www.karnatakatv.net. ವಿಶ್ವದೆಲ್ಲಡೆ ಈಗ ಐಪಿಎಲ್ ಹಬ್ಬ ರಂಗೇರುತ್ತಿದೆ , ನಂತರ ಟಿ20 ವಿಶ್ವಕಪ್ ಶುರುವಾಗಲಿದ್ದು . ಇದಕ್ಕಿನ್ನೇನು ಕ್ಷಣಗಣನೆ ಬಾಕಿ ಇದೆ , ಐಪಿಲ್ ಟೂರ್ನಿ ಅಕ್ಟೋಬರ್ 15 ರಂದು ಕೊನೆಗೊಂಡರೆ ನಂತರ ಅಕ್ಟೋಬರ್ 17 ರಿಂದ ನವೆಂಬರ್ 14 ರ ವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಓಮನ್‌ನಲ್ಲಿ ಟಿ20 ಕಪ್ ನಡೆಯಲಿದೆ.
ಈಗಾಗಿ ಐಪಿಎಲ್ ಮುಗಿದ ಮೇಲೆ ಟಿ 20 ಗಾಗಿ ಕಾಯುತ್ತಿದ್ದಾರೆ. ಕ್ರಿಕೇಟ್ ಅಭಿಮಾನಿಗಳು ,ಈಗಿರುವಾಗ ಟಿ 20 ವಿಶ್ವಕಪ್ ಗೆ ಸಂಭoದಿಸಿ ನಾಲ್ಕು ದೇಶಗಳು ತಮ್ಮ ಆಕರ್ಶಕ ಜೆರ್ಸಿಗಳನ್ನು ಸಂತಸದಿoದ ಬಿಡುಗಡೆಗೊಳಿಸಿವೆ . ಅಕ್ಟೋಬರ್ 12 ರ ಮಂಗಳವಾರದ ವೇಳೆ ಐರ್ಲೆಂಡ್ ,ಸ್ಕಾಟ್ಲೆಂಡ್ , ನಮೀಬಿಯಾ ಶ್ರೀಲಂಕಾ ದೇಶಗಳು ತಮ್ಮ ನೂತನ ಜೆರ್ಸಿ ಬಿಡುಗಡೆಯನ್ನು ಮಾಡಿವೆ. ಸ್ಕಾಟ್ಲೆಂಡ್ ದೇಶದ ಆಟಗಾರರು ತಿಳಿ ನೇರಳೆ ಮತ್ತು ಕಡು ನೇರಳೆ ಬಣ್ಣದಲ್ಲಿದ್ದರೆ. ಐರ್ಲೆಂಡ್ ದೇಶದ ಆಟಗಾರರು ತಿಳಿ ಹಸಿರು ಮತ್ತು ಕಡು ಹಸಿರು ಬಣ್ಣದ ಜೆರ್ಸಿ ಧರಿಸಿದ್ದಾರೆ, ನಮೀಬಿಯಾ ಆಟಗಾರರು ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದ ವಿನ್ಯಾಸದ ಜೆರ್ಸಿ ಧರಿಸಿದ್ದಾರೆ. ಶ್ರೀಲಂಕಾ ಮಾತ್ರ ವಿಷೇಶವಾಗಿ ಎರಡು ಬಣ್ಣಗಳಲ್ಲಿ ವಿಭಿನ್ನ ಜೆರ್ಸಿಯನ್ನು ಹೊಂದಿದೆ. ಒಟ್ಟು 16 ದೇಶಗಳು ವಿಶ್ವ ಟಿ20 ಕ್ರಿಕೇಟ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ . ಗ್ರೂಪ್- ಎ , ಗ್ರೂಪ್-ಬಿ, ಗ್ರೂಪ್-1 ಮತ್ತು ಗ್ರೂಪ್-2 ಹೀಗೆ ನಾಲ್ಕು ಗ್ರೂಪ್ಗಳ ಮೂಲಕ ಟೂರ್ನಿ ನಡೆಯಲಿದೆ. ನಮ್ಮ ಭಾರತ ಇದರಲ್ಲಿ ಗ್ರೂಪ್-2 ರಲ್ಲಿ ಆಡಲಿದೆ. ಅಕ್ಟೋಬರ್ 13 ರ ಬುಧವಾರ ಟೀಮ್ ಇಂಡಿಯಾದ ಜೆರ್ಸಿ ಬಿಡುಗಡೆಯಾಗಲಿದೆ ಎಂದು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ ಹೇಳಿದೆ.
ಸಂಪತ್ ಶೈವ , ನ್ಯೂಸ್ ಡೆಸ್ಕ್ ,ಕರ್ನಾಟಕ ಟಿವಿ