Spiritual: ದೇವಸ್ಥಾನಕ್ಕೆ ಹೋದಾಗ ಈ ನಿಯಮಗಳನ್ನು ತಪ್ಪದೇ ಪಾಲಿಸಿ

Spiritual: ಹಬ್ಬ ಹರಿದಿನಗಳಲ್ಲಿ, ರಜೆ ಇರುವ ಸಮಯದಲ್ಲಿ ಅಥವಾ ಸಮಯ ಸಿಕ್ಕಾಗ ನಾವು ದೇವಸ್ಥಾನಕ್ಕೆ ಹೋಗುತ್ತೇವೆ. ಭಕ್ತಿಯಿಂದಲೇ ಹೋಗುತ್ತೇವೆ. ಆದರೆ ಭಕ್ತಿಯಿಂದ ಇರುವುದಕ್ಕಿಂತ ಹೆಚ್ಚು ಕೆಲ ಎಡವಟ್ಟುಗಳನ್ನೇ ಮಾಡುತ್ತೇವೆ. ಹಾಗಾಗಿ ನಾವಿಂದು ದೇವಸ್ಥಾನಕ್ಕೆ ಹೋದಾಗ, ಯಾವ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಯೋಣ ಬನ್ನಿ..

ಭದ್ರತಾ ನಿಯಮಗಳನ್ನು ಉಲ್ಲಂಘಿಸಬೇಡಿ: ದೇವಸ್ಥಾನಕ್ಕೆ ಹೋದಾಗ ಭದ್ರತಾ ನಿಯಮಗಳನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಬೇಡಿ. ಉದಾಹರಣೆಗೆ ಫೋಟೋ ತೆಗೆಯುವುದು, ವೀಡಿಯೋ ಮಾಡುವುದು, ಅಥವಾ ಯಾವುದಾದರೂ ವಸ್ತುಗಳನ್ನು ಸ್ಪರ್ಶಿಸಬಾರದು. ಯಾವುದಾದರೂ ವಸ್ತುಗಳ ಉಪಯೋಗ ಮಾಡಬಾರದು ಎಂಬಿತ್ಯಾದಿ ಸೂಚನೆಗಳಿದ್ದಲ್ಲಿ, ಅಂಥ ಸಮಯದಲ್ಲಿ ನೀವು ಭದ್ರತಾ ನಿಯಮಗಳನ್ನು ಉಲ್ಲಂಘಿಸಬಾರದು.

ವಿಗ್ರಹಗಳನ್ನು ಸ್ಪರ್ಶಿಸಬೇಡಿ: ಯಾವ ದೇವಸ್ಥಾನಕ್ಕೆ ಹೋದರೂ ನಿಮಗೆ ವಿಗ್ರಹ ಸ್ಪರ್ಶಿಸುವ ಅವಕಾಶವಿದ್ದರೂ, ವಿಗ್ರಹ ಸ್ಪರ್ಶಿಸಬೇಡಿ. ಭಕ್ತಿಯಿಂದ ದೇವರ ದರ್ಶನ ಮಾಡಿದರೂ ಸಾಕು. ಏಕೆಂದರೆ, ಮನುಷ್ಯ ತನ್ನ ಕೈಯಿಂದ ವಿಗ್ರಹ ಸ್ಪರ್ಶಿಸಿದ್ದಲ್ಲಿ, ಅದರ ಪಾವಿತ್ರ್ಯತೆ ಮತ್ತು ಶಕ್ತಿ ಕ್ಷೀಣಿಸುತ್ತದೆ. ಹಾಗಾಗಿ ವಿಗ್ರಹ ಸ್ಪರ್ಶ ಮಾಡಬೇಡಿ.

ಸರಿಯಾಗಿ ಕುಳಿತುಕ“ಳ್ಳಿ: ದೇವಸ್ಥಾನಕ್ಕೆ ಹೋದಾಗ, ಅಲ್ಲಿ ಮನೆಯಲ್ಲಿ ಕೂರುವಂತೆ ಕಾಲು ಬಿಡಿಸಿ ಕೂರಬೇಡಿ. ಚಟ್ಟೆಮುಟ್ಟೆ ಹಾಕಿ, ಶಿಸ್ತಿನಿಂದ ದೇವಸ್ಥಾನದಲ್ಲಿ ಕುಳಿಕ“ಳ್ಳಬೇಕು.

ಪಾದರಕ್ಷೆಗಳನ್ನು ಸರಿಯಾಗಿ ಇರಿಸಿ: ದೇವಸ್ಥಾನದ ಆಚೆ ಪಾದರಕ್ಷೆಗಳನ್ನು ಸರಿಯಾಗಿ ಕ್ರಮದಲ್ಲಿ ಇರಿಸಬೇಕು. ಚರ್ಮದ ಚಪ್ಪಲಿ ಧರಿಸಿ, ದೇವಸ್ಥಾನಕ್ಕೆ ಹೋಗಬೇಡಿ.

ಪ್ರದಕ್ಷಿಣೆಯನ್ನು ತಪ್ಪಾಗಿ ಹಾಕಬೇಡಿ: ದೇವಸ್ಥಾನಕ್ಕೆ ಹೋದಾಗ ಸರಿಯಾದ ರೀತಿಯಲ್ಲಿ ಪ್ರದಕ್ಷಿಣೆ ಹಾಕಿದ್ದಲ್ಲಿ ಮಾತ್ರ, ಅದರ ಪುಣ್ಯ ನಿಮಗೆ ಸಿಗುತ್ತದೆ. ಅಲ್ಲದೇ ಸರಿಯಾದ ರೀತಿಯಲ್ಲಿ ಪ್ರದಕ್ಷಿಣೆ ಹಾಕುವುದು ನಿಮ್ಮ ಆರೋಗ್ಯಕ್ಕೂ ಉತ್ತಮ.

About The Author