ಕೇರಳಾ: ಮಳೆಗೆ ತತ್ತರಿಸುತ್ತಿರುವ ಕೇರಳಾದಲ್ಲಿ ಭೂಕುಸಿತ-ಪ್ರವಾಹವುಂಟಾಗಿ ಇದೂವರೆಗೆ ಸುಮಾರು 24 ಮಂದಿ ಜೀವ ಕಳೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕೇರಳಾದ 11 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಣೆ ಮಾಡಿದೆ. ಮೇಘಸ್ಫೋಟದಿಂದ ರಾಜ್ಯದಲ್ಲಿ ಈ ರೀತಿ ವಿಪರೀತ ಮಳೆಯಾಗಿದೆ ಅಂತ ತಿಳಿದುಬಂದಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗುವ ಕಡಿಮೆ ಒತ್ತಡದ ಕಾರಣ ಇಂದೂ ಸಹ ಮಳೆ ಮುಂದುವರಿಯಲಿದ್ದು ಇಂದು ಸಂಜೆಯವರೆಗೂ ಕೇರಳಾದಲ್ಲಿ ಭರ್ಜರಿ ಮಳೆಯಾಗಲಿದೆ ಅಂತಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇಡುಕ್ಕಿಯ ಕೊಕ್ಕಾಯರ್ ಮತ್ತು ಕೊಟ್ಟಾಯಂನ ಕೂಟಿಕ್ಕಲ್ ಎಂಬಲ್ಲಿ ಪ್ರಬಲವಾಗಿ ಭೂಕುಸಿತ ಸಂಭವಿಸಿದೆ. ಪಥನಂತಿಟ್ಟ, ಇಡುಕ್ಕಿ, ಎರ್ನಾಕುಲಂ, ತ್ರಿಶೂರ್, ಮಲಪ್ಪುರಂ ಮತ್ತು ಆಲಪ್ಪುಳ ದಲ್ಲಿತಲಾ ಒಂದೊಂದು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ಪಡೆ ಹಾಗೂ ಹೆಚ್ಚುವರಿ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗಿದೆ.
ಇನ್ನು ಕೇರಾಳದಲ್ಲಿ ಮಳೆಯ ಅವಾಂತರದಿಂದ ಉಂಟಾಗಿರುವ ನಷ್ಟ, ಜೀವ ಹಾನಿ ಕುರಿತಾಗಿ ಕೇಂದ್ರ ಸರ್ಕಾರ ಸಂಪೂರ್ಣ ವಿವರವನ್ನು ಪಡೆದುಕೊಂಡಿದ್ದು, ರಾಜ್ಯಕ್ಕೆ ಎಲ್ಲಾ ರೀತಿಯ ನೆರವು ನೀಡೋದಾಗಿ ತಿಳಿಸಿದೆ.