ಉತ್ತರ ಕರ್ನಾಟಕದಲ್ಲಿ ಅತೀ ಪ್ರಸಿದ್ಧವಾದ ದೇವಿ ದೇವಸ್ಥಾನ ಅಂದ್ರೆ ಸವದತ್ತಿ ಯಲ್ಲಮ್ಮನ ದೇವಸ್ಥಾನ. ಇದನ್ನ ಯಲ್ಲಮ್ಮನ ಗುಡ್ಡ ಅಂತಾನೂ ಕರೆಯುತ್ತಾರೆ. ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ.
ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ಬೆಳಗಾವಿ ಜಿಲ್ಲೆಯ ಸವದತ್ತಿಯಲ್ಲಿ ತಾಯಿ ರೇಣುಕಾ ದೇವಿಯನ್ನ ಆರಾಧಿಸಲಾಗುತ್ತದೆ. ಉಧೋ ಉಧೋ ಎಲ್ಲಮ್ಮ ಎನ್ನುವ ಮೂಲಕ ಈಕೆಗೆ ಜೈಕಾರ ಹಾಕಲಾಗುತ್ತದೆ. ಜಾತ್ರೆ ಇದ್ದ ಸಮಯದಲ್ಲಂತೂ ಇಲ್ಲಿ ಕಾಲಿಡಲು ಜಾಗವಿಲ್ಲದಷ್ಟು ಭಕ್ತರು ಬರುತ್ತಾರೆ. ಕರ್ನಾಟಕವಷ್ಟೇ ಅಲ್ಲದೇ, ಪಕ್ಕದ ರಾಜ್ಯ ಮಹಾರಾಷ್ಟ್ರದಿಂದ ಕೂಡ ಸವದತ್ತಿ ಎಲ್ಲಮ್ಮನ ದರ್ಶನಕ್ಕೆ ಭಕ್ತರು ಬರುತ್ತಾರೆ.
ಶಕ್ತಿದೇವತೆಯಾದ ಕಾಳಿ ಮಾತೆಯ ಅಂಶವಾದ ರೇಣುಕಾದೇವಿ ಪರಷುರಾಮನ ತಾಯಿ. ಮತ್ತು ಜಮದಗ್ನಿಯ ಪತ್ನಿ. ರೇಣುಕಾದೇವಿ ನದಿಯಿಂದ ಪ್ರತಿದಿನ ಜಮದಗ್ನಿಯ ಯಜ್ಞಕ್ಕಾಗಿ ಮರಳಿನ ಮಡಿಕೆಯಲ್ಲಿ ನೀರು ತರುತ್ತಾಳೆ. ಆದರೆ ಒಮ್ಮೆ ಗಂಧರ್ವರು ನದಿಯಲ್ಲಿ ಪ್ರೇಮ ಸಲ್ಲಾಪ ಮಾಡುತ್ತಿರುವುದನ್ನ ಕಂಡ ರೇಣುಕಾದೇವಿ, ಅಲ್ಲೇ ಮೈ ಮರೆತು ನಿಂತುಬಿಡುತ್ತಾಳೆ. ಆಗ ಮರಳಿನ ಮಡಿಕೆಯಿಂದ ನೀರು ಸೋರಿಹೋಗಿ, ಮರಳಿನ ಮಡಿಕೆ ಕರಗುತ್ತದೆ. ಇದಕ್ಕೆ ಸಿಟ್ಟಾದ ಜಮದಗ್ನಿಯು ರೇಣುಕಾದೇವಿಗೆ ತೊನ್ನಿನ ರೋಗ ಬರಲಿ ಎಂದು ಶಾಪ ನೀಡುತ್ತಾನೆ. ಶಾಪ ವಿಮೋಚನೆಗಾಗಿ ರೇಣುಕಾದೇವಿ ಸವದತ್ತಿಗೆ ಬಂದು ಇಬ್ಬರು ಋಷಿಗಳ ಸಹಾಯದಿಂದ ಮತ್ತೆ ಮೊದಲಿನಂತಾಗಿ, ಜಮದಗ್ನಿಯ ಬಳಿ ಹೋಗುತ್ತಾಳೆ.
ಆದರೂ ಜಮದಗ್ನಿಯ ಕೋಪ ಕಡಿಮೆಯಾಗುವುದಿಲ್ಲ. ಆತ ತನ್ನ ಮಕ್ಕಳಿಗೆ ತಾಯಿಯ ರುಂಡ ಕತ್ತರಿಸಲು ಹೇಳುತ್ತಾನೆ. ಆದರೆ ಮಕ್ಕಳು ಇದಕ್ಕೆ ಒಪ್ಪದಿದ್ದಾಗ, ಅವರನ್ನ ಭಸ್ಮ ಮಾಡುತ್ತಾನೆ. ಮತ್ತು ಪರಶುರಾಮ ತಾಯಿಯ ರುಂಡ ಕತ್ತರಿಸುತ್ತಾನೆ. ನಂತರ ಜಮದಗ್ನಿ ಏನು ವರ ಬೇಕು ಎಂದು ಕೇಳಿದಾಗ, ನನ್ನ ಸಹೋದರರನ್ನು ಮತ್ತು ತಾಯಿಯನ್ನು ಬದುಕಿಸಿ ಕೊಡು, ಮತ್ತು ಸಿಟ್ಟು ಕಡಿಮೆ ಮಾಡಬೇಕು ಎಂದು ಹೇಳುತ್ತಾನೆ. ಪರಷುರಾಮನ ಮಾತಿನಂತೆ, ಸಹೋದದರು ಮತ್ತು ತಾಯಿಯನ್ನ ಬದುಕಿಸಿಕೊಡುತ್ತಾನೆ. ನಂತರ ರೇಣುಕಾದೇವಿ ಭಕ್ತರ ಕಷ್ಟ ಪರಿಹರಿಸಲು ಸವದತ್ತಿಯ ಜೋಗುಳದ ಬಾವಿಯ ಬಳಿ ನೆಲೆಸಿದ್ದಾಳೆಂದು ಹೇಳಲಾಗುತ್ತದೆ.

ಹುಲಿಗೆಮ್ಮ ದೇವಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ರಾಮ್
ದೂರವಾಣಿ ಸಂಖ್ಯೆ 9980988841
ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ ಕಾಶಿಯ ಅಘೋರಿ ನಾಗಸಾಧುಗಳ ಚೌಡಿ ಪೂಜಾ ಶಕ್ತಿಯಿಂದ ಕೇವಲ 8 ಗಂಟೆಗಳಲ್ಲಿ ಫೋನಿನ ಮುಖಾಂತರ ಪರಿಹಾರ ನೀಡಲಾಗುತ್ತದೆ.




