ಸೆನ್ಸಾರ್ ಮುಗಿಸಿದ ಅವತಾರ ಪುರುಷ ಡಿಸೆಂಬರ್ 10 ಕ್ಕೆ ಗ್ರಾಂಡ್ ಎಂಟ್ರಿ

ಕಾಮಿಡಿ ಕಿಂಗ್ ಎಂದೇ ಖ್ಯಾತರಾಗಿರುವ ಶರಣ್ ಅಭಿನಯದ ಅವತಾರ್ ಸಿನೆಮಾ ಡಿಸೆಂಬರ್ 10 ಕ್ಕೆ ತೆರೆಗೆ ಬರುತ್ತಿದೆ .ಈ ಬಗ್ಗೆ ಅವತಾರ್ ಚಿತ್ರದ ನಿರ್ಮಾಪಕ
ಪುಷ್ಕರ್ ಮಲ್ಲಿಕಾರ್ಜುನಯ್ಯ ಚಿತ್ರದ ಬಿಡುಗಡೆಯ ದಿನಾಂಕವನ್ನು ಘೋಷಿಸಿದ್ದಾರೆ .
ಟೀಸರ್ ಹಾಗು ಟ್ರೇಲರ್ ನಿಂದ ಈಗಾಗಲೇ ಸಾಕಷ್ಟು ಗಮನ ಸೆಳೆದಿರುವ ಚಿತ್ರ ಇದಾಗಿದೆ . ಶರಣ್ ರವರು ಹಿಂದೆoದು ಕಾಣದ ರೀತಿಯಲ್ಲಿ ಸಸ್ಪೆನ್ಸ್ ಥ್ರಿಲ್ಲಿಂಗ್ ಇರುವ ಚಿತ್ರದಲ್ಲಿ ಮಿಂಚಲಿದ್ದಾರೆ .
ಈಗಾಗಲೇ ಅಫೀಶಿಯಲ್ ಪೋಷ್ಟರ್ ಮೂಲಕ ಅಭಿಮಾನಿಗಳ ಗಮನವನ್ನು ಸೆಳೆದಿದೆ. ಅವತಾರ ಪುರುಶ ಚಿತ್ರ .ಈ ಚಿತ್ರದಲ್ಲಿ ಶರಣ್ . ಆಶಿಕಾ ರಂಗನಾಥ್ ,ಶ್ರಿನಗರ ಕಿಟ್ಟಿ ,ಸಾಯಿಕುಮಾರ್ .ಸುಧಾರಾಣಿ ,ಭವ್ಯ ಅಭಿನಯಿಸುತ್ತಿದ್ದಾರೆ . ಚಿತ್ರದಲ್ಲಿ ಮುಖ್ಯವಾಗಿ ಸಿಕ್ಕಾಪಟ್ಟೆ ಶಾಖ್ ನೊಂದಿಗೆ ಭಯಮೂಡಿಸುವಂತಹ ಬ್ಲಾಕ್ ಮ್ಯಾಜಿಕ್ ಚಿತ್ರಕಥೆ ಈ ಚಿತ್ರದಲ್ಲಿದೆಯಂತೆ . ಶರಣ್ ನಟನೆಯ ಅವತಾರ ಪುರುಷ ಚಿತ್ರ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ.
ಅವತಾರ ಪುರುಷ 1 ಮತ್ತು ಅವತಾರ ಪುರುಷ 2 ಹೆಸರಿನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ . ಅವತಾರ ಪುರುಷ ಡಿಸೆಂಬ್ 10 ಕ್ಕೆ ತೆರೆಗೆ ಬರಲಿದೆ .

ಸಂಪತ್ ಶೈವ,ಕರ್ನಾಟಕ ಟಿವಿ

About The Author