ನವದೆಹಲಿ: ಸ್ವಿಸ್ ಬ್ಯಾಂಕ್ ನಲ್ಲಿರೋ ಕಾಳ ಧನವನ್ನ ಭಾರತಕ್ಕೆ ತಂದೇ ತಿರುತ್ತೇನೆ ಅಂತ ಹೇಳಿದ್ದ ನರೇಂದ್ರ ಮೋದಿ ಹೇಳಿಕೆ ಇದೀಗ ಹೇಳಿಕೆಯಾಗಿಯೇ ಉಳಿದಿಲ್ಲ. ಇದನ್ನು ಕಾರ್ಯರೂಪಕ್ಕೆ ತರೋ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಪ್ರಯತ್ನ ಫಲ ನೀಡುವ ಲಕ್ಷಣ ಕಾಣ್ತಿದೆ.
ಸ್ವಿಸ್ ಬ್ಯಾಂಕ್ ನಲ್ಲಿ ಖಾತೆ ಹೊಂದಿರೋ ಭಾರತೀಯರ ವಿವರಗಳನ್ನು ಭಾರತಕ್ಕೆ ಕೊಡಲು ಸಾಧ್ಯವೇ ಇಲ್ಲ ಅಂದಿದ್ದ ಸ್ವಿಸ್ ಸರ್ಕಾರ ಇದೀಗ 11 ಭಾರತೀಯ ಖಾತೆದಾರರಿಗೆ ನೋಟೀಸ್ ನೀಡಿದೆ. ಅಲ್ಲದೆ 30 ದಿನಗಳೊಳಗೆ ನೋಟೀಸ್ ಗೆ ಸ್ಪಂದಿಸದಿದ್ದರೆ ನಿಮ್ಮ ಖಾತೆಯ ವಿವರವನ್ನು ಭಾರತೀಯ ಅಧಿಕಾರಿಗಳಿಗೆ ಕೊಡಲಾಗುತ್ತೆ ಅಂತಲೂ ಹೇಳಿದೆ.
ಸ್ವಿಸ್ ಬ್ಯಾಂಕ್‌ಗಳಲ್ಲಿ ಠೇವಣಿ ಇರಿಸಿರೋ ವಿದೇಶಿ ಖಾತೆದಾರರ ಮಾಹಿತಿಯನ್ನು ಸಾಮಾನ್ಯವಾಗಿ ಗೌಪ್ಯವಾಗಿರಿಸಲಾಗುತ್ತದೆ. ಈ ಮಾಹಿತಿಯನ್ನು ಆಯಾ ದೇಶಗಳೊಂದಿಗೆ ಹಂಚಿಕೊಳ್ಳೋ ವಿಚಾರದಲ್ಲಿ ಸ್ವಿಸ್‌ನ ಫೆಡರಲ್ ಟ್ಯಾಕ್ಸ್ ಡಿಪಾರ್ಟ್‌ಮೆಂಟ್ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸುತ್ತದೆ.
ಮೇ 21ರಂದು ಹನ್ನೊಂದು ಭಾರತೀಯ ಖಾತೆದಾರರಿಗೆ ನೋಟಿಸ್ ನೀಡಿದ್ದು, ಇದರೊಂದಿಗೆ ಮಾರ್ಚ್‌ನಿಂದ 25 ಭಾರತೀಯ ಖಾತೆದಾರರು ನೋಟಿಸ್ ಪಡೆದಿದ್ದಾರೆ.
ಆದ್ರೆ ಈವರೆಗೂ ಭಾರತೀಯ ಅಧಿಕಾರಿಗಳಿಗೆ ಒಂದೆರಡು ಹೆಸರುಗಳು ಸಿಕ್ಕಿವೆ ಹೊರತು ಉಳಿದ ಕೆಲ ಖಾತೆದಾರರ ವಿವರ ಎಸ್ ಬಿಕೆ, ಎಬಿಕೆಐ, ಆರ್ ಎಎಸ್, ಎಪಿಎಸ್, ಎಡಿಎಸ್, ಹೀಗೆ ತಮ್ಮ ಜನ್ಮದಿನಾಂಕದೊಂದಿಗೆ ಇನಿಷಿಯಲ್ಸ್ ಮಾತ್ರ ದೊರೆತಿದೆ.