ಸಖತ್ ಟಿಆರ್ಪಿ ಗಿಟ್ಟಿಸೋ ರಿಯಾಲಿಟಿ ಶೋಗಳಲ್ಲಿ ಬಿಗ್ಬಾಸ್ ಶೋ ಕೂಡಾ ಒಂದು. ನಾಳೆ ಏನಾಗ್ಬಹುದು..?ಯಾರು ಶೋನಿಂದ ಹೊರಗೆ ಹೋಗ್ತಾರೆ..? ಏನ್ ಟಾಸ್ಕ್ ಇರತ್ತೆ ಅನ್ನೋ ಬಗ್ಗೆ ಅಲ್ಲಿರೋ ಸ್ಪರ್ಧಿಗಳಿಗಿಂತ ವೀಕ್ಷಕರಿಗೇ ಕುತೂಹಲ ಜಾಸ್ತಿ.
2020ರಲ್ಲಿ ಬಿಗ್ಬಾಸ್ ಶುರುವಾಗಬೇಕಿತ್ತು. ಕೊರೊನಾ ಭೀತಿಯಿಂದ ಬಿಗ್ಬಾಸ್ ಶುರು ಮಾಡಿರಲಿಲ್ಲ. ಆದ್ರೆ ತೆಲುಗು, ತಮಿಳ್ ಚಾನೆಲ್ಗಳಲ್ಲಿ ಬಿಗ್ಬಾಸ್ ಶುರುವಾಗಿ, ಉತ್ತಮ ರೆಸ್ಪಾನ್ಸ್ ಪಡೆದುಕೊಳ್ತಿದೆ. ಹಾಗಾಗಿ 2021ರಲ್ಲಿ ಬಿಗ್ಬಾಸ್ ಶುರು ಮಾಡಲೇಬೇಕು ಅಂತಾ ಪರಮೇಶ್ ಗುಂಡಕಲ್ ನಿರ್ಧರಿಸಿದ್ದಾರೆ. ಈ ಬಗ್ಗೆ ಕಿಚ್ಚ ಸುದೀಪ್ ಜೊತೆಗೂ ಮಾತನಾಡಿದ್ದಾರೆ.
ಇನ್ನು ಇತ್ತ ಅಭಿಮಾನಿಗಳು ತಮಗೇ ತಾವೇ ಬಿಗ್ಬಾಸ್ ಮನೆಗೆ ಈ ಬಾರಿ ಹೋಗುವ ಕಂಟೆಸ್ಟೆಂಟ್ಸ್ ಬಗ್ಗೆ ಇಮ್ಯಾಜಿನೇಷನ್ ಮಾಡೋಕ್ಕೆ ಶುರು ಮಾಡಿದ್ದಾರೆ. ಇನ್ಸ್ಟಾ, ಫೇಸ್ಬುಕ್ನಲ್ಲಿ ಈ ಬಗ್ಗೆ ಒಂದು ಫೋಟೋ ಟ್ರೋಲ್ ಆಗಿದ್ದು, ಆ್ಯಂಕರ್ ರಾಧಾ ಹಿರೇಗೌಡರ್, ದಿವ್ಯಾ, ಟಿಕ್ಟಾಕ್ ರಾಣಿಯರಾದ, ಸೋನುಗೌಡ, ಬಿಂದು ಗೌಡ, ಡ್ರೋಣ್ ಪ್ರತಾಪ್, ನಿತ್ಯಾನಂದ, ನಟ ಅನಿರುದ್ಧ ಸೇರಿ ಹಲವರ ಫೋಟೋವನ್ನ ಬಿಗ್ಬಾಸ್ ಪೋಸ್ಟರ್ಗೆ ಅಂಟಿಸಿ ಟ್ರೋಲ್ ಮಾಡಿದ್ದಾರೆ.
ಇನ್ನು ಇದನ್ನೇ ನಿಜ ಎಂದು ನಂಬಿರುವ ಕೆಲವರು, ಆಕ್ರೋಶ, ಖುಷಿ, ದುಃಖವನ್ನ ಕಮೆಂಟ್ ಮೂಲಕ ತೋರಿಸಿಕೊಂಡಿದ್ದಾರೆ. ಸೋನುಗೌಡ, ಬಿಂದುಗೌಡ, ಡ್ರೋಣ್ ಪ್ರತಾಪ್ ಬಿಗ್ಬಾಸ್ ಮನೆಗೆ ಹೋಗ್ತಿರೋದಕ್ಕೆ, ಕೆಲವರು ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ಅನಿರುದ್ಧ ಸರ್ ಬಿಗ್ಬಾಸ್ ಮನೆಗೆ ಹೋದ್ರೆ, ಅನು ಸಿರಿಮನೆ ಒಂಟಿಯಾಗಿ ಬಿಡ್ತಾಳೆ ಅಂತಾ ಕೆಲ ಧಾರಾವಾಹಿ ಪ್ರೇಮಿಗಳು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಫೋಟೋ ಸದ್ಯ ದೊಡ್ಡ ಚರ್ಚೆ ಹುಟ್ಟುಹಾಕಿರೋದಂತೂ ನಿಜ.
ಬಿಗ್ಬಾಸ್ ಸ್ಪರ್ಧಿಗಳನ್ನ ಈಗಾಗಲೇ ಆಯ್ಕೆ ಮಾಡಲಾಗಿದೆ. ಆದ್ರೆ ಅದನ್ನ ಎಲ್ಲೂ ರಿವೀಲ್ ಮಾಡಲಾಗಿಲ್ಲ. ಬಿಗ್ಬಾಸ್ ಶುರುವಾಗುವ ದಿನವೇ, ಎಲ್ಲರಿಗೂ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ.