Garuda Purana: ನೆಲಕ್ಕೆ ಬಿದ್ದ ಆಹಾರವನ್ನೇಕೆ ಸೇವಿಸಬಾರದು..? ಗರುಡ ಪುರಾಣದಲ್ಲಿ ಹೀಗೆ ಹೇಳಲಾಗಿದೆ..

Garuda Purana: ಸಾಮಾನ್ಯವಾಗಿ ಯಾವುದಾದರೂ ಆಹಾರ ನೆಲಕ್ಕೆ ಬಿದ್ದಾಗ, ಕಡಿಮೆ ಬೆಲೆಯ ಆಹಾರವನ್ನು ಹೆಕ್ಕಲು ಯಾರೂ ಹೋಗುವುದಿಲ್ಲ. ಆದರೆ ನಿಮ್ಮ ಕೈಯ್ಯಿಂದ ಹೆಚ್ಚು ಬೆಲೆಯ ತಿನಿಸು ಬಿದ್ದರೆ, ಅದನ್ನು ಖಂಡಿತವಾಗಿಯೂ ಕೆಲವರು ಹೆಕ್ಕುತ್ತಾರೆ. ಆದರೆ ಆಹಾರಗಳು ನೆಲಕ್ಕೆ ಬಿದ್ದರೆ, ಅದು ನೆಲದ ಪಾಲೇ. ಹಾಗಾಗಿ ಅದನ್ನು ಸೇವಿಸಬಾರದು.

ಕೀಟಾಣುಗಳು ಇರುತ್ತದೆ: ನೆಲಕ್ಕೆ ಬಿದ್ದ ಆಹಾರ ರಕ್ಕಸರಿಗೆ, ಪಿಶಾಚಿಗಳಿಗೆ, ಕೆಟ್ಟ ಶಕ್ತಿಗಳಿಗೆ ಸೀಮಿತ ಹಾಗಾಗಿ ಆ ಆಹಾರ ನಾವು ತಿನ್ನಬಾರದು ಎಂದು ಗರುಡ ಪುರಾಣದಲ್ಲಿ ಹೇಳಲಾಗಿದೆ. ವೈಜ್ಞಾನಿಕವಾಗಿ ನಾವು ಹೇಳುವುದಾದರೆ, ನೆಲಕ್ಕೆ ಬಿದ್ದ ಆಹಾರದಲ್ಲಿ ಕೀಟಾಣುಗಳು ಇರುತ್ತದೆ. ಅದು ಅಶುದ್ಧವಾಗುತ್ತದೆ. ಅಂಥ ಆಹಾರ ಸೇವನೆಯಿಂದ ರೋಗ ರುಜಿಗಳು ಬರುತ್ತದೆ. ಹಾಗಾಗಿ ನೆಲಕ್ಕೆ ಬಿದ್ದ ಆಹಾರ ಸೇವಿಸಬಾರದು.

ಅದೃಷ್ಟ ದುರಾದೃಷ್ಟವಾಗುತ್ತದೆ: ನೆಲಕ್ಕೆ ಬಿದ್ದ ಆಹಾರ ಸೇವಿಸಿದರೆ, ಅದೃಷ್ಟ ದುರಾದೃಷ್ಟವಾಗುತ್ತದೆ ಎಂದು ಹೇಳಲಾಗಿದೆ. ಮಾನಸಿಕ ನೆಮ್ಮದಿ ಹಾಳಾಗುವುದು. ಜೀವನದಲ್ಲಿ ಅಡೆತಡೆ ಉಂಟಾಗುತ್ತದೆ.

ಇನ್ನು ಗರುಡ ಪುರಾಣದಲ್ಲಿ ಹೇಳಿರುವುದು ಬಿಟ್ಟು ಬೇರೆ ಬೇರೆ ರೀತಿಯಿಂದ ಈ ಬಗ್ಗೆ ಮಾತನಾಡುವುದಾದರೆ, ಪ್ರೇತಗಳಿಗೆ ನೆಲದ ಮೇಲೆ ಬಿದ್ದ ಆಹಾರವೇ ರುಚಿಸುವುದಂತೆ. ಹಾಗಾಗಿ ಪದೇ ಪದೇ ನಿಮ್ಮ ಕೈಯಿಂದ ಆಹಾರ ಚೆಲ್ಲಿ ಅದು ತಾನು ಸೇವಿಸಲು ಪ್ರಯತ್ನಿಸುತ್ತದೆ ಅನ್ನೋ ಮಾತೂ ಇದೆ.

ಹಾಗಾಗಿ ಮನೆಯಲ್ಲಿ ಪದೇ ಪದೇ ಹಾಲು ಉಕ್ಕದಂತೆ ನೋಡಿಕ“ಳ್ಳಬೇಕು. ಬಿಸಿ ಬಿಸಿ ನೀರನ್ನು ನೆಲಕ್ಕೆ ಚೆಲ್ಲಬಾರದು. ಬಾತ್‌ರೂಮ್, ಟಾಯ್ಲೆಟ್‌ಗೆ ಬಿಸಿ ನೀರು ಹಾಕಿ ಕ್ಲೀನ್ ಮಾಡಬಾರದು. ಸಿಂಕ್‌ನಲ್ಲಿ ಬಿಸಿ ನೀರು ಹಾಕಬಾರದು ಅಂತಾ ಹೇಳಲಾಗುತ್ತದೆ.

About The Author