ಮಂಡ್ಯ: ಮೇ 29ರಂದು ಸಂಸದೆ ಸುಮಲತಾ ಕೃತಜ್ಞತಾ ಸಮಾವೇಶ ನಡೆಸಲಿದ್ದು ಅಂದು ನಾನಾ ಕಾರ್ಯಕ್ರಮಗಳಲ್ಲಿ ಸಂಸದೆ ಸುಮಲತಾ ಭಾಗಿಯಾಗಲಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಂಸದೆ ಸುಮಲತಾ ಆಪ್ತ ಸಚ್ಚಿದಾನಂದ, ಮೇ 29ರಂದು ಅಂಬರೀಶ್ ಹುಟ್ಚುಹಬ್ಬವಾದ್ದರಿಂದ ಅಂದೇ ಸಮಾವೇಶ ಮಾಡಲು ನಿರ್ಧರಿಸಲಾಗಿದೆ ಎಂದರು. ಅಲ್ಲದೆ ವಿಜಯೋತ್ಸವ ಸಮಾವೇಶದಲ್ಲಿ ನಟರಾದ ದರ್ಶನ್, ಯಶ್ ರಾಕ್ ಲೈನ್ ವೆಂಕಟೇಶ್, ದೊಡ್ಡಣ್ಣ, ಅಭಿಷೇಕ್ ಭಾಗಿಯಾಗಲಿದ್ದಾರೆ. ಇವರಿಗೆ ಸುಮಲತಾರ ಸಾವಿರಾರು ಬೆಂಬಲಿಗರು ಸೇರಿದಂತೆ ಕಾಂಗ್ರೆಸ್, ಬಿಜೆಪಿ, ರೈತಸಂಘದ ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದರು.
ಸುಮಾರು ಮಧ್ಯಾಹ್ನ 3.30ಕ್ಕೆ ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ ನಲ್ಲಿ ಸಮಾವೇಶ ನಡೆಯಲಿದೆ. ಇನ್ನು ಅಂದು ವಿಜಯೋತ್ಸವ ಬೇಡ ಅನ್ನೋ ಕಾರಣಕ್ಕೆ ಕೇವಲ ವೇದಿಕೆ ಕಾರ್ಯಕ್ರಮ ಮಾತ್ರ ನಡೆಯಲಿದೆ.
ಇನ್ನು ಜೂನ್ ತಿಂಗಳಿನಲ್ಲಿ ಸಂಸತ್ ಅಧಿವೇಶನದ ಬಳಿಕ ಲೋಕಸಭಾ ಕ್ಷೇತ್ರದ ಎಂಟು ಕ್ಷೇತ್ರಗಳಿಗೆ ಸಂಸದೆ ಸುಮಲತಾ ಭೇಟಿ ಕೊಡಲಿದ್ದಾರೆ ಅಂತ ಸಚ್ಚಿದಾನಂದ ಮಾಹಿತಿ ನೀಡಿದ್ದಾರೆ.
ಯಡಿಯೂರಪ್ಪಾಗೆ ಅಮಿತ್ ಶಾ ಕೊಟ್ಟ ಆ ಶಾಕ್ ಏನ್ ಗೊತ್ತಾ..?. ತಪ್ಪದೇ ಈ ವಿಡಿಯೋ ನೋಡಿ.