ಬೆಂಗಳೂರು: ಕೆಂಪೇಗೌಡ ನಗರದ ಯೋಗ ಸಂಸ್ಥಾನದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ದಂತಹ ಯತೀಶ್ ಎಂಬುವರು ಮಹಿಳೆಯನ್ನು ಚುಡಾಯಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಕೆಂಪೇಗೌಡ ನಗರದ ಯೋಗ ಸಂಸ್ಥಾನದಲ್ಲಿ ಕಳೆದ ತಿಂಗಳ 15ರಂದು ಯತೀಶ್ ಎಂಬುವರು ಒಬ್ಬ ಮಹಿಳೆಯನ್ನು ಚುಡಾಯಿಸಿದ್ದರು ಎಂದು ಆರೋಪ ಕೇಳಿಬಂದಿದ್ದು ಮಹಿಳೆ ತನ್ನ ಗಂಡನಿಗೆ ತಿಳಿಸಿದ್ದಾಳೆ ಆನಂತರ ಗಂಡ ವಾಸು ಹಾಗೂ ಮೂವರು ಸೇರಿ ಯತೀಶನ ಶರ್ಟ್ ಬಿಚ್ಚಿ ಹಾಕಿ ಸ್ಟಿಕ್ ನಿಂದ ಅಲ್ಲೇ ನಡೆಸಿರುವುದು ಬೆಳಕಿಗೆ ಬಂದಿದೆ. ನಂತರ ಯತೀಶ್ ಕಾಣೆಯಾಗಿದ್ದರು ನಂತರ ಯೋಗ ಸಂಸ್ಥಾನದವರು ಯತೀಶ್ ಕಾಣೆಯಾಗಿರುವುದಾಗಿ ದೂರನ್ನು ಸಲ್ಲಿಸಿದ್ದು ಈಗ ಇಬ್ಬರಿಂದಲೂ ದೂರು-ಪ್ರತಿದೂರು ನೀಡಿದ್ದು 2 ಎಫ್ಐಆರ್ ದಾಖಲಾಗಿದೆ.




