Friday, July 11, 2025

Latest Posts

ಕೇಂದ್ರ ಸರ್ಕಾರಿ ನೌಕರರಿಗೆ ದೀಪಾವಳಿ ಉಡುಗೊರೆ

- Advertisement -

ಕೊರೋನ ಕಾಲಿಟ್ಟಿದ್ದೆ ಇಟ್ಟಿದ್ದು , ಎಷ್ಟೋ ಮಂದಿ ಕೆಲಸ ಕಳೆದುಕೊಂಡರು ಇನ್ನೂ ಕೆಲವರು ಅರ್ಧ ಸಂಬಳ ತೆಗೆದುಕೊಳ್ಳುವ ಪರಿಸ್ಥಿತಿ ಬಂದೊದಗಿತು , ಮತ್ತು ಸರ್ಕಾರಿ ಉದ್ಯೋಗಿಗಳೂ ಸಹ ಬಿಡುವಿಲ್ಲದೆ ಕೆಲಸವನ್ನು ಮಾಡಿದರು ಮತ್ತು ಆರ್ಥಿಕ ಪರಿಸ್ಥಿತಿ ಎದುರಾಗಿ ಕೆಲವೊಂದು ಸಲ ಕಡಿಮೆ ಸಂಬಳವನ್ನು ಸಹ ತೆಗೆದುಕೊಂಡರು.
ಆದರೆ ಇದೀಗ ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ ಭರ್ಜರಿ ಉದ್ಯೋಗದ ಆಫರ್ ನೀಡಿದೆ .
ಕಳೆದ ಮೂರು ತಿಂಗಳ ಹಿಂದೆ ಜುಲೈನಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಸರ್ಕಾರ. ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಡಿಎ ಮತ್ತು ಡಿ ಆರ್ ಅನ್ನು ಅನ್ನು ಶೇ 11 ರಿಂದ ಶೇ28 ಕ್ಕೆ ಹೆಚ್ಚಿಸಿತ್ತು ಇದರ ಬೆನ್ನಲ್ಲೆ ಮತ್ತೆ ದಿಪಾವಳಿಯ ಬಂಪರ್ ಉಡುಗೊರೆ ನೀಡಿದೆ .
ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಶೇಖಡ 3 ರಷ್ಟು ಭತ್ಯೆ ಹೆಚ್ಚಿಸಲು ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಮಿತಿ ಅನುಮೋದಿಸಿದೆ .
ಕೋವಿಡ್-19 ಏಕಾಏಕಿ ಜನವರಿ 2020 ರಿಂದ ಜೂನ್ 2021 ರವರೆಗೆ ಡಿಎ ಹೆಚ್ಚಳವನ್ನು 2020 ರಲ್ಲಿ ಸ್ಥಗಿತಗೊಳಿಸಲಾಯಿತು . ಈ ಹಿನ್ನಲೆ ಈಗ ಮತ್ತೊಮ್ಮೆ ಡಿ ಎ ಹೆಚ್ಚಳಕ್ಕೆ ಕೇಂದ್ರ ಮುಂದಾಗಿದೆ .
ಡಿ ಎ ಹೆಚ್ಚಳದಲ್ಲಿ ಕೇಂದ್ರ ಸರ್ಕಾರಿ ನೌಕರರು ಸಾಕಷ್ಟು ಗೊಂದಲಕ್ಕೆ ಒಳಗಾಗಿದ್ದಾರೆ . ಕಾರಣ ಜನವರಿ 2020 ರಿಂದ 2021ರ ನಡುವೆ ನಿವೃತ್ತರಾದ ಕೇಂದ್ರ ಸರ್ಕಾರಿ ನೌಕರರು ಇದು ಅನವಯವಾಗುತ್ತದೋ ಇಲ್ಲವೋ ಎಂಬ ಗೊಂದಲದಲ್ಲಿದ್ದಾರೆ , ಕಾರಣ ಡಿ ಎ ಅವರ ಗ್ರಾಚ್ಯುಟಿ ರಜೆ , ಎನ್ಕಾಶ್ಮೆಂಟ್ ಮತ್ತು ಇತರ ನಿವೃತ್ತಿ ಪ್ರಯೋಜನಗಳ ಲೆಕ್ಕಾಚಾರಕ್ಕೆ ಅನ್ವಯಿಸುತ್ತದೆ. ಆದರೆ ಇದೆಲ್ಲವನ್ನು ಕೇಂದ್ರ ಸರ್ಕಾರ ಸೂಕ್ತವಾಗಿ ಪರಿಗಣಿಸಿ ಕೇಂದ್ರ ಸಕಾರದ ನೌಕರರು ಮತ್ತು ಪಿಂಚಣಿದಾರರಿಗೂ 3% ಡಿ ಎ ಹೆಚ್ಚಳವನ್ನು ಮಾಡಲು ಮುಂದಾಗಿದೆ .

7 ನೇ ವೇತನ ಆಯೋಗದ ಪ್ರಕಾರ , ಕೇಂದ್ರ ಸರ್ಕಾರಿ ನೌಕರರ ಕನಿಷ್ಟ ಮೂಲ ವೇತನ 18000 ಇದ್ದರೆ , ಕೇಂದ್ರ ಸರ್ಕಾರಿ ನೌಕರರು 3060 ರೂಗಳ ಡಿಎ ಅನ್ನು 2021 ರ ಜೂನ್ ವರೆಗೆ 17 ಶೇಖಡ ದರದಲ್ಲಿ ಪಡೆಯುತ್ತಾರೆ .
ಜುಲೈ 2021 ರಿಂದ ಕೇಂದ್ರ ಸರ್ಕಾರಿ ನೌಕರರು ಶೇ 28 ರಷ್ಟು ಡಿ ಎ ಪ್ರಕಾರ 5040 ರೂ . ಪಡೆಯಲಿದ್ದಾರೆ . ಇದರರ್ಥ ಮಾಸಿಕ ವೇತನದಲ್ಲಿ ರೂ 1980 ಹೆಚ್ಚಳ ಪಡೆಯಲಿದ್ದಾರೆ . ಇದೆ ಲೆಕ್ಕಾಚಾರದ ಅನ್ವಯ , ಪಿಂಚಣೀದಾರರ ಪಿಂಚಣಿಯನ್ನು ಸಹ ನಿರ್ಧರಿಸಲಾಗುವುದು .ಮತ್ತು 3% ಹೆಚ್ಚಳವನ್ನು ಮಾಡುವುದಾಗಿ ಕೇಂದ್ರ ಸರ್ಕಾರದ ಕ್ಯಾಬಿನೆಟ್ ಸಮಿತಿ ನಿರ್ಧರಿಸಿದೆ .
ಸಂಪತ್ ಶೈವ , ನ್ಯೂಸ್ ಡೆಸ್ಕ್ ,ಕರ್ನಾಟಕ ಟಿವಿ,

- Advertisement -

Latest Posts

Don't Miss