- Advertisement -
ಚಾಮರಾಜನಗರ : ಕಾವೇರಿ ನದಿಯಲ್ಲಿ ಸ್ನಾನ ಮಾಡಲು ಹೋಗಿ ಮೊಹಮ್ಮದ್ ಪೈಜರ್ (21 ) ನದಿಯಲ್ಲಿ ಕೊಚ್ಚಿಹೋದ ಘಟನೆ ಕೊಳ್ಳೆಗಾಲ ತಾಲ್ಲೂಕಿನ ಶಿವನ ಸಮುದ್ರದ ಬಳಿ ನಡೆದಿದೆ .
ವೀಕೆಂಡ್ ಹಿನ್ನೆಲೆಯಲ್ಲಿ ಬೆಂಗಳೂರಿನಿoದ ನಾಲ್ವರು ಯುವಕರು ಶಿವನ ಸಮುದ್ರ ಸಮೀಪದ ಜಲಪಾತ ವೀಕ್ಷಣೆಗೆ ಬಂದಿದ್ದರು . ಈ ಶಿವನ ಸಮುದ್ರದಲ್ಲಿ ನಾಲ್ಕು ಜನ ನೀರಿಗಿಳಿದಿದ್ದರು ನಾಲ್ವರ ಪೈಕಿ ಮೊಹಮ್ಮದ್ ಫೈಜರ್ ಎಂಬಾತ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಾನೆ , ಸ್ಥಳಕ್ಕೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಯುವಕನ ಶೋಧ ಕಾರ್ಯ ಮುಂದುವರೆದಿದ್ದು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ .
- Advertisement -