ನಟ ಸತ್ಯಜಿತ್ ಗೆ ತೀವ್ರ ಅನಾರೋಗ್ಯ- ಐಸಿಯುನಲ್ಲಿ ಚಿಕಿತ್ಸೆ…!

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್​ ಆರೋಗ್ಯದಲ್ಲಿ ಬೆಂಗಳೂರಿನ ಬೌರಿಂಗ್​ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸದ್ಯ ಸತ್ಯಜಿತ್ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ದಿನಗಳಿಂದಲೂ  ಅನಾರೋಗ್ಯದಿಂದ ಬಳಲುತ್ತಿದ್ದ ಸತ್ಯಜಿತ್ ರವರ ಆರೋಗ್ಯ ನಿನ್ನೆ ತೀರಾ ಬಿಗಡಾಯಿಸಿತ್ತು. ಈಗಾಗಲೇ ಗ್ಯಾಂಗ್ರಿನ್ ನಿಂದಾಗಿ ಒಂದು ಕಾಲು ಕಳೆದುಕೊಂಡಿರೋ ಸತ್ಯಜಿತ್ ಅವರಿಗೆ ಅತಿಯಾದ ಮಧುಮೇಹ ಸಮಸ್ಯೆ ಇದೆ. ಇನ್ನು 72 ವರ್ಷದ ನಟನ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿದೆ ಅಂತ ಕುಟುಂಬಸ್ಥರು ತಿಳಿಸಿದ್ದಾರೆ. ಬೌರಿಂಗ್ ಆಸ್ಪತ್ರೆ ವೈದ್ಯರು ನಟ ಸತ್ಯಜಿತ್ ಗೆ ಚಿಕಿತ್ಸೆ ಮುಂದುವರಿಸಿದ್ದಾರೆ.

About The Author