Friday, September 20, 2024

Latest Posts

ಈ ರಾಶಿಯವರು ತಿರುಗಾಡೋದ್ರಲ್ಲಿ ಹೆಚ್ಚು ಆಸಕ್ತಿ ಉಳ್ಳವರಂತೆ..!

- Advertisement -

ಒಂದೊಂದು ರಾಶಿಯವರಿಗೆ ಒಂದೊಂದು ಗುಣವಿರುತ್ತದೆ. ಕೆಲವರು ಯಾವಾಗಲೂ ನಗು ನಗುತ್ತಲಿರುತ್ತಾರೆ. ಮತ್ತೆ ಕೆಲವರು ಯಾವಾಗಲೂ ಸಿಡುಕುತ್ತಲಿರುತ್ತಾರೆ. ಇನ್ನು ಕೆಲವರದ್ದು ಹೆಚ್ಚು ಮಾತನಾಡುವ ಗುಣ, ಕೆಲವರುು ಮೌನಿ.. ಹೀಗೆ ಒಬ್ಬೊಬ್ಬರು ಒಂದೊಂದು ಗುಣಗಳನ್ನು ಹೊಂದಿರುತ್ತಾರೆ. ಇದೇ ರೀತಿ, ಪ್ರಯಾಣ ಮಾಡಲು ಬಯಸುವ ರಾಶಿಯವರ ಬಗ್ಗೆ ಇವತ್ತು ನಾವು ಹೇಳಲಿದ್ದೇವೆ.

ಮೇಷ: ಮೇಷ ರಾಶಿಯವರು ಪ್ರಯಾಣ ಪ್ರಿಯರು. ಇವರಿಗೆ ಹೊಸ ಹೊಸ ಜಾಗಕ್ಕೆ ಹೋಗಬೇಕು. ಅಲ್ಲಿನ ಬಗ್ಗೆ ಮಾಹಿತಿಗಳನ್ನು ಕಲೆಕ್ಟ್ ಮಾಡಬೇಕು ಅನ್ನೋ ಕುತೂಹಲವಿರುತ್ತದೆ. ಬರೀ ಪ್ರವಾಸಕ್ಕೆ ಹೋಗುವುದಲ್ಲದೇ, ಟ್ರೆಕ್ಕಿಂಗ್, ರಿವರ್ ರಾಫ್ಟಿಂಗ್,ಸ್ಕೂಬಾ ಡ್ರೈವಿಂಗ್ ರೀತಿಯ ಸಾಹಸಗಳು ಮಾಡಲು ಬಯಸುತ್ತಾರೆ.

ಮಿಥುನ: ಸ್ವಭಾವತ ಮೃದು ಸ್ವಭಾವದವರಾದ ಮಿಥುನ ರಾಶಿಯವರು ಕುಟುಂಬದೊಂದಿಗೆ, ಮಿತ್ರ ಬಳಗದೊಂದಿಗೆ ಪ್ರವಾಸಕ್ಕೆ ಹೋಗುತ್ತಾರೆ. ಅದು ಬಿಟ್ಟರೆ ಸೋಲೋ ಟ್ರಿಪ್ ಮಾಡಲು ಸ್ವಲ್ಪ ಕಷ್ಟ. ಯಾಕಂದ್ರೆ ಪ್ರವಾಸವನ್ನು ಎಂಜಾಯ್ ಮಾಡಬಯಸುವ ಇವರು, ತಮ್ಮ ನೆಚ್ಚಿನವರೊಂದಿಗೆ ಪ್ರಯಾಣಿಸಲು ಬಯಸುತ್ತಾರೆ.

ಕರ್ಕ: ಕರ್ಕ ರಾಶಿಯವರಿಗೂ ಪ್ರವಾಸವೆಂದರೆ ಬಲು ಪ್ರೀತಿ. ಇವರು ಸಾಕಷ್ಟು ಜಾಗಗಳಿಗೆ ಭೇಟಿ ನೀಡಿ, ಅಲ್ಲಿ ಮಾಹಿತಿ ಸಂಗ್ರಹಿಸಲು ಇಚ್ಛಿಸುತ್ತಾರೆ. ಆದ್ರೆ ಇವರಿಗೆ ಪ್ರವಾಸಕ್ಕೆ ಹೋಗುವ ಅವಕಾಶ ಸಿಗುವುದು ಬಲು ಕಡಿಮೆ. ಇವರಿಗೆ ಪ್ರವಾಸಕ್ಕೆ ಹೋಗುವ ಆಸೆ ಏನೋ ಇರುತ್ತದೆ. ಆದ್ರೆ ಪ್ರವಾಸಕ್ಕೆ ಹೋದಾಗ ಅಲ್ಲಿ ಅಷ್ಟೋಂದು ಎಂಜಾಯ್ ಮಾಡುವುದಿಲ್ಲ. ಇದಕ್ಕೆ ಕಾರಣ ಅವರ ಆರೋಗ್ಯ. ಇವರು ಬಹುಬೇಗ ಆಯಾಸಗೊಳ್ಳುವ ಕಾರಣ, ಪ್ರವಾಸ ಮಾಡಲು ಇಷ್ಟವಿದ್ದರೂ, ಅದನ್ನು ಎಂಜಾಯ್ ಮಾಡುವುದಿಲ್ಲ.

ಮಕರ: ಯಾವುದಾದರೂ ಕೆಲಸಕ್ಕೆ ಇಳಿದರೆ, ಅದನ್ನ ಮಾಡೇ ಮುಗಿಸುತ್ತೇನೆ ಎಂದು ಪಣ ತೊಡುವ ಗುಣವುಳ್ಳ ರಾಶಿ ಅಂದ್ರೆ, ಅದು ಮಕರ ರಾಶಿಯವರು. ಹೀಗಾಗಿ ಇವರಿಗೆ ಎಲ್ಲಾದರೂ ಪ್ರಯಾಣಿಸುವ ಮನಸ್ಸಾದರೆ, ಯಾರು ಬರಲಿ ಬಿಡಲಿ, ಸೋಲೊ ಟ್ರಿಪ್ ಆದ್ರೂ ಹೋಗಿ ಬಿಡ್ತಾರೆ. ಮತ್ತು ಅದನ್ನ ಏಕಾಂತವಾಗಿ ಎಂಜಾಯ್ ಮಾಡ್ತಾರೆ. ಮತ್ತು ತಾವು ದುಡಿಯುವ ಅರ್ಧದಷ್ಟು ಹಣವನ್ನು ಇವರು ಪ್ರವಾಸಕ್ಕಾಗಿಯೇ ಖರ್ಚು ಮಾಡುತ್ತಾರೆ.

- Advertisement -

Latest Posts

Don't Miss