ವೈವಾಹಿಕ ಸಮಸ್ಯೆ, ವಿವಾಹ ವಿಳಂಬ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕೆ ಈ ದೇವಿಯನ್ನ ಪೂಜಿಸಿ…

ನವರಾತ್ರಿಯ ಆರನೇಯ ದಿನಕ್ಕೆ ಕಾಲಿರಿಸಿದ್ದೇವೆ. ಇಂದು ಕಾತ್ಯಾಯಿನಿ ದೇವಿಯ ಆರಾಧನೆ ಮಾಡಲಾಗುತ್ತೆದೆ. ದುರ್ಗೆಯ ಆರನೇ ಅವತಾರವೇ ಕಾತ್ಯಾಯಿನಿ. ಈ ದೇವಿಯ ಬಗ್ಗೆ ಮತ್ತಷ್ಟು ಮಾಹಿತಿಯನ್ನ ಪಡೆಯೋಣ, ಈ ದಿನ ಯಾವ ಸ್ತುತಿ ಜಪಿಸಬೇಕು ಅನ್ನೋದನ್ನ ಕೂಡ ತಿಳಿಯೋಣ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಶಕ್ತಿ ದೇವತೆಗಳೆಲ್ಲ ಪಾರ್ವತಿ ಅಂಶಗಳು ಅನ್ನೋದು ಎಲ್ಲರಿಗೂ ಗೊತ್ತಿದೆ. ಅಂತೆಯೇ ಕಾತ್ಯಾಯಿನಿ ದೇವಿ ಕೂಡ ಪಾರ್ವತಿಯ ಅಂಶ. ಈಕೆಗೆ ಉಮಾ ಮಹೇಶ್ವರಿ, ಈಶ್ವರಿ, ಗೌರಿ ಹೀಗೆ ಇತ್ಯಾದಿ ಹೆಸರುಗಳಿದೆ. ಉತ್ತಮ ಪತಿ ಸಿಗಬೇಕಂದ್ರೆ ಈ ದೇವಿಯನ್ನ ಆರಾಧಿಸಬೇಕು ಅಂತಾ ಹೇಳಲಾಗುತ್ತದೆ. ರುಕ್ಮಿಣಿ ದೇವಿ, ಸೀತಾ ದೇವಿ ಕೂಡ ಉತ್ತಮ ಪತಿ ಸಿಗಲಿ ಎಂದು ಕಾತ್ಯಾಯಿನಿ ದೇವಿಯನ್ನ ಆರಾಧಿಸಿದ್ದರಂತೆ.

ಇನ್ನು ಚಾಮುಂಡಿ ಬೆಟ್ಟದ ಕಥೆ ಹೇಳುವಾಗ ನಾವು ನಿಮಗೆ ತಾಯಿ ಚಾಮುಂಡಿ ಮಹೀಷನನ್ನ ಹೇಗೆ ಮರ್ದನ ಮಾಡಿದಳು ಅನ್ನೋ ಬಗ್ಗೆ ಹೇಳಿದ್ವಿ.. ತ್ರಿಮೂರ್ತಿಗಳ ಸಹಾಯದಿಂದ ಉದ್ಭವವಾಗಿ, ಎಲ್ಲರಿಂದ ಪಡೆದ ಆಯುಧದಿಂದ 9 ದಿನಗಳ ಕಾಲ ಮಹೀಷನೊಂದಿಗೆ ಯುದ್ಧ ಮಾಡಿ ಕೊನೆಗೆ ಹತ್ತನೇ ದಿನ ಗೆದ್ದಳು. ಕಾತ್ಯಾಯಿನಿ ದೇವಿ ಬಗ್ಗೆಯೂ ಇದೇ ಕಥೆ ಇದೆ.

ಸಿಂಹ ವಾಹಿನಿಯಾಗಿರುವ ಈಕೆ ಹದಿನೆಂಟು ಭುಜವನ್ನ ಹೊಂದಿದ್ದಾಳೆ. ಕೆಂಪು ಮಿಶ್ರಿತ ಕೇಸರಿ ಬಣ್ಣದ ಸೀರೆ ಈಕೆಯ ದಿರಿಸು. ಮೂರು ಕಣ್ಣುಗಳುಳ್ಳ ಈಕೆ, ತನ್ನ ಕೈಗಳಲ್ಲಿ ಎಲ್ಲರಿಂದ ಪಡೆಯಲ್ಪಟ್ಟ ಆಯುಧವನ್ನ ಹಿಡಿದಿದ್ದಾಳೆ. ಶಿವನಿಂದ ಪಡೆದ ತ್ರಿಶೂಲ, ವಿಷ್ಣುವಿನಿಂದ ಪಡೆದ ಸುದರ್ಶನ ಚಕ್ರ, ಇಂದ್ರನಿಂದ ಪಡೆದ ವಜ್ರಾಯುಧ, ವರುಣನಿಂದ ಶಂಖವನ್ನ, ಕುಬೇರನಿಂದ ಗದೆಯನ್ನ, ಬ್ರಹ್ಮನಿಂದ ಜಪಮಾಲೆ ಮತ್ತು ಕಮಂಡಲ, ಅಗ್ನಿ ಮತ್ತು ವಾಯುವಿನಿಂದ ಬಿಲ್ಲನ್ನ, ಸೂರ್ಯನಿಂದ ಬಾಣಗಳನ್ನ, ವಿಶ್ವಕರ್ಮನಿಂದ ಕೊಡಲಿ, ಕಾಳನಿಂದ ಕತ್ತಿ ಮತ್ತು ಗುರಾಣಿಯನ್ನ ಪಡೆದು ಇದೇ ಆಯುಧಗಳನ್ನ ತನ್ನ ಹದಿನೆಂಟು ಕೈಯಲ್ಲಿರಿಸಿಕೊಂಡಿದ್ದಾಳೆ. ಮತ್ತೊಂದು ಕೈಯಲ್ಲಿ ಕಮಲ ಹಿಡಿದರೆ, ಒಂದು ಕೈಯಲ್ಲಿ ಭಕ್ತರನ್ನ ಆಶೀರ್ವದಿಸುತ್ತ, ಇನ್ನೊಂದು ಕೈಯಲ್ಲಿ ಯೋಗ ಮುದ್ರೆ ಹಿಡಿದಿದ್ದಾಳೆ.

ಈ ದಿನ ಹೇಳಬೇಕಾದ ಸ್ತೋತ್ರವೆಂದರೆ..
ಯಾ ದೇವಿ ಸರ್ವಭೂತೇಷು ಮಾ ಕಾತ್ಯಾಯಿನಿ ರೂಪೇಣ ಸಂಸ್ಥಿತಾ
ನಮಸ್ತಸ್ಯೆ ನಮಸ್ತಸ್ಯೆ ನಮಸ್ತಸ್ಯೆ ನಮೋ ನಮಃ

ಈ ಸ್ತೋತ್ರವನ್ನ ಇಂದು 108 ಬಾರಿ ಜಪಿಸಬೇಕು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author