Friday, December 13, 2024

Latest Posts

ಕೃಷಿ ಕಾಯ್ದೆ ಸರ್ಕಾರ ವಾಪಾಸ್ ಪಡೆದಿದ್ದಕ್ಕೆ ರಾಯಚೂರು ರೈತರಿಂದ ಸಂಭ್ರಮಾಚರಣೆ

- Advertisement -

ಸತತ ಒಂದು ವರ್ಷದಿಂದ ಕೃಷಿ ಕಾಯ್ದೆಗಳನ್ನು ರದ್ದು ಪಡಿಸುವಂತೆ ದೇಶದಲ್ಲಿ ರೈತರು ಪ್ರತಿಭಟನೆಯನ್ನು ನಡೆಸುತ್ತಿದ್ದರು , ಇದರ ಪ್ರತಿ ಫಲವಾಗಿ ನರೇಂದ್ರ ಮೋದಿಯವರು ಕೃಷಿ ಕಾಯ್ದೆಗಳನ್ನು ಹಿಂಪಡೆದಿದ್ದೇನೆ ಎಂದು ಘೊಷಿಸಿದ್ದಾರೆ . ಈ ಹಿನ್ನಲೆಯಲ್ಲಿ ರಾಯಚೂರಿನ ರೈತರು ಪಟಾಕಿ ಸಿಡಿಸಿ ಸಂಭ್ರಮಾಚರಣೆಯನ್ನು ಮಾಡಿದ್ದಾರೆ .
ರಾಯಚೂರಿನ ರೈತ ಮುಖಂಡ ಚಾಮರಸ ಮಾಲೀಪಾಟೀಲ್ ನೇತೃತ್ವದಲ್ಲಿ ಅವರ ಸ್ವಗ್ರಾಮದಲ್ಲೇ ನೂರಾರು ರೈತರೊಂದಿಗೆ ಸಂತಸ ವ್ಯಕ್ತಪಡಿಸಿದ್ದಾರೆ . ಇನ್ನೂ ನರೇಂದ್ರ ಮೋದಿಯವರ ನಿರ್ಧಾರ ಸ್ವಾಗತಿಸದ ರೈತರು ತಡವಾಗಿಯಾದರು ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಕಾಯ್ದೆ ಹಿಂಪಡೆದಿದ್ದಕ್ಕೆ ಹರುಷ ವ್ಯಕ್ತಪಡಿಸಿದ್ದಾರೆ . ಕರ್ನಾಟಕ ಟಿವಿ ಜೊತೆಗೆ ಸಂತಸ ಹಂಚಿಕೊoಡ ಚಾಮರಸ ಮಾಲೀಪಾಟೀಲ್ ಅವರು ದಕ್ಷಣ ಭಾರತದಲ್ಲಿ ಹೋರಾಟ ಪ್ರಭಲಗೊಳ್ಳುತ್ತಿರುವುದು ಮತ್ತು ದೇಶದ ಹಳ್ಳಿ ಹಳ್ಳಿಗೂ ಹೋರಾಟದ ರೂಪುರೇಷೆ ಇತ್ತು ಮುಂಬರುವ ಚುನಾವಣೆ ದೃಷ್ಟಿಕೋನ ಇಟ್ಟುಕೊಂಡು ಈಗಲಾದರು ಎಚ್ಚತ್ತಿದ್ದು ಒಳ್ಳೆಯದು ಎಂದರು .ನಮ್ಮ ರಾಜ್ಯದಲ್ಲು ರೈತ ವಿರೋಧಿ ನಿಲುವುಗಳನ್ನು ಕೈಬಿಡಬೇಕೆಂದು ಮನವಿ ಮಾಡಿದರು .

- Advertisement -

Latest Posts

Don't Miss