ಪ್ರತ್ಯಂಗಿರಾ ಹೋಮ ಯಾಕೆ ಮಾಡಿಸುತ್ತಾರೆ..? ಹೇಗೆ ಮಾಡುತ್ತಾರೆ..?

ಸಾಮಾನ್ಯವಾಗಿ ಚುನಾವಣೆ ಹತ್ತಿರ ಬಂದಾಗ ರಾಜಕಾರಣಿಗಳು ಕೆಲ ಹೋಮ ಹವನವನ್ನ ಮಾಡಿಸುವುದನ್ನ ನೋಡಿರ್ತೀವಿ. ಅಂಥ ಹೋಮಗಳಲ್ಲಿ ಪ್ರತ್ಯಂಗೀರಾ ಹೋಮ ಕೂಡ ಒಂದು. ಯಾಕೆ ಈ ಹೋಮವನ್ನ ಮಾಡಿಸುತ್ತಾರೆ. ಈ ಹೋಮದ ಮಹತ್ವವೇನು ಅನ್ನೋದನ್ನ ತಿಳಿಯೋಣ.
ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಆದಿ ಪರಾಶಕ್ತಿಯ ಒಂದು ರೂಪವಾಗಿರುವ ಪ್ರತ್ಯಂಗಿರಾ ದೇವಿ, ಶತ್ರು ಸಂಹಾರಕ್ಕಾಗಿಯೇ ಹುಟ್ಟಿಬಂದವಳು. ಪ್ರತ್ಯಂಗಿರಾ ಮಾತೆ ವಿಷ್ಣು ಮತ್ತು ಶಿವ , ಇವರಿಬ್ಬರ ಅಂಶವನ್ನ ಹೊಂದಿದ ದೇವಿಯಾಗಿದ್ದಾಳೆ. ಸಿಂಹರೂಪಿಣಿಯಾಗಿರುವ ಈಕೆ, ಸಿಂಹದ ಮುಖ ಮತ್ತು ಸ್ತ್ರೀ ದೇಹವನ್ನ ಹೊಂದಿದ್ದಾಳೆ. ಸಿಂಹ ಈಕೆಯ ವಾಹನವಾಗಿದೆ.

ಈ ಹೋಮವನ್ನ ಮಾಡುವುದರಿಂದ ಶತ್ರುಭಯ, ಜೀವ ಭಯ ಹೋಗುತ್ತದೆ. ಅಲ್ಲದೇ, ನಾವು ಮಾಡುವ ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಆರೋಗ್ಯ, ಧನ ಲಾಭವಾಗುತ್ತದೆ. ಆದ್ದರಿಂದಲೇ ರಾಜಕಾರಣಿಗಳು ಚುನಾವಣೆ ಸಮೀಪಿಸಿದಾಗ ಪ್ರತ್ಯಂಗೀರಾ ಹೋಮ ಮಾಡಿಸುತ್ತಾರೆ. ಹಿಂದಿನ ಕಾಲದಲ್ಲಿ ಯುದ್ಧಕ್ಕೆ ಹೊರಡುವ ಮೊದಲು ರಾಜ ಮಹಾರಜರೂ ಕೂಡ ಈ ಯಾಗ ಮಡಿಸುತ್ತಿದ್ದರು.

ಇನ್ನು ಎಲ್ಲ ದೇವತೆಗಳನ್ನ ಪೂಜಿಸಿದ ಹಾಗೆ, ಇತರ ದೇವತೆಗಳಿಗೆ ಮಾಡಿದ ಹಾಗೆ ಹೋಮ ಹವನಗಳನ್ನ ಮಾಡಿದ ಹಾಗೆ ಪ್ರತ್ಯಂಗಿರಾ ದೇವಿಗೆ ಮಾಡಲಾಗುವುದಿಲ್ಲ. ಪ್ರತ್ಯಂಗಿರಾ ಹೋಮವನ್ನ ಅಮವಾಸ್ಯೆ, ಹುಣ್ಣಿಮೆ, ಅಷ್ಟಮಿ ಮತ್ತು ಗ್ರಹಣ ಕಾಲದಲ್ಲಿ ಮಾಡಲಾಗುತ್ತದೆ. ಹೌದು, ಗ್ರಹಣ ಕಾಲದಲ್ಲಿ ದೇವಸ್ಥಾನಗಳನ್ನ ಮುಚ್ಚಲಾಗುತ್ತದೆ. ಪೂಜೆ ಪುನಸ್ಕಾರವನ್ನ ನಿಷೇಧಿಸಲಾಗುತ್ತದೆ. ಆದ್ರೆ ಪ್ರತ್ಯಂಗೀರಾ ದೇವಿ ದೇವಸ್ಥಾನ ಮಾತ್ರ ತೆರೆದಿರುತ್ತದೆ. ಇವಳ ಪೂಜೆ ಮಾತ್ರ ಮಾಡಲಾಗುತ್ತದೆ. ಪ್ರತ್ಯಂಗಿರಾ ಹೋಮ ಕೂಡ ಗ್ರಹಣ ಕಾಲದಲ್ಲಿ ಮಾಡಿದರೆ, ಸಂಪೂರ್ಣ ಫಲ ಪ್ರಾಪ್ತಿಯಾಗುತ್ತದೆ.

ಸಾಮಾನ್ಯವಾಗಿ ಹೋಮ ಹವನ ಮಾಡುವಾಗ ತುಪ್ಪ, ಹಣ್ಣು, ತೆಂಗಿನಕಾಯಿ, ಮೋದಕ, ಪ್ರಸಾದ ಇತ್ಯಾದಿಯನ್ನ ನಾವು ಬಳಸುತ್ತೇವೆ. ಆದರೆ, ಪ್ರತ್ಯಂಗಿರಾ ಹೋಮ ಮಾಡುವ 8 ರೀತಿಯ ಎಣ್ಣೆ ಬಳಸುತ್ತಾರೆ. ಇದರ ಜೊತೆಗೆ ಕೆಂಪು ಮೆಣಸನ್ನ ಹೋಮಕ್ಕೆ ಹಾಕಲಾಗುತ್ತದೆ. ಪೂಜೆಗೆ ತಕ್ಕ ಸಮಯ, ಮುಹೂರ್ತದಲ್ಲಿ ಹೋಮ ಮಾಡಿಸಿದ್ರೆ, ನಾವು ಕೆಜಿಗಟ್ಟಲೇ ಮೆಣಸಿನಕಾಯಿಯನ್ನ ಹೋಮಕ್ಕೆ ಹಾಕಿದರೂ ಅದರ ಘಾಟು ಬರುವುದಿಲ್ಲ.

ಇನ್ನು ಈ ಹೋಮ ಮಾಡಿಸುವುದರಿಂದ, ಯಾರಾದರೂ ನಿಮಗೆ ಮಾಟ ಮಂತ್ರ ಮಾಡಿಸಿದ್ದಲ್ಲಿ, ನಿಮ್ಮ ನಾಶಕ್ಕಾಗಿ ಹೊಂಚು ಹಾಕುತ್ತಿದ್ದಲ್ಲಿ, ನಿಮ್ಮ ಸೋಲಿಗಾಗಿ ಕಾಯುತ್ತಿದ್ದಲ್ಲಿ, ಆ ಎಲ್ಲ ಅವಕಾಶಗಳನ್ನ ತಳ್ಳಿ ಹಾಕಿ, ದೇವಿ ನಿಮ್ಮನ್ನು ದುಷ್ಟರಿಂದ ಕಾಪಾಡುತ್ತಾಳೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author