- Advertisement -
ನವದೆಹಲಿ: ರಾಜ್ಯದಿಂದ ಈ ಬಾರಿ ಆಯ್ಕೆಯಾಗಿರೋ ನೂತನ ಸಂಸದರಿಗೆ ಡಿಕೆ ಬ್ರದರ್ಸ್ ಭರ್ಜರಿ ಡಿನ್ನರ್ ಪಾರ್ಟಿ ಏರ್ಪಡಿಸಿದ್ದಾರೆ.
ಸಂಸದ ಡಿ.ಕೆ ಸುರೇಶ್ ನವದೆಹಲಿಯ ನಿವಾಸದಲ್ಲಿ ರಾಜ್ಯದಿಂದ ಆಯ್ಕೆಯಾಗಿರೋ ಸಂಸದರಿಗೆ ಔತಣ ಕೂಟ ಏರ್ಪಡಿಸಲಾಗಿದೆ. ಇಂದು ರಾತ್ರಿ ನಡೆಯಲಿರೋ ಡಿನ್ನರ್ ಪಾರ್ಟಿಯಲ್ಲಿ ರಾಜ್ಯದ ಎಲ್ಲಾ ಸಂಸದರು ಭಾಗಿಯಾಗೋ ಸಾಧ್ಯತೆಯಿದೆ. ಇದೇ ವೇಳೆ ಸಂಸದರೊಂದಿಗೆ ಸಚಿವ ಡಿ.ಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್ ರಾಜ್ಯದ ಮಹತ್ವದ ಯೋಜನೆಗಳಾದ ಮಹದಾಯಿ ನದಿ ಯೋಜನೆ, ಮೇಕೆದಾಟು ಅಣೆಕಟ್ಟು ಸೇರಿದಂತೆ ಇತರೆ ಯೋಜನೆಗಳ ಬಗ್ಗೆ ಚರ್ಚೆ ಮಾಡುವ ಸಾಧ್ಯತೆಯಿದೆ.
ಇನ್ನು ಸಚಿವ ಡಿ.ಕೆ ಶಿವಕುಮಾರ್ ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರನ್ನೂ ಭೇಟಿಯಾಗಿ ಅಭಿನಂದನೆ ಸಲ್ಲಿಸಲಿದ್ದಾರೆ.
ದೇವೇಗೌಡರು ಮಾಡಿದ್ದಾರಾ ಮಾಸ್ಟರ್ ಪ್ಲಾನ್…? .ತಪ್ಪದೇ ಈ ವಿಡಿಯೋ ನೋಡಿ.
- Advertisement -