿದ್ದು, ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಆಗುವ ದಾರಿ. ಹಲವು ವಿರೋಧ, ಅಡೆತಡೆ, ಎಲ್ಲದರ ಮಧ್ಯೆಯೂ ತಾನು ಆತ್ಮಗಳ ಬಗ್ಗೆ ತಿಳಿಯಲೇ ಬೇಕು ಎಂದು ನಿರ್ಧರಿಸಿ, ಗೌರವ್ ಭಾರತದ ಪ್ರಥಮ ಪ್ಯಾರಾನಾರ್ಮಲ್ ಇನ್ವೆಸ್ಟಿಗೇಟರ್ ಆಗಿಯೇ ಬಿಡುತ್ತಾರೆ.

ಲಕ್ಷ ಲಕ್ಷ ನಕಾರಾತ್ಮಕ ಶಕ್ತಿಗಳನ್ನು ಎದುರು ಹಾಕಿಕ“ಂಡು ಕೆಲಸ ಮಾಡುವ ಗೌರವ್‌, 1 ದಿನ ಸ್ನಾನಕ್ಕಾಗಿ ಬಾತ್‌ರೂಮ್‌ಗೆ ಹೋದಾಗ, ಅಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪುತ್ತಾರೆ. ಇದು ಯಾವ ಆ್ಯಂಗಲ್‌ನಿಂದ ನೋಡಿದ್ರೂ, ಕಾಲು ಜಾರಿ ಬಿದ್ದು ಆದ ದುರಂತ ಎಂದೇ ಎನ್ನಿಸಿದೆ. ಆದರೆ ಅವರ ಜತೆ ಕೆಲಸ ಮಾಡಿದವರು ಮಾತ್ರ, ಇದು ಪ್ರೇತದ ದೆಸೆಯಿಂದಲೇ ಬಂದ ಮೃತ್ಯು ಎಂದು ಹೇಳಿದ್ದಾರೆ. ಇದೆಲ್ಲ ಘಟನೆ, ಮನೆಯವರ ಹೇಳಿಕೆ, ಸಹೋದ್ಯೋಗಿಗಳ ಹೇಳಿಕೆ ಎಲ್ಲವನ್ನು ಪಡೆದು ಭಯ್ ಎಂಬ್ ವೆಬ್ ಸಿರೀಸ್ ನಿರ್ಮಿಸಲಾಗಿದೆ. ಅಮೇಜಾನ್ ಪ್ರೈಮ್‌ನಲ್ಲಿ ಈ ವೆಬ್‌ ಸೀರಿಸ್ ಲಭ್ಯವಿದೆ. ಧೈರ್ಯವಿದ್ದಲ್ಲಿ, ನೀವು ಸೂಕ್ಷ್ಮ ಸ್ವಭಾವದವರು ಆಗದೇ ಇದ್ದಲ್ಲಿ ನೋಡಬಹುದು.

About The Author