ದುಬೈ: ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಪರಾಭವಗೊಳಿಸುವುದರ ಮೂಲಕ
ಎರಡನೇ ಬಾರಿ ಪೈನಲ್ ತಲುಪಿದೆ. ಪಂದ್ಯವನ್ನು ಗೆಲ್ಲಲು ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ಆಟದ ವ್ಯೆಖರಿಯೇ ಕಾರಣ.
ಐಸಿಸಿ ಟಿ20 ವಿಶ್ವಕಪ್‌ನ. ಸೆಮಿಪೈನಲ್‌ನಲ್ಲಿ ಟಾಸ್ ವಿನ್ ಆದಂತಹ ಆಸ್ಟ್ರೇಲಿಯಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 177 ರನ್‌ಗಳ ಗುರಿಯನ್ನ ನೀಡಿತ್ತು. ಮೊದಲ ಓವರ್‌ನಲ್ಲೇ 3ನೇ ಎಸತಕ್ಕೆ ಶಾಹಿದ್ ಅಫ್ರಿದಿ ಅವರು ಆಸ್ಟ್ರೇಲಿಯಾದ ಓಪನರ್ ಹಾಗೂ ನಾಯಕ ಆರನ್ ಫಿಂಚ್‌ನ ವಿಕೆಟ್ ಪಡೆಯುವುದರ ಮೂಲಕ ಆಸೀಸ್ ಗೆ ಆಘಾತ ಉಂಟುಮಾಡಿತು. ಪವರ್ ಪ್ಲೇ ಅಂತ್ಯಕ್ಕೆ 1 ವಿಕೆಟ್ ನಷ್ಟಕ್ಕೆ 52 ರನ್ ಗಳಿಸಿತ್ತು.
50 ರನ್‌ಗಳ ಜೊತೆಯಾಟ ಆಡುತ್ತಿದ್ದ ವಾರ್ನರ್ ಹಾಗೂ ಮಿಚೆಲ್‌ಗೆ 7ನೇ ಓವರನಲ್ಲಿ ಪಾಕಿಸ್ತಾನ ಬ್ರೇಕ್ ಹಾಕಿತು. 22 ಬಾಲ್‌ಗಳಿಗೆ 28 ರನ್ ಸಿಡಿಸಿ ಶಾದಾಬ್ ಖಾನ್‌ಗೆ ವಿಕೆಟ್ ನೀಡಿದರು . ನಂತರ ಕಣಕ್ಕಿಳಿದ ಸ್ಟೀವನ್ ಸ್ಮಿತ್ ಕೇವಲ 5 ರನ್‌ಗಳಿಗೆ ಔಟ್ ಆದರು. 10 ಓವರ್ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 89 ರನ್‌ಗಳಿಸಿತು. ವಾರ್ನರ್ 30 ಎಸತಗಳಿಗೆ 40 ರನ್ ಗಳಿಸಿ ಶಾದಾಬ್ ಖಾನ್ ವಿಕೆಟ್ ಒಪ್ಪಿಸಿದರು.
13ನೇ ಓರ‍್ನಲ್ಲಿ 10 ಎಸತಗಳಿಗೆ ಕೇವಲ 7 ರನ್ ಸಿಡಿಸಿ ಮ್ಯಾಕ್ಸ್ ವೆಲ್ ಔಟಾದರು. 14ನೇ ಓವರ್ ಅಂತ್ಯಕ್ಕೆ ಆಸೀಸ್‌ಗೆ 36 ಎಸತಗಳಿಗೆ 68 ರನ್‌ಗಳ ಅವಶ್ಯಕತೆ ಇತ್ತು ಮಾರ್ಕಸ್ ಸ್ಟೇನಿಸ್ ಹಾಗೂ ಮ್ಯಾಥ್ಯೋ ವೇಡ್ 17ನೇ ಓವರ್‌ನಲ್ಲಿ 50 ರನ್‌ಗಳ ಜೊತೆಯಾಟ ಪೂರೈಸಿದರು. 12 ಬಾಲ್‌ಗೆ 22 ರನ್‌ಗಳ ಅವಶ್ಯಕತೆ ಇದ್ದಾಗ ಮ್ಯಾಥ್ಯೂ ವೇಡ್ ಹ್ಯಾಟ್ರಿಕ್ ಸಿಕ್ಸರ್ ಬಾರಿಸುವ ಮೂಲಕ ಆಸ್ಟ್ರೇಲಿಯಾ ತಂಡಕ್ಕೆ ಜಯ ತಂದು ಕೊಡುವ ಮೂಲಕ ಫೈನಲ್ ಗೆ ಲಗ್ಗೆ ಇಟ್ಟರು.