ನಾಳೆಯಿಂದ ಲಸಿಕೆ ಹಾಕಿಸದಿದ್ರೆ ರೇಷನ್ ಇಲ್ಲ, ಪೆನ್ಷನ್ನೂ ಇಲ್ಲ…!

ಚಾಮರಾಜನಗರ- ಚಾಮರಾಜನಗರ ಜಿಲ್ಲೆಯನ್ನ ಕೋವಿಡ್ ಸೋಂಕಿನಿಂದ ಪಾರು ಮಾಡಲು ಇದೀಗ ಸರ್ಕಾರ ಹೊಸದೊಂದು ನಿಯಮ ಮಾಡಿದೆ. ಲಸಿಕೆ ಹಾಕಿಸಿಕೊಳ್ಳದ ಪಡಿತರ ಚೀಟಿದಾರರಿಗೆ ರೇಷನ್ ಹಾಗೂ ಪೆನ್ಷನ್ ವಿತರಣೆ ಮಾಡದಿರಲು ನಿರ್ಧರಿಸಿದೆ.

ಅಂತಾರಾಜ್ಯ ಗಡಿ ಜಿಲ್ಲೆ ಚಾಮರಾಜನಗರವನ್ನ ಕೋವಿಡ್ ಮುಕ್ತವಾಗಿಸಲು ನಾನಾ ರೀತಿಯ ಕಸರತ್ತು ನಡೆಸಲಾಗ್ತಿದೆ. ಇದೀಗ ಪಡಿತರ ಚೀಟಿದಾರರಿಗೆ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳದಿದ್ದರೆ ನ್ಯಾಯಬೆಲೆ ಅಂಗಡಿಗಳಲ್ಲಿ ತಿಂಗಳಿಗೊಮ್ಮೆ ನೀಡಲಾಗೋ ರೇಷನ್ ಸಿಗೋದಿಲ್ಲ ಅಂತ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಅಷ್ಟೇ ಅಲ್ಲ ಸರ್ಕಾರದಿಂದ ನೀಡಲಾಗೋ ವಿಧವಾ ವೇತನ, ಹಿರಿಯ ನಾಗರಿಕರಿಗೆ ಪೆನ್ಷನ್ ಸೇರಿದಂತೆ ಇತರೆ ಪೆನ್ಷನ್ ಗಳನ್ನೂ ಲಸಿಕೆ ಹಾಕಿಸದ ಫಲಾನುಭವಿಗಳ ಖಾತೆಗೆ ಜಮೆ ಮಾಡದಂತೆಯೂ ಬ್ಯಾಂಕ್ ಗಳಿಗೆ ಸೂಚನೆ ನೀಡಿದ್ದಾರೆ.

ಇನ್ನು ನಾಳೆಯಿಂದ ಈ ನಿಯಮ ಜಾರಿಗೆ ಬರಲಿದೆ. ಈ ಕುರಿತು ಮಾತನಾಡಿದ ಜಿಲ್ಲಾಧಿಕಾರಿ ಡಾ.ಎಂ.ಆರ್. ರವಿ ಜಿಲ್ಲೆಯಲ್ಲಿ ಕಡ್ಡಾಯ ಲಸಿಕೆ ಮಹಾ ಮೇಳವನ್ನು ಆಯೋಜಿಸಲಾಗಿದೆ. ಲಸಿಕೆ ಹಾಕಲು 238 ತಂಡಗಳಿದ್ದು 20 ಮೊಬೈಲ್ ತಂಡ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸತ್ತಿದೆ. ಈಗಾಗಲೇ ಜಿಲ್ಲೆಯಲ್ಲಿ ಶೇ.75ರಷ್ಟು ಲಸಿಕೆ ಪೂರೈಕೆಯಾಗಿದೆ. ಜನರ ಹಿತದೃಷ್ಟಿಯಿಂದಾಗಿಯೇ ಈ ನೂತನ ನಿಯಮ ಮಾಡಲಾಗಿದ್ಜಿದು ಜಿಲ್ಲೆಯ 2 ಲಕ್ಷ 90 ಸಾವಿರ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರಿಗೆ ಈ ನಿಯಮ ಅನ್ವಯವಾಗಲಿದೆ ಅಂತ ಮಾಹಿತಿ ನೀಡಿದ್ರು. ಅಲ್ಲದೆ ಸಾರ್ವಜನಿಕರು ಜಿಲ್ಲಾಡಳಿತದ ಈ ಅಭಿಯಾನಕ್ಕೆ ಸಹಕರಿಸೋ ಮೂಲಕ ಕೋವಿಡ್ ವಿರುದ್ದದ ಅಭಿಯಾನದಲ್ಲಿ ಭಾಗಿಯಾಗುವಂತೆ ಡಿಸಿ ಜಿಲ್ಲೆಯ ಜನರಿಗೆ ಕರೆ ನೀಡಿದ್ರು.

About The Author