Monday, December 23, 2024

Latest Posts

ಸಕ್ಕರೆ ನಾಡು ಮಂಡ್ಯದಲ್ಲಿ ರೈಡರ್ ಪ್ರೀ-ರಿಲೀಸ್ ಇವೆಂಟ್..!

- Advertisement -

www.karnatakatv.net:ಯುವರಾಜ ನಿಖಿಲ್ ಕುಮಾರ್ ಬಹುನಿರೀಕ್ಷಿತ ಸಿನಿಮಾ ‘ರೈಡರ್’ ಈಗಾಗಲೇ ಹಾಡುಗಳು ಹಾಗೂ ಟ್ರೈಲರ್‌ನಿಂದ ಸಖತ್ ಸುದ್ದಿ ಮಾಡುತ್ತಿದೆ. ಈಗ ‘ರೈಡರ್’ ರಿಲೀಸ್ ಡೇಟ್ ಘೋಷಣೆ ಮಾಡಿದ್ದು, ಇದೇ ತಿಂಗಳ 24ಕ್ಕೆ (ಡಿಸೆಂಬರ್) ರಾಜ್ಯಾದ್ಯಂತ ತೆರೆಕಾಣಲಿದೆ. ಇನ್ನೂ ಈ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮವನ್ನು ಸಕ್ಕರೆ ನಾಡಿನಲ್ಲಿ ಅದ್ದೂರಿ ನಡೆಸಲು ಪ್ಲಾನ್ ಮಾಡಲಾಗುತ್ತಿದೆ.

ಈಗ ತೆರೆಕಾಣಲಿರುವ ಕನ್ನಡದ ಬಹು ನಿರೀಕ್ಷೆಯ ಸಿನಿಮಾಗಳಲ್ಲಿ ನಿಖಿಲ್ ‘ರೈಡರ್’ ಕೂಡ ಒಂದಾಗಿದ್ದು, ಇದೇ ಕ್ರಿಸ್‌ಮಸ್ ಹಬ್ಬದಂದು ಸುಮಾರು 250 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ತೆರೆಕಾಣಲಿದೆ. ಆದರೆ, ಸಿನಿಮಾ ಬಿಡುಗಡೆಗೆ ಕೆಲದಿನಗಳ ಮುನ್ನ ಸಕ್ಕರೆ ನಾಡು ಮಂಡ್ಯದಲ್ಲಿ ದೊಡ್ಡ ಕಾರ್ಯಕ್ರಮವನ್ನ ನಡೆಸಲು ಚಿತ್ರತಂಡ ತೀರ್ಮಾನಿಸಿದೆ. ಕಳೆದ ಸಂಸತ್ತಿನ ಚುನಾವಣೆಯ ವೇಳೆ ನಿಖಿಲ್ ಮಂಡ್ಯ ಕ್ಷೇತ್ರದಿಂದ ಸುಮಲತ ಅವರ ವಿರುದ್ಧ ಸ್ಪರ್ಧಿಸಿ ಸೋಲನ್ನು ಅನುಭವಿಸಿದ್ದರು. ಆದರೆ, ದೊಡ್ಡ ಅಭಿಮಾನಿ ಬಳಗವನ್ನು ಸಂಪಾದಿಸಿದ್ದರು. ಇದೇ ಕಾರಣಕ್ಕೀಗ ಮಂಡ್ಯದಲ್ಲಿ ಕಾರ್ಯಕ್ರಮ ನಡೆಸಲು ಚಿತ್ರತಂಡ ಮುಂದಾಗಿದೆ ಎನ್ನಲಾಗುತ್ತಿದೆ.

‘ರೈಡರ್’ ಈ ಸಿನಿಮಾದಲ್ಲಿ ಕೇವಲ ಲವ್‌ಸ್ಟೋರಿ, ಆಕ್ಷನ್, ಸೆಂಟಿಮೆoಟ್ ಅಷ್ಟೇ ಅಲ್ಲ. ಇವೆಲ್ಲದರ ಜೊತೆ ಇದೇ ಮೊದಲ ಬಾರಿಗೆ ಕ್ರೀಡಾಪಟುವಾಗಿ ನಿಖಿಲ್ ಕುಮಾರ್ ಕಾಣಿಸಿಕೊಳ್ಳಲಿದ್ದಾರೆ. ಬಾಸ್ಕೆಟ್ ಬಾಲ್ ಆಟಗಾರನಾಗಿ ನಿಖಿಲ್ ಕಾಣಿಸಲಿದ್ದು ಕಾಶ್ಮೀರಿ ಪರ್ದೇಸಿ ನಿಖಿಲ್ ಜೋಡಿಯಾಗಿ ನಟಿಸಿದ್ದಾರೆ. ತೆಲುಗು ಮೂಲದ ವಿಜಯ್ ಕುಮಾರ್ ಕೊಂಡ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ, ಹಾಗೂ ರಾಜೇಶ್ ನಟರಂಗ್, ದತ್ತಣ್ಣ, ಗರುಡ ರಾಮ್, ಶೋಭ್‌ರಾಜ್, ಅಚ್ಯುತ್ ಕುಮಾರ್, ಚಿಕ್ಕಣ್ಣ, ಶಿವರಾಜ್ ಕೆ.ಆರ್. ಪೇಟೆ, ಮಂಜು ಪಾವಗಡ, ಅರ್ಜುನ್ ಗೌಡ, ಭಜರಂಗಿ ಗಿರೀಶ್, ಕಾಮಿಡಿ ಕಿಲಾಡಿ ಸಂತು, ಮಂಜು ಚಿಲ್ಲರ್ ಈಗೇ ಬಹುತಾರಗಣವೇ ಚಿತ್ರದಲ್ಲಿದೆ. ಹಾಗಾಗಿ ಯುವರಾಜ ನಿಕಿಲ್ ಅಭಿಮಾನಿಗಳು ಈ ಸಿನಿಮಾ ನೋಡಲು ಕುತೂಹಲದಿಂದ ಕಾಯುತ್ತಿದ್ದಾರೆ. ಹೀಗಾಗಿ ಈ ಬಾರಿ ಮಂಡ್ಯದಲ್ಲಿ ನಿಖಿಲ್ ಅಭಿಮಾನಿಗಳಿಗಾಗಿ ‘ರೈಡರ್’ ಪ್ರಿ ರಿಲೀಸ್ ಇವೆಂಟ್ ಮಾಡಲು ನಿರ್ಧರಿಸಿದ್ದಾರೆ.

ಶಿವನಂದಿ ಸಂಸ್ಥೆಯಿoದ ‘ರೈಡರ್’ ಸಿನಿಮಾವನ್ನು ನಿರ್ಮಿಸಿದ್ದು, ಲಹರಿ ಆಡಿಯೋ ಸಂಸ್ಥೆ ಸಹ ನಿರ್ಮಾಣ ಮಾಡಿದೆ. ಸುದ್ದಿಘೋಷ್ಠಿವೇಳೆ ಮಾತನಾಡಿದ ಲಹರಿ ವೇಲು “ನಮ್ಮ ಲಹರಿ ಸಂಸ್ಥೆ ಈ ಹಿಂದೆ ಮಹಾ ಕ್ಷತ್ರಿಯ, ಗಣೇಶನ ಗಲಾಟೆ ಹಾಗೂ ತೆಲುಗಿನ ರೋಜ ಚಿತ್ರಗಳನ್ನು ನಿರ್ಮಾಣ ಮಾಡಿತ್ತು. ಈಗ ಶಿವನಂದಿ ಎಂಟರ್ಟೈನ್ಮೆoಟ್ ಜೊತೆಗೂಡಿ ರೈಡರ್ ಚಿತ್ರವನ್ನು ನಿರ್ಮಾಣ ಮಾಡಿದ್ದೇವೆ. ನಮ್ಮ ಅಣ್ಣ ಮನೋಹರ ನಾಯ್ಡು ಅವರ ಮಕ್ಕಳಾದ ಚಂದ್ರು ಹಾಗೂ ನವೀನ್ ಈ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿರುವ ಹಾಡುಗಳು ಈಗಾಗಲೇ ಗೆದ್ದಿದ್ದು, ಸಿನಿಮಾ ಕೂಡ ಯಶಸ್ವಿಯಾಗುತ್ತೆ” ಎಂದು ಹೇಳಿದ್ದಾರೆ, ಹಾಗೂ ಈ ಮೂಲಕ ಲಹರಿ ಸಂಸ್ಥೆ ಸಿನಿಮಾಗಳ ನಿರ್ಮಾಣಕ್ಕೆ ಕಮ್‌ಬ್ಯಾಕ್ ಮಾಡಿದೆ.

- Advertisement -

Latest Posts

Don't Miss