ಬೆಳಗಾವಿ ಜಿಲ್ಲೆಯ ವಿವಿಧ ಠಾಣೆಗಳ ಪೊಲೀಸರು 2020-21ರಲ್ಲಿ ಅಕ್ಟೋಬರ್ 31ರವರೆಗೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದು. ಒಟ್ಟು 206 ಪ್ರಕರಣಗಳನ್ನು ಬೇಧಿಸಲಾಗಿದ್ದು. ಇದರಿಂದ ಬರೊಬ್ಬರಿ 8 ಕೋಟಿ 58 ಲಕ್ಷ 23 ಸಾವಿರ 999 ರೂಪಾಯಿ ಮೌಲ್ಯದ ಬೆಲೆ ಬಾಳುವ ವಸ್ತುಗಳು ಹಾಗೂ ನಗದನ್ನು ಜಪ್ತಿ ಮಾಡಿ ಮಾಡಿದ್ದಾರೆ ಎಂದು ಎಸ್‍ಪಿ ಲಕ್ಷ್ಮಣ ನಿಂಬರಗಿ ಹೇಳಿದರು.
ಬೆಳಗಾವಿಯ ಪೊಲೀಸ್ ಗ್ರೌಂಡ್‍ನಲ್ಲಿ ಮಾಧ್ಯಮರೊಂದಿಗೆ ಮಾತನಾಡಿದ ಎಸ್‍ಪಿ ಲಕ್ಷ್ಮಣ ನಿಂಬರಗಿ ಅವರು, 2020ರಲ್ಲಿ 1 ಕೋಟಿ 5 ಲಕ್ಷ 4643 ರೂಪಾಯಿ ಮೌಲ್ಯದ 2 ಕೆಜಿ 336 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ರೆ, 2021 ಅಕ್ರೋಬರ್‍ವರೆಗೆ 27 ಲಕ್ಷ 25 ಸಾವಿರ ಮೌಲ್ಯದ 60 ರೂಪಾಯಿ ಮೌಲ್ಯದ 702.24 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಇನ್ನು 2020ರಲ್ಲಿ 7 ಲಕ್ಷ 74 ಸಾವಿರ 188 ರೂ. ಮೌಲ್ಯದ 17 ಕೆಜಿ 881 ಗ್ರಾಂ ಬೆಳ್ಳಿ ಆಭರಣಗಳು, 2021ರಲ್ಲಿ 52 ಸಾವಿರದ 900 ರೂ. ಮೌಲ್ಯದ 1 ಕೆಜಿ 275 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಇನ್ನು 2020ರಲ್ಲಿ 1 ಕೋಟಿ 10 ಲಕ್ಷ 95 ಸಾವಿರ 600 ರೂ.ನಗದು, 2021ರಲ್ಲಿ 10 ಲಕ್ಷ 6 ಸಾವಿರದ 850 ರೂಪಾಯಿ ನಗದು ಜಪ್ತಿ ಮಾಡಿಕೊಳ್ಳಲಾಗಿದೆ. ಅದೇ ರೀತಿ ಸಿಇಎನ್ ಪೊಲೀಸ್ ಠಾಣೆಯಿಂದ ಒಟ್ಟು 8 ಕೋಟಿ 58 ಲಕ್ಷ 23 ಸಾವಿರ 999 ರೂಪಾಯಿ ಮೌಲ್ಯದ ಬೆಲೆ ಬಾಳುವ ವಸ್ತುಗಳು ಹಾಗೂ ನಗದನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದರು.ಹೆಚ್ಚುವರಿ ಎಸ್‍ಪಿ ಅಮರನಾಥ್ ರೆಡ್ಡಿ, ಡಿಎಆರ್ ಎಸ್‍ಪಿ ಕಾಶಪ್ಪನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು