Life lesson: ಪತಿ-ಪತ್ನಿ ಸಂಬಂಧ ಅತೀ ಉತ್ತಮವಾಗಿರಬೇಕಾದ್ರೆ ಈ ನಿಯಮಗಳನ್ನು ನೀವು ಅನುಸರಿಸಬೇಕು

Life Lesson: ವೈವಾಹಿಕ ಜೀವನ ಅತ್ಯುತ್ತಮವಾಗಿರಬೇಕು ಅಂದ್ರೆ, ಪುರುಷ ಮತ್ತು ಮಹಿಳೆಯಲ್ಲಿ ಕೆಲ ಗುಣಗಳು ಖಂಡಿತವಾಗಿಯೂ ಇರಬೇಕು. ಉತ್ತಮ ವೈವಾಹಿಕ ಜೀವನಕ್ಕೆ ಇಬ್ಬರಲ್ಲೂ ಇರಬೇಕಾದ ಗುಣಗಳು ಯಾವುದು ಎಂದು ತಿಳಿಯೋಣ ಬನ್ನಿ.

ತಾಳ್ಮೆ: ಗಂಡನಿಗಾಗಲಿ, ಹೆಂಡತಿಗಾಗಲಿ ತಾಳ್ಮೆ ಇರುವುದು ತುಂಬಾ ಮುಖ್ಯ. ಮನೆಯಲ್ಲಿ ಜಗಳ ಶುರುವಾದರೆ, ವಾದ ನಡೆಯುತ್ತದೆ. ವಾದ ಮುಂದುವರೆದಂತೆ ಸಂಬಂಧ ಹಾಳಾಗುತ್ತದೆ. ಹಾಗಾಗಿ ಪತಿ ತಾಳ್ಮೆಗೆಟ್ಟಾಗ ಪತ್‌ನಿ ತಾಳ್ಮೆಯಿಂದ ಇರಬೇಕು. ಪತ್ನಿ ಕೋಪದಲ್ಲಿದ್ದಾಗ, ಪತಿ ತಾಳ್ಮೆಯಿಂದ ವರ್ತಿಸಬೇಕು. ಆಗಲೇ ಜಗಳ ನಿಂತು ಸಂಬಂಧ ಉತ್ತಮವಾಗಿರೋದು.

ಜವಾಬ್ದಾರಿ ನಿಭಾಯಿಸುವ ಗುಣ: ಇನ್ನು ಪತಿ-ಪತ್ನಿ ಇಬ್ಬರಿಗೂ ಅವರವರ ಜವಾಬ್ದಾರಿ ನಿಭಾಯಿಸುವ ಬಗ್ಗೆ ತಿಳುವಳಿಕೆ ಇರಬೇಕು. ಪತಿ ಕೆಲಸ ಮಾಡಿ, ಮನೆಗೆ ಬೇಕಾದ್ದನ್ನೆಲ್ಲಾ ಖರೀದಿಸುವ ಜವಾಬ್ದಾರಿ ತೆಗೆದುಕ“ಂಡರೆ, ಪತ್ನಿಯಾದವಳು ಅಡುಗೆ, ಮಕ್ಕಳನ್ನು ಸಂಭಾಳಿಸುವುದು, ಗುರು ಹಿರಿಯರನ್ನು ಕಾಳಜಿ ಮಾಡುವುದೆಲ್ಲ ಮಾಡುತ್ತಾಳೆ. ಇವೆರಡೂ ಕೆಲಸವನ್ನು ಇಬ್ಬರೂ ಹಂಚಿಕ“ಂಡರೆ ಇನ್ನೂ ಉತ್ತಮ.

ಮೃದುವಾತ, ಮಿತವಾದ ಮಾತು: ಮಾತು ಮಿತವಾಗಿ, ಮೃದುವಾಗಿದ್ದಾಗ ಮಾತ್ರ ಸಂಬಂಧ ಚೆನ್ನಾಗಿರುತ್ತದೆ. ಹಂಗಿಸುವುದು, ಕೋಪ ಬರಿಸುವ ರೀತಿ ಮಾತನಾಡುವುದು, ಮಾಡಿದ ತಪ್ಪನ್ನು ಪದೇ ಪದೇ ಹೇಳಿ ಮನಸ್ಸಿಗೆ ನೋವುಂಟು ಮಾಡುವುದು. ಇದೆಲ್ಲವೂ ಸಂಬಂಧ ಹಳಸುವಂತೆ ಮಾಡುವ ಗುಣಗಳಾಗಿದೆ.

ಬುದ್ಧಿವಂತಿಕೆ: ಪತಿ ಕೆಲಸದಲ್ಲಿ, ಜವಾಾಬ್ದಾರಿ ನಿಭಾಯಿಸುವುದರಲ್ಲಿ ಬ್ಯುಸಿ ಇದ್ದರೆ, ಪತ್ನಿಯಾದವಳು, ತನ್ನ ದುಡಿಮೆಯ ದುಡ್ಡು ಮತ್ತು ಪತಿ ನೀಡುವ ಖರ್ಚಿನ ದುಡ್ಡಿನಲ್ಲಿ ಉಳಿತಾಯ ಮಾಡುವ ಬುದ್ಧಿವಂತಿಕೆ ತೋರಿಸಬೇಕು. ಇಂದಿನ ಕಾಲದ ಹಲವು ಹೆಣ್ಣು ಮಕ್ಕಳು ಬಂಡವಾಳ ಹೂಡಿ, ಕಷ್ಟಕಾಲಕ್ಕೆ ಆ ಹಣವನ್ನು ಮನೆಯವರ ಸಹಾಯಕ್ಕೆ ನೀಡುತ್ತಾರೆ. ಅಥವಾ ಗೃಹೋಪಯೋಗಿ ವಸ್ತುಗಳು, ಮನೆ, ಆಸ್ತಿ ಖರೀದಿ ಮಾಡಲು ಆ ಹಣ ಹೂಡಿಕೆ ಮಾಡುತ್ತಾರೆ. ಇದೆಲ್ಲ ಬುದ್ಧಿವಂತಿಕೆ ಗೃಹಣಿಯಲ್ಲಿ ಮುಖ್ಯವಾಗಿರಬೇಕು.

ಪ್ರಾಮಾಣಿಕತೆ: ಮದುವೆ ಅನ್ನೋದು ಪವಿತ್ರ ಸಂಬಂಧ. ಈ ಸಂಬಂಧ ಸದಾಕಾಲ ಪವಿತ್ರವಾಗಿ, ಚೆಂದವಾಗಿರಬೇಕು. ಮನೆಯಲ್ಲಿ ನೆಮ್ಮದಿ, ಸುಖ-ಶಾಂತಿ ಇರಬೇಕು. ಮಕ್ಕಳಿಗೆ ಅಪ್ಪ ಅಮ್ಮನ ಬಗ್ಗೆ ಗೌರವವಿರಬೇಕು ಅಂದ್ರೆ, ಪ್ರಾಮಾಣಿಕತೆಯಿಂದ ಇರುವುದು ತುಂಬಾ ಮುಖ್ಯ.

About The Author