ಇನ್ನೆಂಟು ವರ್ಷದ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಭಾರತ ಚೀನಾವನ್ನು ಹಿಮ್ಮೆಟ್ಟಿಸಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಳ್ಳಲಿದೆ ಅಂತ ಯುನೈಟೆಡ್ ರಾಷ್ಟ್ರಗಳ ವರದಿ ತಿಳಿಸಿದೆ.
ಇದೀಗ 1.37ಬಿಲಿಯನ್ ಜನ ಸಂಖ್ಯೆ ಹೊಂದಿರೋ ಭಾರತ 2ನೇ ಸ್ಥಾನದಲ್ಲಿದೆ. ಇನ್ನು 1.43 ಬಿಲಿಯನ್ ಜನಸಂಖ್ಯೆ ಹೊಂದುವ ಮೂಲಕ ಚೀನಾ ಮೊದಲನೇ ಸ್ಥಾನದಲ್ಲಿದೆ. ಆದ್ರೆ 2027ರ ವೇಳೆಗೆ , ಅಂದ್ರೆ ಇನ್ನೆಂಟು ವರ್ಷಗಳಲ್ಲಿ ಜನಸಂಖ್ಯಾ ಸ್ಫೋಟದಲ್ಲಿ ಭಾರತ ನಂಬರ್ 1 ಸ್ಥಾನಕ್ಕೆ ಜಿಗಿಯಲಿದೆ ಅಂತ ಯುಎನ್ ವರದಿ ಬಹಿರಂಗಪಡಿಸಿದೆ.
ಪ್ರಸ್ತುತದಿಂದ 2055ರ ವೇಳೆ ಸುಮಾರು 55 ರಾಷ್ಟ್ರಗಳಲ್ಲಿನ ಜನಸಂಖ್ಯೆ ಪ್ರಮಾಣ ಸುಮಾರು ಶೇ.1%ರಷ್ಚು ಕುಸಿಯಲಿದೆ. ಈಗಾಗಲೇ 2010ರಿಂದ ಸುಮಾರು 27 ರಾಷ್ಟ್ರಗಳಲ್ಲಿ ಅತ್ಯಧಿಕವಾಗಿ ಜನಸಂಖ್ಯಾ ಪ್ರಮಾಣ ಇಳಿಕೆಯಾಗಿರೋದು ಕಂಡುಬಂದಿದೆ. ಇದಕ್ಕೆ ವಲಸೆ ಹಾಗೂ ಫಲವತ್ತತೆಯ ಕೊರತೆ ಕಾರಣ ಅಂತ ಹೇಳಲಾಗಿದೆ. ಆದ್ರೆ ಜನಸಂಖ್ಯೆಯಲ್ಲಿ ನಂಬರ್ 1 ಆಗಲಿರೋ ಭಾರತದಲ್ಲಿ ಜನಸಂಖ್ಯಾ ಸ್ಫೋಟದಿಂದ ಉಂಟಾಗುವ ನಿರುದ್ಯೋಗ, ಬಡತನ ಮತ್ತಿತರ ದುಷ್ಪರಿಣಾಮಗಳನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.
ಈ ಪ್ರಾಜೆಕ್ಟ್ ಸಕ್ಸಸ್ ಆದ್ರೆ ಭಾರತವೇ ನಂಬರ್ 1…!! ಮಿಸ್ ಮಾಡದೇ ಈ ವಿಡಿಯೋ ನೋಡಿ