ದುಬೈ : ಭಾನುವಾರ ರಾತ್ರಿ ನಡೆದಂತಹ ಟಿ20 ವಿಶ್ವಕಪ್ ಚಾಂಪಿಯನ್ ಶಿಪ್ ನಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ಆಸ್ಟ್ರೇಲಿಯಾ ಗೆದ್ದು ಮೊದಲ ಬಾರಿಗೆ ಟಿ20 ವಿಶ್ವಕಪ್ ಚಾಂಪಿಯನ್ ಶಿಪ್‌ನ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್‌ನ ತಂಡ, ಕ್ಯಾಪ್ಟನ್ ಕೇನ್ ವಿಲಿಯಮ್ಸನ್ 48 ಎಸೆತಗಳಲ್ಲಿ 85 ರನ್ ಹೊಡೆಯುವುದರ ಮೂಲಕ ಹೋರಾಟಯುತ ಬ್ಯಾಟಿಂಗ್ ಮಾಡಿದರು. ಸಹ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 172 ರನ್‌ಗಳ ದೊಡ್ಡ ಮೊತ್ತವನ್ನೇ ಕಲೆಹಾಕಿತ್ತು.
ಆದರೆ ಸೆಮಿಪೈನಲ್ ನಲ್ಲಿ ಬಲಿಷ್ಠ ಪಾಕಿಸ್ತಾನವನ್ನೇ ಸೋಲಿಸಿ ಆತ್ಮವಿಶ್ವಾಸದಲ್ಲಿದ್ದ ಆಸೀಸ್ 18.5 ಎಸೆತಗಳಲ್ಲಿ 173 ರನ್ ಬಾರಿಸುವ ಮೂಲಕ ಜಯಶಾಲಿಗಳಾದರು, ಎ. ಫಿಂಚ್ 2.3 ಓವರ್‌ನಲ್ಲಿ ಏಳು ಎಸೆತಗಳಿಗೆ 5 ರನ್ ಬಾರಿಸಿ ಟ್ರೆಂಟ್ ಬೌಲ್ಟ್ ಅವರ ಬೌಲಿಂಗ್‌ನಲ್ಲಿ ಡರಿಲ್ ಮಿಚೆಲ್ ಅವರಿಗೆ ಕ್ಯಾಚ್ ಒಪ್ಪಿಸಿದರು. ಓಪನರ್ ಡೇವಿಡ್ ವಾರ್ನರ್ 38 ಎಸತಗಳಿಗೆ 53 ರನ್ ಹೊಡೆಯುವುದರ ಮೂಲಕ ಜೇಮ್ಸ್ ನೇಶಮ್ ಗೆ ವಿಕೆಟ್ ಒಪ್ಪಿಸಿದರು.
ನಂತರ ಜವಾಬ್ದಾರಿ ಹೊತ್ತು ಬ್ಯಾಟಿಂಗ್ ಮಾಡಿದ ಮಿಚೆಲ್ ಮಾರ್ಷ್ 50 ಎಸೆತಗಳಲ್ಲಿ 77 ರನ್ ಬಾರಿಸಿ ಅಜೇಯರಾಗುವುದರ ಮೂಲಕ ಪಂದ್ಯದ ಶ್ರೇಷ್ಠ ಆಟಗಾರ ಎಂಬ ಗೌರಕ್ಕೆ ಭಾಜನರಾದರು. ಆಗೆಯೇ ಡೇವಿಡ್ ವಾರ್ನರ್ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಗೌರವಕ್ಕೆ ಪಾತ್ರರಾದವರಾಗಿ ಮೊದಲ ಬಾರಿಗೆ ಟಿ20 ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿದ್ದಾರೆ.
ಮೊದಲ ಬಾರಿಗೆ ಟಿ 20 ವಿಶ್ವಕಪ್ ಗೆ ಮುತ್ತಿಕ್ಕಿದ ಆಸ್ಟ್ರೇಲಿಯಾ..!
- Advertisement -
- Advertisement -