www.karnatakatv.net :
ಬಾಗಲಕೋಟೆ : ಕಾಂಗ್ರೆಸ್ಸಿನವರಿಗೆ ಹಿಂದುತ್ವ ಅನ್ನೋದೆ ಇಲ್ಲ ಅವರು ಬರಿ ಲೂಟಿ ಮಾಡುವ ಉದ್ದೇಶ ಹೊಂದಿದ್ದಾರೆ , ಕಾಂಗ್ರೇಸ್ಸಿನವರು ಇಲ್ಲಿಯವರೆಗೆ ಬರಿ ಟೆರರಿಷ್ಟ್ ಗಳನ್ನೇ ಹುಟ್ಟು ಹಾಕಿದ್ದಾರೆ , ಇಂತಹ ನಾಯಕರು ಇಂದು ಬಿಜೆಪಿಯಲ್ಲಿದ್ದಾರೆ , ದೇಶದ ವಿಚಾರ ಬಂದಾಗ ಹಿಂದುತ್ವ ,,ಧರ್ಮ ಸಂಸ್ಕೃತಿ ,ಮಾನ ಮರ್ಯಾದೆ ಏನು ಇಲ್ಲ ಮೊದಲಿನ ತರ ಬಿಜೆಪಿ.. ಬಿಜೆಪಿ ಆಗಿ ಉಳಿದಿಲ್ಲ ಇದು ಓರಿಜಿನಲ್ ಬಿಜೆಪಿ ಅಲ್ಲ ,ಇದು ಕಲೆಬೆರಕೆ ಪಕ್ಷ ಎಂದು ಬಾಗಲಕೋಟೆಯಲ್ಲಿ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಪ್ರಮೋದ್ ಮುತಾಲಿಕ್ ರವರು ಮುಂದಿನ ಚುನಾವಣೆಗಳಲ್ಲಿ ಸ್ಫರ್ಧೆ ಮಾಡುವುದಿಲ್ಲ ಎಂದು ಹೇಳಿದ್ದಾರೆ .ಇದರ ಬದಲಾಗಿ ನಾನು ಹಿಂದುತ್ವ ಹೋರಾಟ ಮಾಡುತ್ತೇನೆ ಎಂದು ಬಾಗಲಕೋಟೆಯಲ್ಲಿ ಹೇಳಿದ್ದಾರೆ. ಬಿಜೆಪಿ ಈಗ ಕಲಬೆರಕೆ ಪಕ್ಷ , ಇವತ್ತು ಬಿಜೆಪಿಗೆ ಶೇಖಡ 60-70 ರಷ್ಟು ಮಂದಿ ಕಾಂಗ್ರೇಸ್ ,ಜೆಡಿಎಸ್ ಪಕ್ಷದಿಂದ ಬಂದಿದ್ದಾರೆ . ಕಮ್ಯುನಿಷ್ಟರು ಸಹ ಬಂದಿದ್ದಾರೆ . ಇನ್ನ ಶೇಖಡಾ – 30 ರಿಂದ 40 ರಷ್ಟು ಮಾತ್ರ ಬಿಜೆಪಿಯವರು ಇದ್ದಾರೆ ಎಂದು ಮುತಾಲಿಕ್ ಹೇಳಿದ್ದಾರೆ .
ಮತಾಂತರದ ಬಗ್ಗೆ ವಿಧಾನ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು , ಹೊಸದುರ್ಗ ಶಾಸಕ ಗೂಳಿಹಟ್ಟಿ ಶೇಖರ್ ಈ ವಿಚಾರ ಚರ್ಚೆಗೆ ತಂದ್ರು ,ಹಾಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ , ನಮ್ಮ ದೇಶದಲ್ಲಿ ಶೇಖಡಾ 99 ರಷ್ಟು ಕ್ರಿಷ್ಚಿಯನ್ನರು ಮತಾಂತರ ಆದವರು ಇವರುಗಳು ಒತ್ತಾಯ ,ಆಸೆ, ಆಮಿಷಗಳಿಂದ ಮತಾಂತರ ಆಗಿದ್ದಾರೆ . ಲಂಬಾಣಿ ತಾಂಡಾಗಳಿಗೆ ಪಾದ್ರಿಗಳು ನುಗ್ಗುತ್ತಿದ್ದಾರೆ . ಅವರನ್ನು ಗೋವಾಗೆ ಕರೆದುಕೊಂಡು ಹೋಗಿ ಮತಾಂತರ ಮಾಡುತ್ತಾರೆ . ನವೆಂಬರ್ 12 ರಂದು ಮುಖ್ಯಮಂತ್ರಿ ಬಳಿ ಹೋಗುತ್ತೇವೆ , ಮತಾಂತರ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ ಮಾಡುತ್ತೇವೆ ಎಂದು ಕಿಡಿಕಾರಿದ್ದಾರೆ .
ಮತ್ತೆ ಪುನೀತ್ ರಾಜ್‌ಕುಮಾರ್ ಬಗ್ಗೆ ಮಾತನಾಡಿರುವ ಮುತಾಲಿಕ್ ನಟ ಪನೀತ್‌ಗೆ ಪದ್ಮಶ್ರೀ ನೀಡಬೇಕು ಪುನೀತ್ ಸಿನಿಮಾಗಳಲ್ಲಿ ಸಮಾಜಕ್ಕೆ ಮೆಸೇಜ್ ನೀಡ್ತಿದ್ರು. ಈಗಾಗಿ ನಟ ಪುನೀತ್ ರಾಜ್‌ಕುಮಾರ್ ರವರಿಗೆ ಪದ್ಮಶ್ರೀ ನೀಡಲೇಬೇಕು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವ್ಯಕ್ತ ಪಡಿಸಿದ್ದಾರೆ .
ಸಂಪತ್ ಶೈವ, ನ್ಯೂಸ್ ಡೆಸ್ಕ್ .ಕರ್ನಾಟಕಟಿವಿ