ಹಿಂದೂ ಧರ್ಮದಲ್ಲಿ ಹಲವಾರು ಪದ್ಧತಿಗಳಿದೆ. ಅಂಥ ಪದ್ಧತಿಗಳಲ್ಲಿ 16 ಸಂಸ್ಕಾರ ಕೂಡ ಒಂದು. ಮನುಷ್ಯ ಹುಟ್ಟಿನಿಂದ ಸಾವಿನವರೆಗೆ 16 ಸಂಸ್ಕಾರಗಳನ್ನು ಪದ್ಧತಿಪೂರ್ವಕವಾಗಿ ಮಾಡಿದರೆ, ಆತನ ಜನ್ಮ ಸಾರ್ಥಕ ಅಂತಾ ಹೇಳಲಾಗುತ್ತದೆ. ಯಾವುದು ಆ 16 ಸಂಸ್ಕಾರ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಮೊದಲನೇಯದಾಗಿ ಗರ್ಭದಾನ ಸಂಸ್ಕಾರ. ಪತಿ ಪತ್ನಿ ಇಬ್ಬರೂ ಶುದ್ಧ ಮನಸ್ಸಿನಿಂದ, ಉತ್ತಮ ಮುಹೂರ್ತದಲ್ಲಿ ಸಂಭೋಗ ಮಾಡಿದಾಗ ಒಂದು ಉತ್ತಮ ಗುಣವುಳ್ಳ, ಆರೋಗ್ಯವಂತ ಮಗುವನ್ನು ಪಡೆಯಬಹುದು.
ಎರಡನೇಯದಾಗಿ ಪುಂಶವನ ಸಂಸ್ಕಾರ. ಪತ್ನಿ ಗರ್ಭಿಣಿಯಾಗಿದ್ದಾಗ, ಉತ್ತಮ ಮಗು ಹುಟ್ಟಲಿ, ಆರೋಗ್ಯಕರವಾದ ಮಗು ಹುಟ್ಟಲಿ ಎಂಬ ಕಾರಣಕ್ಕೆ ಮೂರನೇ ತಿಂಗಳಿಗೆ ಈ ಸಂಸ್ಕಾರ ಮಾಡಲಾಗುತ್ತದೆ.

ಮೂರನೇಯದಾಗಿ ಸೀಮಂತ ಸಂಸ್ಕಾರ. ಸೀಮಂತ ಸಂಸ್ಕಾರದ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ. ಈ ದಿನ ಗರ್ಭಿಣಿಗೆ ರೇಷ್ಮೆ ಸೀರೆ ತೊಡಿಸಿ, ಗಾಜಿನ ಬಳೆ, ಮಲ್ಲಿಗೆ ಮಾಲೆ ಮುಡಿಸಿ, ಆಕೆಗೆ ಇಷ್ಟವಾಗುವ ಸಿಹಿಯೂಟ ಬಡಿಸಿ, ಆಕೆಯನ್ನು ಸಂತೃಪ್ತಿಗೊಳಿಸಲಾಗುತ್ತದೆ.
ನಾಲ್ಕನೇಯದಾಗಿ ಜಾತಕರ್ಮ ಸಂಸ್ಕಾರ. ಈ ಸಂಸ್ಕಾರ ಮಾಡುವುದರಿಂದ ಮಗುವಿಗೆ ಮತ್ತು ತಾಯಿಗೆ ಯಾವುದೇ ಆರೋಗ್ಯ ಸಮಸ್ಯೆ ಇದ್ದರೂ ಅದು ಸರಿಹೋಗುತ್ತದೆ.
ಐದನೇಯದಾಗಿ ನಾಮಕರಣ ಸಂಸ್ಕಾರ. ಈ ದಿನ ಮಗುವಿಗೆ ಶಾಸ್ತ್ರೋಕ್ತವಾಗಿ ನಾಮಕರಣ ಮಾಡಲಾಗುತ್ತದೆ. ಆರನೇಯದಾಗಿ ಚೌತೆ ಸಂಸ್ಕಾರ. ಮಗುವಿಗೆ 3ರಿಂದ 4 ತಿಂಗಳು ತುಂಬಿದಾಗ ಈ ಸಂಸ್ಕಾರ ಮಾಡಬೇಕು. ಸೂರ್ಯ ಅಥವಾ ಚಂದ್ರನ ದರ್ಶನ ಮಾಡಿಸಿ, ಪಂಚಭೂತಗಳಲ್ಲಿ ಉತ್ತಮ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು.
ಏಳನೇಯದಾಗಿ ಅನ್ನಪ್ರಾಶನ ಸಂಸ್ಕಾರ. ಮಗು ಹುಟ್ಟಿದ ಕೆಲ ತಿಂಗಳುಗಳ ಕಾಲ ಅದಕ್ಕೆ ದ್ರವ ರೂಪದ ಆಹಾರವನ್ನೇ ನೀಡಬೇಕು. ಆದ್ರೆ ಅದಕ್ಕೆ ಅನ್ನ ತಿನ್ನಿಸುವ ಮುನ್ನ ಪದ್ಧತಿ ಪ್ರಕಾರವಾಗಿ ಅನ್ನಪ್ರಾಶನ ಸಂಸ್ಕಾರ ಮಾಡಬೇಕು.
ಎಂಟನೇಯದಾಗಿ ಕೇಶಮುಂಡನ ಸಂಸ್ಕಾರ. ಮಗುವಿಗೆ 5 ತಿಂಗಳಾದ ಬಳಿಕ ಕೇಶಮುಂಡನ ಸಂಸ್ಕಾರ ಮಾಡಲಾಗುತ್ತದೆ. ಆಯಸ್ಸು ವೃದ್ಧಿಸಲು ಮತ್ತು ಬುದ್ಧಿ ಚುರುಕಾಗಲಿ ಎಂಬ ಕಾರಣಕ್ಕೆ ಮಗುವಿಗೆ ಈ ಸಂಸ್ಕಾರ ಮಾಡಲಾಗುತ್ತದೆ.
ಒಂಭತ್ತನೇಯದಾಗಿ ಕಿವಿ ಚುಚ್ಚುವ ಸಂಸ್ಕಾರ. ಗಂಡಾಗಲಿ ಹೆಣ್ಣುಮಗುವಾಗಲಿ, ಒಂದು ವರ್ಷ ತುಂಬುವುದರೊಳಗೆ ಮಕ್ಕಳಿಗೆ ಕಿವಿ ಚುಚ್ಚುವ ಸಂಸ್ಕಾರ ಮಾಡಿಸಲೇಬೇಕು.
ಹತ್ತನೇಯದಾಗಿ ಉಪನಯನ ಸಂಸ್ಕಾರ. ಇದು ಗಂಡು ಮಕ್ಕಳಿಗೆ ಮಾಡುವ ಸಂಸ್ಕಾರ. 9 ವರ್ಷ ತುಂಬಿದ ಬಳಿಕ ಮಕ್ಕಳಿಗೆ ಉಪನಯನ ಸಂಸ್ಕಾರ ಮಾಡಲಾಗುತ್ತದೆ. ಉಪನಯನವಾದ ಬಳಿಕ ಆ ಮಗು ಎಂಜಿಲು ಊಟ ಮಾಡುವಂತಿಲ್ಲ. ಮದುವೆಯಾಗುವವರೆಗೂ ಬ್ರಹ್ಮಚರ್ಯ ಪಾಲನೆ ಮಾಡಬೇಕು. ಜನಿವಾರ ಧರಿಸಬೇಕು. ಸಂಧ್ಯಾವಂದನೆ ಮಾಡಬೇಕು. ಆಗ ಈ ಸಂಸ್ಕಾರದ ಪ್ರಯೋಜನವಾಗುತ್ತದೆ.
ಹನ್ನೊಂದನೇಯದಾಗಿ ವಿದ್ಯಾ ಸಂಸ್ಕಾರ. ವಿದ್ಯಾ ಸಂಸ್ಕಾರವನ್ನು 4ರಿಂದ 5 ವರ್ಷಕ್ಕೆ ಮಾಡಲಾಗುತ್ತದೆ. ಅಕ್ಕಿಯ ಮೇಲೆ ಹೆಸರನ್ನು ಬರೆಸಿ, ಸರಸ್ವತಿ ದೇವಿಯ ಆಶೀರ್ವಾದ ಪಡೆಯಲಾಗುತ್ತದೆ. ಇದು ಮಗುವಿಗೆ ಉತ್ತಮ ಭವಿಷ್ಯ ಸಿಗಲಿ ಎಂಬ ಕಾರಣಕ್ಕೆ ಮಾಡುವ ಸಂಸ್ಕಾರ.
ಹನ್ನೆರಡನೇಯದಾಗಿ, ಕೇಶಾಂತಕ ಸಂಸ್ಕಾರ. ಇದು ಹೆಚ್ಚಾಗಿ ಪಾಠಶಾಲೆಗೆ ಹೋಗುವ, ಗುರುಕುಲಕ್ಕೆ ಹೋಗುವ ಮಕ್ಕಳಿಗೆ ಮಾಡುವ ಸಂಸ್ಕಾರ. ಉಪನಯನದ ಸಮಯದಲ್ಲಿ ಕೂದಲು ತೆಗೆದು ಬರೀ ಜುಟ್ಟು ಬಿಡಬೇಕಾಗುತ್ತದೆ. ಇದಾದ ನಂತರ ಗುರುಕುಲಕ್ಕೆ ಹೋಗುವ ಮಕ್ಕಳು, ಶಿಕ್ಷಣ ಮುಗಿಯುವ ತನಕ ಇದೇ ಕೇಶಾಲಂಕಾರ ಮಾಡಬೇಕಾಗುತ್ತದೆ.
ಹದಿಮೂರನೇಯ ಸಂಸ್ಕಾರ. ಸಮವರ್ಥನ ಸಂಸ್ಕಾರ. ಇದು ಗುರು ಕೊಡಬೇಕಾದ ಸಂಸ್ಕಾರ. ತಾನು ಕೊಟ್ಟ ಶಿಕ್ಷಣದಿಂದ ತನ್ನ ವಿದ್ಯಾರ್ಥಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲಿ ಎಂದು ಗುರು ತನ್ನ ಶಿಷ್ಯನಿಗೆ ಆಶೀರ್ವಾದ ಮಾಡಬೇಕು.

ಹದಿನಾಲ್ಕನೇಯದಾಗಿ, ವಿವಾಹ ಸಂಸ್ಕಾರ. ಹದಿನೈದನೇಯದು ಅಗ್ನಿ ಸಂಸ್ಕಾರ. ಇವೆರಡು ವಿವಾಹದ ವೇಳೆಯೇ ಮಾಡುವ ಸಂಸ್ಕಾರ. ಮಕ್ಕಳಿಗೆ ಮದುವೆಯಾಗುವ ಸಂದರ್ಭದಲ್ಲಿ ಹೋಮ ಹವನ ಮಾಡುವುದೇ ಅಗ್ನಿ ಸಂಸ್ಕಾರ.
ಹದಿನಾರನೇಯದಾಗಿ ಅಂದ್ರೆ ಕೊನೆಯದಾಗಿ ಅಂತ್ಯ ಸಂಸ್ಕಾರ. ಮನುಷ್ಯ ತನ್ನ ಜೀವನ ಪಯಣ ಮುಗಿಸಿದಾಗ, ಆತನನ್ನು ಬೀಳ್ಕೊಡುವ ಸಂಸ್ಕಾರವೇ ಅಂತ್ಯ ಸಂಸ್ಕಾರ. ಪದ್ಧತಿ ಪ್ರಕಾರವಾಗಿ ಅಂತ್ಯ ಸಂಸ್ಕಾರ ಮಾಡಿದರೆ, ಆತನ ಆತ್ಮಕ್ಕೆ ಶಾಂತಿ ಸಿಗುವುದಲ್ಲದೇ, ಮುಂದಿನ ಜನ್ಮ ಕೂಡ ಉತ್ತಮವಾಗಿರುತ್ತದೆ ಎಂಬ ನಂಬಿಕೆ ಇದೆ.

ಕಟೀಲು ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಪಂಡಿತ್ ಶ್ರೀ ಸುದರ್ಶನ್ ಭಟ್ ( ಕುಡ್ಲ )
9019893816
ಉತ್ತರ ಕನ್ನಡ, ದಕ್ಷಿಣ ಕನ್ನಡದ ಪ್ರಖ್ಯಾತ ಜ್ಯೋತಿಷ್ಯರು, ಇವರು ನಿಮ್ಮ ಸಮಸ್ಯೆಗಳಾದ ವಿದ್ಯೆ,
ಉದ್ಯೋಗ, ವ್ಯಾಪಾರ, ಮದುವೆ, ಸಂತಾನ, ಆರೋಗ್ಯ, ಸ್ತ್ರೀ–ಪುರುಷ ವಶೀಕರಣ, ಮಾಟ–ಮಂತ್ರ,
ಶತ್ರು ನಾಶ, ಭೂಮಿ ವಿಚಾರ, ಸತಿ–ಪತಿ ಕಲಹ, ಮದುವೆದುಷ್ಟ ಶಕ್ತಿ, ದೃಷ್ಟಿ ದೋಷ ಪರಿಹಾರ,
ಇನ್ನೂ ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇರಳಿಯ ದೈವಿಕ ಶಕ್ತಿಯಿಂದ
೨ ದಿನಗಳಲ್ಲಿ ಪರಿಹಾರ (೧೦೦% ಪರಿಹಾರ ಗ್ಯಾರಂಟಿ )
ಒಂದೇ ಕರೆಯಲ್ಲಿ ನಿಮ್ಮ ಜೀವನ ಬದಲಾಯಿಸುತ್ತಾರೆ. ಫೋನಿನ ಮೂಲಕ ಪರಿಹಾರ




