Horoscope: ಈ ರಾಶಿಯವರು ತಮ್ಮ ಜೀವನದ ಗುಟ್ಟನ್ನು ಎಂದಿಗೂ ಬಿಟ್ಟು ಕೊಡುವುದಿಲ್ಲ.

Horoscope: ಪ್ರತೀ ಮನುಷ್ಯನಲ್ಲೂ ಬೇರೆ ಬೇರೆ ರೀತಿಯ ಗುಣ, ಸ್ವಭಾವಗಳಿರುತ್ತದೆ. ಜೀವನವೂ ಬೇರೆ ಬೇರೆ ರೀತಿ ಇರುತ್ತದೆ. ಕೆಲವರು ಏನಿಲ್ಲದಿದ್ದರೂ, ಸದಾ ಖುಷಿಯಾಗಿರುತ್ತಾರೆ. ಕೆಲವರು ಎಲ್ಲ ಸುಖ ಸೌವಲತ್ತುಗಳಿದ್ದರೂ, ಏನೂ ಇಲ್ಲದಂತಿರುತ್ತಾರೆ. ಹೀಗೆ ಥರ ಥರದ ಗುಣವಿರುತ್ತದೆ. ಇಂದು ನಾವು ತಮ್ಮ ಜೀವನದ ಗುಟ್ಟನ್ನು ಎಂದಿಗೂ ಬಿಟ್ಟು ಕೊಡದ ರಾಶಿಗಳ ಬಗ್ಗೆ ವಿವರಿಸಲಿದ್ದೇವೆ.

ಕರ್ಕ: ಕರ್ಕ ರಾಶಿಯವರು ಸಿಕ್ರೇಟ್ ಮೇಂಟೇನ್ ಮಾಡುವುದರಲ್ಲಿ ನಿಸ್ಸೀಮರು. ಆದರೆ ಇವರು ಸುಮ್ಮ ಸುಮ್ಮನೆ ಸಿಕ್ರೇಟ್ ಮೆಂಟೇನ್ ಮಾಡುವುದಿಲ್ಲ. ಬದಲಾಗಿ ಆ ಸಿಕ್ರೇಟ್ ಇತರರಿಗೆ ಲಾಭ ತರುವುದಕ್ಕಾಗಿಯೇ ಇರುತ್ತದೆ. ಏಕೆಂದರೆ ಕರ್ಕ ರಾಶಿಯವರು ತಮಗಿಂತ ತಮ್ಮವರು ನೆಮ್ಮದಿಯಾಗಿರಲಿ ಎಂದು ಬಯಸುವವರು.

ಕನ್ಯಾ: ಕನ್ಯಾ ರಾಶಿಯವರು ತಾವು ಪರಿಪೂರ್ಣವಾಗಿರಬೇಕು, ಪರ್ಫೆಕ್ಟ್ ಆಗಿರಬೇಕು ಅಂತಾ ಬಯಸುವುದಲ್ಲದೇ, ಇತರರು ಹಾಗೆಯೇ ಇರಬೇಕು ಎಂದು ಬಯಸುವವರು. ಇದರ ಜತೆಗೆ ಇವರು, ಗುಟ್ಟಿನಿಂದ ಇರುವವರಾಗಿದ್ದಾರೆ.

ವೃಶ್ಚಿಕ: ವೃಶ್ಚಿಕ ರಾಶಿಯವರು ಗಂಭೀರ ಸ್ವಭಾವದವರು. ಅವರು ಆಚೆಯಿಂದ ಶಾಂತ ರೀತಿಯವರು ಎನ್ನಿಸಿದರೂ ಕೂಡ, ಜೀವನದಲ್ಲಿ ಹೆಚ್ಚು ಸಿಕ್ರೇಟ್ ಮೆಂಟೇನ್ ಮಾಡಿರುತ್ತಾರೆ. ಏಕೆಂದರೆ, ಡಂಗುರ ಸಾರಿ, ಕೆಲಸ ಹಾಳು ಮಾಡಿಕ“ಳ್ಳುವ ದಡ್ಡತನ ಇವರು ಮಾಡುವುದಿಲ್ಲ. ಅದು ಬಂಡವಾಳ ಹೂಡುವ ವಿಷಯವೇ ಆಗಿರಲಿ, ಮದುವೆ, ಮನೆ ಖರೀದಿ, ಅಥವಾ ಯಾವುದೇ ಮುಖ್ಯವಾದ ವಿಷಯದ ಬಗ್ಗೆ ಸಿಕ್ರೇಟ್ ಬಿಟ್ಟುಕ“ಡುವುದಿಲ್ಲ. ದಾನ ಕೂಡ ಯಾರಿಗೂ ತಿಳಿಯದಂತೆ ಮಾಡುತ್ತಾರೆ.

ಮಕರ: ಹಿಡಿದ ಕೆಲಸ ಮಾಡಲೇಬೇಕು ಎಂದು ಪಟ್ಟು ಸಡಿಲಿಸದೇ ಇರುವವರು ಮಕರ ರಾಶಿಯವರು. ಹೀಗಿರುವಾಗ ತಾವು ಮಾಡುವ ಕೆಲಸದ ಬಗ್ಗೆ ಅವರೆಂದಿಗೂ ಸಿಕ್ರೇಟ್ ಬಿಟ್ಟುಕ“ಡಲು ಇಚ್ಛಿಸುವುದಿಲ್ಲ. ಹಾಗಾಗಿ ಇವರು ಕೂಡ ಸಿಕ್ರೇಟ್ ಬಿಡದೇ, ತಮ್ಮ ಪಾಡಿಗೆ ತಾವು ಕೆಲಸ ಮಾಡಿ, ಫಲಿತಾಂಶ ಪ್ರಕಟವಾಗುವ ತನಕ ತಾಳ್ಮೆಯಿಂದ ಕಾಯುತ್ತಾರೆ.

About The Author