ಶ್ರೀಕೃಷ್ಣನ ಅಷ್ಟಪತ್ನಿಯರ ಬಗ್ಗೆ ನಿಮಗೆಷ್ಟು ಗೊತ್ತು..?

ರಾಧಾ ಕೃಷ್ಣರ ಪ್ರೀತಿಯ ಬಗ್ಗೆ ಎಲ್ಲರಿಗೂ ಗೊತ್ತು. ಆದ್ರೆ ಕೃಷ್ಣ ರಾಧೆಯನ್ನ ಎಷ್ಟೇ ಇಷ್ಟಪಟ್ಟರೂ ಆಕೆಯನ್ನ ವಿವಾಹವಾಗಲಾಗಲಿಲ್ಲ. ಆದ್ರೆ ಶ್ರೀಕೃಷ್ಣನಿಗೆ 16, 108 ಹೆಂಡತಿಯರಿದ್ದರು. ಆದ್ರೆ ಕೃಷ್ಣನಿಗೆ 8 ಪತ್ನಿಯರ ಬಗ್ಗೆ ತುಂಬಾ ಪ್ರೀತಿ ಇತ್ತು. ಆ ಎಂಟು ಪತ್ನಿಯರ್ಯಾರು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಮೊದಲನೇಯದಾಗಿ ರುಕ್ಮಿಣಿ. ಲಕ್ಷ್ಮೀ ದೇವಿಯ ಅವತಾರವಾದ ರುಕ್ಮಿಣಿ ಕೃಷ್ಣನ ಮೊದಲನೇಯ ಹೆಂಡತಿ. ರುಕ್ಮಿಣಿಯನ್ನ ತುಂಬ ಪ್ರೀತಿಸುತ್ತಿದ್ದ ಕೃಷ್ಣನಿಗೆ ಸಹೋದರನ ಬೆಂಬಲವಿರುವುದಿಲ್ಲ. ಹಾಗಾಗಿ ಕೃಷ್ಣ ರುಕ್ಮಿಣಿ ಯಾರ ನೆರವಿಲ್ಲದೇ ವಿವಾಹವಾಗುತ್ತಾರೆ. ಈ ದಂಪತಿಗೆ 10 ಗಂಡು ಮಕ್ಕಳು ಜನಿಸುತ್ತಾರೆ.

ಎರಡನೇಯದಾಗಿ ಸತ್ಯಭಾಮೆ. ಈಕೆ ಭೂಮಿತಾಯಿಯ ಸ್ವರೂಪ. ಸತ್ಯಭಾಮೆಯು ಸತ್ರಾಜಿತನ ಮಗಳು. ಇವನು ಅಮೂಲ್ಯವಾದ ಮಣಿಗಳನ್ನು ಕದಿಯುತ್ತಿದ್ದನು. ಹೀಗೆ ಕದಿಯುವಾಗ ಕೃಷ್ಣನ ಕೈಯಲ್ಲಿ ಸಿಕ್ಕಿಬಿದ್ದನು. ಆಗ ತನ್ನ ತಪ್ಪಿನ ಪ್ರಶ್ಚಾತಾಪವಾಗಿ ತನ್ನ ಮಗಳನ್ನು ಕೃಷ್ಣನಿಗೆ ವಿವಾಹ ಮಾಡಿ ಕೊಡುತ್ತೇನೆಂದು ಹೇಳುತ್ತಾನೆ. ಹೀಗೆ ಸತ್ಯಭಾಮೆ ಮತ್ತು ಕೃಷ್ಣನ ವಿವಾಹವಾಯಿತು.

ಮೂರನೇಯದಾಗಿ ಜಾಂಬವತಿ. ಈ ಜಾಂಬವತಿ ಜಾಂಬವಂತನ ಮಗಳು. ಜಾಂಬವಂತ ಮತ್ತು ಕೃಷ್ಣನ ನಡುವೆ 28 ದಿನಗಳ ಕಾಲ, ಒಂದು ಆಭರಣಕ್ಕಾಗಿ ಹೋರಾಟ ನಡೆಯುತ್ತದೆ. ಆಗ ಜಾಂಬವಂತನಿಗೆ ಕೃಷ್ಣ ರಾಮನ ಅವತಾರವೆಂದು ತಿಳಿಯುತ್ತದೆ. ಆಗ ತನ್ನ ತಪ್ಪಿನ ಅರಿವಾಗಿ ಆಭರಣದ ಜೊತೆ ತನ್ನ ಮಗಳನ್ನೂ ಕೃಷ್ಣನಿಗೆ ಕೊಟ್ಟು ಮದುವೆ ಮಾಡಿಸುತ್ತಾನೆ.

ನಾಲ್ಕನೇಯದಾಗಿ ಸೂರ್ಯದೇವನ ಮಗಳು ಕಳಿಂದಿ. ಕಳಿಂದಿ ಶ್ರೀಕೃಷ್ಣನನ್ನು ಮದುವೆಯಾಗಲು ಘೋರ ತಪಸ್ಸು ಮಾಡುತ್ತಾಳೆ. ಮದುವೆಯಾದರೆ ಕೃಷ್ಣನನ್ನೇ ಮದುವೆಯಾಗುತ್ತೇನೆಂದು ನಿರ್ಧರಿಸಿ, ಕೃಷ್ಣನನ್ನೇ ವರಿಸಿದಳು.

ಐದನೇಯದಾಗಿ ನಗ್ನಜಿತಿ. ಈಕೆ ನಗ್ನಜೀತನ ಮಗಳು. ನಗ್ನಜಿತ ಸ್ವಯಂವರ ಆಯೋಜಿಸಿ, ಅದರಲ್ಲಿ 7 ಎತ್ತುಗಳೊಂದಿಗೆ ಯಾರು ಹೋರಾಡಿ ಗೆಲ್ಲುತ್ತಾರೋ, ಅವರಿಗೆ ತನ್ನ ಪುತ್ರಿಯನ್ನು ವಿವಾಹ ಮಾಡಿಕೊಡುವುದಾಗಿ ಹೇಳುತ್ತಾನೆ. ಸ್ವಯಂವರದಲ್ಲಿ ಕೃಷ್ಣ ಗೆದ್ದು, ನಗ್ನಜಿತಿಯನ್ನು ವಿವಾಹವಾಗುತ್ತಾನೆ.

ಆರನೇಯದಾಗಿ ಮಿತ್ರಾವಿಂದ. ಈಕೆಯ ಅಣ್ಣಂದಿರು ದುರ್ಯೋಧನನು ಅನುಯಾಯಿಗಳಾಗದ್ದರು. ಇವರಿಗೆ ಕೃಷ್ಣನನ್ನು ಕಂಡರೆ ಆಗುತ್ತಿರಲಿಲ್ಲ. ಆದ್ರೆ ಮಿತ್ರಾವಿಂದಳ ಸ್ವಯಂವರದ ವೇಳೆ ಕೃಷ್ಣನನ್ನು ಈಕೆ ವರಿಸುತ್ತಾಳೆ.

ಏಳನೇಯದಾಗಿ ಭದ್ರ. ಈಕೆಯ ಅಣ್ಣಂದಿರು ಸೇರಿ ಕೃಷ್ಣನೊಂದಿಗೆ ಈಕೆಯ ವಿವಾಹ ಮಾಡಿಸಿದರು.

ಎಂಟನೇಯದಾಗಿ ಲಕ್ಷ್ಮಣ. ಈಕೆ ಮದ್ರಾ ಸಾಮ್ರಾಜ್ಯದ ರಾಜನ ಮಗಳು. ಈಕೆಯನ್ನ ಕೃಷ್ಣ ವರಿಸುತ್ತಾನೆ.

ಓಂ ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಲಕ್ಷ್ಮಿಕಾಂತ್ ಭಟ್
9986987548

ಉತ್ತರ ಕನ್ನಡ, ದಕ್ಷಿಣ ಕನ್ನಡ ಪ್ರಖ್ಯಾತ ಜ್ಯೋತಿಷ್ಯರು
ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ,
ವ್ಯಾಪಾರ, ಮದುವೆ, ಸಂತಾನ, ಆರೋಗ್ಯ,
ಸ್ತ್ರೀ-ಪುರುಷ ವಶೀಕರಣ, ಮಾಟ-ಮಂತ್ರ, ಶತ್ರು ನಾಶ,
ಭೂಮಿ ವಿಚಾರ, ಸತಿ-ಪತಿ ಕಲಹ, ಮದುವೆ ಸಮಸ್ಯೆ,
ದುಷ್ಟ ಶಕ್ತಿ, ದೃಷ್ಟಿದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ
ದೈವಿಕ ಶಕ್ತಿಯಿಂದ 2 ದಿನಗಳಲ್ಲಿ ಪರಿಹಾರ
( 100% ಪರಿಹಾರ ಗ್ಯಾರಂಟಿ )

ಒಂದು ಫೋನಿನ ಕರೆ ನಿಮ್ಮ ಜೀವನ ಬದಲಾಯಿಸುತ್ತೆ
ಈ ಕೂಡಲೇ ಕರೆ ಮಾಡಿ
998698754

About The Author