ಜ್ಯೋತಿಷ್ಯದಲ್ಲಿ ವಾಸ್ತುಶಾಸ್ತ್ರಕ್ಕೆ ತನ್ನದೇ ಆದ ಮಹತ್ವವಿದೆ. ಕೆಲವರು ವಾಸ್ತುವನ್ನ ನಂಬುವುದಿಲ್ಲ. ಆದ್ರೆ ಹಲವರ ಜೀವನದ ಒಳಿತಿಗೆ ಮತ್ತು ಕೆಡುಕಿಗೆ ಮನೆಯ ವಾಸ್ತು ಕಾರಣವಾಗಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇವತ್ತು ನಾವು ಮಾಹಿತಿ ನೀಡಲಿದ್ದೇವೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ಪೂರ್ವಕ್ಕೆ ಬಾಗಿಲಿದ್ದರೆ ಅತ್ಯುತ್ತಮ. ನಂದಿ ಬಾಗಿಲು ಅಂದರೆ ಉತ್ತರ ದಿಕ್ಕಿಗೆ ಬಾಗಿಲಿದ್ದರೆ ಉತ್ತಮ. ಪಶ್ಚಿಮಕ್ಕೆ ಬಾಗಿಲಿದ್ದರೆ ನಡೆಯುತ್ತದೆ. ಆದ್ರೆ ದಕ್ಷಿಣಕ್ಕೆ ಬಾಗಿಲಿದ್ದರೆ ಒಳಿತೋ ಕೆಡುಕೋ..? ಅಂಥವರು ಏನು ಮಾಡಬೇಕು ಅನ್ನೋ ಬಗ್ಗೆ ಇವತ್ತು ಸಂಪೂರ್ಣ ಮಾಹಿತಿ ತಿಳಿಸಿಕೊಡಲಿದ್ದೇವೆ.
ಹೆಚ್ಚಾಗಿ ಯಾರೂ ಕೂಡ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗುವುದು, ಊಟ ಮಾಡುವುದಿಲ್ಲ. ಆದ್ರೆ ದಕ್ಷಿಣ ಬಾಗಿಲಿರುವ ಮನೆಯಲ್ಲಿ ಉಳಿಯಬಹುದೇ ಎಂಬ ಪ್ರಶ್ನೆಗೆ ಉತ್ತರ ಉಳಿಯಬಹುದು. ಆದ್ರೆ ಬಾಡಿಗೆ ಮನೆಗೆ ಹೋಗುವುದಿದ್ದರೆ, ಮನೆ ಕಟ್ಟಿಸುವುದಿದ್ದರೆ, ಉತ್ತರ ಅಥವಾ ಪೂರ್ವ ದಿಕ್ಕಿಗೆ ಬಾಗಿಲಿರುವಂತೆ ನೋಡಿಕೊಳ್ಳುವುದು ಉತ್ತಮ.
ಯಾಕಂದ್ರೆ ದಕ್ಷಿಣ ದಿಕ್ಕನ್ನ ಯಮನ ದಿಕ್ಕು ಅಂತಾ ಹೇಳಲಾಗುತ್ತದೆ. ಸತ್ತವರನ್ನ ದಕ್ಷಿಣ ದಿಕ್ಕಿಗೆ ತಲೆ ಹಾಕಿ ಮಲಗಿಸಲಾಗುತ್ತದೆ. ಆದ್ದರಿಂದ ದಕ್ಷಿಣ ದಿಕ್ಕಿನಲ್ಲಿ ಮನೆ ಬಾಗಿಲಿರುವುದು ಅಷ್ಟು ಉತ್ತಮವಲ್ಲ ಎನ್ನಲಾಗಿದೆ. ದಕ್ಷಿಣ ದಿಕ್ಕಿನಲ್ಲಿ ಬಾಗಿಲಿಡದೇ ಬೇರೆ ದಾರಿಯಿಲ್ಲ ಎಂಬಂತಾದರೆ, ದಕ್ಷಿಣದಿಕ್ಕಿನಲ್ಲಿ ಪ್ರವೇಶ ದ್ವಾರವಿಟ್ಟು(ಗೇಟ್), ಪೂರ್ವ ದಿಕ್ಕಿನಲ್ಲಿ ಬಾಗಿಲಿದ್ದರೆ ಉತ್ತಮ. ಆದರೆ ಒಂದು ಮನೆಗೆ ಪೂರ್ವದಲ್ಲೊಂದು ದಕ್ಷಿಣದಲ್ಲೊಂದು ಬಾಗಿಲನ್ನ ಯಾವುದೇ ಕಾರಣಕ್ಕೂ ಇಡಬಾರದು.
ಇನ್ನು ನೀವೇನಾದರೂ ದಕ್ಷಿಣ ದಿಕ್ಕಿಗೆ ಬಾಗಿಲಿರುವ ಬಾಡಿಗೆ ಮನೆಗೆ ಹೋದರೆ, ಆ ಮನೆಯ ಸ್ವಚ್ಛತೆ ಕಡೆಗೆ ಗಮನ ಕೊಡಿ. ದಕ್ಷಿಣಾ ಮೂರ್ತಿಯ ಫೋಟೋವನ್ನ ತಂದು, ದೇವರ ಕೋಣೆಯಲ್ಲಿಟ್ಟು ಮಡಿಯಿಂದ ಪೂಜೆ ಮಾಡಿದರೆ ಉತ್ತಮ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.




