Friday, November 14, 2025

Latest Posts

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಗೆ ಮತ್ತೊಂದು ಗುಡ್ ನ್ಯೂಸ್…!

- Advertisement -

ನ್ಯಾಷನಲ್ ಸ್ಟಾರ್ ಯಶ್ ನಟಿಸ್ತಿರೋ ಮೆಗಾ ಮೂವೀ ಕೆಜಿಎಫ್-2 ಅಪ್ ಡೇಟ್ ಗಾಗಿ ರಾಕಿ ಭಕ್ತಗಣ ಕಾತುರ ಆತುರದಿಂದ ಕಾಯ್ತಿದೆ. ಇಷ್ಟರಲ್ಲಿ ಎಲ್ಲವೂ ಅಂದುಕೊಂಡಂತೆ ಹಾಗಿದ್ರೆ ಕೆಜಿಎಫ್-2 ತೆರೆಮೇಲೆ ಅಬ್ಬರಿಸಿ, ಬೊಬ್ಬಿರಿ ಬೇಕಿತ್ತು. ಆದ್ರೆ ಕೊರೋನಾ ಲಾಕ್ ಡೌನ್ ಎಲ್ಲದಕ್ಕೂ ಬ್ರೇಕ್ ಹಾಕಿದೆ. ಹಾಗಂತ ಸಿನಿಮಾ ತಂಡ ಸುಮ್ಮನೇ ಕುಳಿತಿಲ್ಲ. ರಾಕಿಭಾಯ್ ಫ್ಯಾನ್ಸ್ ತಣಿಸೋದಿಕ್ಕೆ ಮುಂದಾಗಿದೆ.

ಕೆಜಿಎಫ್-2 ಸಿನಿಮಾದ ಟೀಸರ್ ಇಲ್ಲ ಟ್ರೇಲರ್ ಯಾವುದು ಇಲ್ಲಿಯವರೆಗೂ ರಿಲೀಸ್ ಆಗಿಲ್ಲ. ಯಶ್ ಬರ್ತ್ ಡೇಗೆ ಟೀಸರ್ ಬರುತ್ತೇ ಅಂತಾ ಕಾಯ್ತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು. ಏನಾದ್ರೂ ಅಪ್ ಡೇಟ್ ಕೊಡು ಗುರು ಅಂತಾ ನಿರ್ದೇಶಕ ಪ್ರಶಾಂತ್ ನೀಲ್ ಗೆ ರಾಕಿ ಫ್ಯಾನ್ಸ್ ಬೇಡಿಕೆ ಇಟ್ಟಿದ್ರು. ಅಭಿಮಾನಿಗಳ ಆಸೆಯಂತೆ ಕೆಜಿಎಫ್-2ನಿಂದ ಮೆಗಾ ಅಪ್ ಡೇಟ್ ಸಿಕ್ತಿದೆ.

 ಡಿಸೆಂಬರ್-21ಕ್ಕೆ ಟೀಸರ್ ಅಥವಾ ಟ್ರೇಲರ್ ರಿಲೀಸ್..?

ಕೆಜಿಎಫ್-2 ಸಿನಿಮಾದ ಶೂಟಿಂಗ್ ಕಂಪ್ಲೀಟ್ ಹಂತ ತಲುಪಿದೆ. ಸದ್ಯದಲ್ಲಿಯೇ ಕುಂಬಳಕಾಯಿ ಹೊಡೆಯಲಿರೋ ಸಿನಿಮಾ ತಂಡ ಇದೇ ತಿಂಗಳ 21ರಂದು ಹೊಸ ಅಪ್ ಡೇಟ್ ನೀಡಲಿದೆ. ಸ್ವತಃ ಪ್ರಶಾಂತ್ ನೀಲ್, ಡಿಸೆಂಬರ್ 21ಕ್ಕೆ ಅಭಿಮಾನಿಗಳಿಗೆ ಹೊಸ ವರ್ಷದ ಟ್ರಿಟ್ ಕೊಡೋದಾಗಿ ಹೇಳಿದ್ದಾರೆ.

ಡಿಸೆಂಬರ್ 21ಕ್ಕೆ ಇಡೀ ಕೆಜಿಎಫ್ ಸಿನಿಮಾ ತಂಡಕ್ಕೆ ಸ್ಪೆಷಲ್ ಡೇ. ಯಾಕಂದ್ರೆ ಕೆಜಿಎಫ್-1 ರಿಲೀಸ್ ಆಗಿದ್ದು ಎರಡು ವರ್ಷಗಳ ಇದೇ ಡಿಸೆಂಬರ್ 21ರಂದು. ಆ ದಿನ ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿ ಇತಿಹಾಸ ಸೃಷ್ಟಿಸಿತ್ತು ಕೆಜಿಎಫ್. ಯಾರು ನಿರೀಕ್ಷೆ ಮಾಡಲಾಗದ ದಾಖಲೆ ಬರೆದಿತ್ತು. ಹೀಗಾಗಿ ಆ ದಿನ ಸ್ಪೆಷಲ್ ಅಪ್ ಡೇಟ್ ನೀಡಲಿದೆ ಚಿತ್ರತಂಡ. ಸದ್ಯ ಚಿತ್ರತಂಡದ ಹೊಸ ಅಪ್ ಡೇಟ್ ಟೀಸರ್ ಇಲ್ಲ ಟ್ರೇಲರ್ ಅಂತಾ ಅಭಿಮಾನಿಗಳು ಲೆಕ್ಕಾಚಾರ ಆಗ್ತಿದ್ದಾರೆ.

- Advertisement -

Latest Posts

Don't Miss