ಸ್ವರ್ಣ ಭೈರವ ಗಾಯತ್ರಿ ಮಂತ್ರ ಪಠಿಸಿ, ಹಣಕಾಸಿನ ಸಮಸ್ಯೆಯಿಂದ ಮುಕ್ತಿ ಪಡೆಯಿರಿ..

ಶಿವನ ಹಲವಾರು ಅವತಾರಗಳನ್ನ ನಾವು ನೋಡಿದ್ದೇವೆ. ಮೃತ್ಯುಂಜಯ, ಕಾಲ ಭೈರವ, ನೀಲಕಂಠ ಇತ್ಯಾದಿ ನಾಮಗಳಿಂದ ಕರೆಯಲ್ಪಡುವ ಶಿವನ ಇನ್ನೊಂದು ರೂಪವೇ ಸ್ವರ್ಣ ಭೈರವ ರೂಪ. ಯಾಕೆ ಶಿವ ಸ್ವರ್ಣ ಭೈರವ ರೂಪ ತಾಳಿದ..? ಈತನನ್ನು ಪೂಜಿಸಿದರೆ ಏನು ಲಾಭ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816

ಸ್ವರ್ಣ ಭೈರವ ಅಂದ್ರೆ ಶಾಂತ ಸ್ವರೂಪಿಯಾದ ಶಿವ, ಕುಬೇರ ಮತ್ತು ಲಕ್ಷ್ಮೀಗೆ ಸ್ವರ್ಣಗಳನ್ನ ಧಾರೆ ಎರೆಯುವವನು. ಷಟ್ಭುಜಗಳನ್ನ ಹೊಂದಿರುವ ಸ್ವರ್ಣ ಭೈರವ, ಅತೀ ಸುಂದರನಾಗಿ ಕಾಣುವುದು ಈ ರೂಪದಲ್ಲೇ. ಸುಂದರವಾದ ಉಡುಗೆ ಉಟ್ಟ ಶಿವ, ಭಕ್ತರೆಡೆಗೆ ತನ್ನ ನಾಲ್ಕು ಕೈಗಳಿಂದ ಚಿನ್ನದ ಸುರಿಮಳೆ ಸುರಿಸುತ್ತಾನೆ. ಶಿವನ ಕೃಪೆಯಿಂದ ಶ್ರೀಮಂತನಾಗಿದ್ದ ಕುಬೇರ, ಶಿವನ ಪರಮ ಭಕ್ತನಾಗಿದ್ದಾನೆ.

ಸೋಮವಾರ ಅಥವಾ ಶುಕ್ರವಾರದಂದು, ಬ್ರಾಹ್ಮಿ ಮುಹೂರ್ತದಲ್ಲಿ ಶುಚಿರ್ಭೂತರಾಗಿ, ಸ್ವರ್ಣ ಭೈರವ ಮಂತ್ರ ಪಠಿಸಿದರೆ, ಕುಬೇರನಂಥ ಶ್ರೀಮಂತಿಗೆ ಒಲಿದು ಬರುತ್ತದೆ. ಈ ಮಂತ್ರವನ್ನ 3, 9, 108 ಬಾರಿ ಅಥವಾ 1008 ಬಾರಿ ಜಪಿಸಬಹುದು. ನಂತರ ನಿಮ್ಮ ಕೈಲಾದ ನೈವೇದ್ಯವನ್ನಿರಿಸಿ, ಬಿಲ್ವಪತ್ರೆ ಅರ್ಪಿಸಿ, ದೀಪ ಹಚ್ಚಿ, ದೇವರಿಗೆ ಆರತಿ ಬೆಳಗಿ ಪೂಜೆ ಮಾಡಬೇಕು. ಆ ಮಂತ್ರ ಹೀಗಿದೆ..

ಓಂ ಸ್ವರ್ಣಭೈರವಾಯ ವಿದ್ಮಹೇ, ಸ್ವರ್ಣ ಹಸ್ತಾಯ ಧೀಮಹಿ
ತನ್ನೋ ಭೈರವ ಪ್ರಚೋದಯಾತ್

ಇದು ಸ್ವರ್ಣ ಗಾಯತ್ರಿ ಮಂತ್ರವಾಗಿದೆ. ಮಂತ್ರ ಪಠಿಸಿ, ಪೂಜೆ ಮುಗಿಸಿದ ಬಳಿಕ, ಅನ್ನ ಆಹಾರವನ್ನ ಮಾಡಿ, ಅದನ್ನು ಕೂಡ ದೇವರಿಗಿಟ್ಟು, ಅದರಲ್ಲಿ ಸ್ವಲ್ಪ ಅನ್ನಾಹಾರವನ್ನ ನಾಯಿಗೆ ಕೊಡಬೇಕು. ಯಾಕಂದ್ರೆ, ಭೈರವ ನಾಯಿಯ ರೂಪದಲ್ಲಿ ಬಂದು ಆಹಾರ ಸ್ವೀಕರಿಸುತ್ತಾನೆ ಅನ್ನೋ ನಂಬಿಕೆ ಇದೆ.

ಇನ್ನು ಈ ಮಂತ್ರವನ್ನ ಜಪಿಸಿದ ದಿನ ಮದ್ಯ ಮಾಂಸ ಸೇವನೆ ಮಾಡಬಾರದು. ಸೂತಕದ ದಿನಗಳಲ್ಲಿ ಈ ಮಂತ್ರ ಪಠಿಸಬಾರದು. ಮುಟ್ಟಾದ ಸಮಯದಲ್ಲಿ ಹೆಣ್ಣು ಮಕ್ಕಳು ಈ ಮಂತ್ರವನ್ನ ಪಠಿಸಬಾರದು.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ರಿö್ತÃ-ಪುರುಷ ವಶೀಕರಣ, ಮಾಟ-ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ.
ಫೋನಿನ ಮೂಲಕ ಪರಿಹಾರ

About The Author