ಸ್ಯಾಂಡಲ್‌ವುಡ್‌ನಲ್ಲಿ ಹ್ಯಾಟ್ರಿಕ್ ಹಿಟ್ ಕೊಟ್ಟ ನಿರ್ದೇಶಕರ ಸಾಲುಗಳಲ್ಲಿ ಸಂತೋಷ್ ಆನಂದ್‌ರಾಮ್ ಕೂಡ ಒಬ್ಬರು. ರಾಮಾಚಾರಿ ಚಿತ್ರದ ಮೂಲಕ ಇಂಡಸ್ಟಿçಗೆ ಎಂಟ್ರಿಕೊಟ್ಟ ಸಂತೋಷ್ ಮುಂದೆ ರಾಜಕುಮಾರ ಮತ್ತು ಯುವರತ್ನ ಸಿನಿಮಾಗಳನ್ನು ಮಾಡಿ ಸೈ ಎನಿಸಿಕೊಂಡಿದ್ದಾರೆ. ಪಕ್ಕ ಫ್ಯಾಮಿಲಿ ಕೂತು ನೋಡುವಂತ ಸಿನಿಮಾಗಳನ್ನು ಮಾಡಿಕೊಂಡು ಬಂದಿರುವ ಡೈರೆಕ್ಟರ್ ಸಂತೋಷ್ ಆನಂದ್‌ರಾಮ್ ಮೊದಲ ಚಿತ್ರ ರಾಕಿಂಗ್ ಸ್ಟಾರ್ ಯಶ್ ಜೊತೆ, ಮತ್ತೆ ಇನ್ನುಳಿದ ಎರಡು ಚಿತ್ರ ಪವರ್ ಸ್ಟಾರ್ ಪುನೀತ್ ಜೊತೆ ಮಾಡಿ ಹ್ಯಾಟ್ರಿಕ್ ಹಿಟ್ ಕೊಟ್ಟಿದ್ದರು.
ಯುವರತ್ನ ನಂತರ ಮತ್ತೆ ಅಪ್ಪು ಜೊತೆ ಸಿನಿಮಾ ಮಾಡುತ್ತಾರೆ, ಅವರಿಗಾಗಿಯೇ ಸ್ಟೋರಿಕೂಡ ಮಾಡಿಕೊಂಡಿದ್ದಾರೆ ಎನ್ನುವ ವಿಚಾರಗಳು ತಿಳಿದು ಬಂದಿದ್ದವು. ಆದರೆ ಪುನೀತ್ ಜೇಮ್ಸ್ ಚಿತ್ರದಲ್ಲಿ ಬ್ಯೂಸಿ ಯಾಗಿದ್ದರು ಮತ್ತು ಪವನ್ ಕುಮಾರ್ ಜೊತೆ ದಿತ್ವ ಸಿನಿಮಾವನ್ನು ಒಪ್ಪಿಕೊಂಡಿದ್ದರು. ಆ ಸಿನಿಮಾಗಳು ಮುಗಿದ ನಂತರ ಜಯಣ್ಣ ಕಂಬನ್ಸ್ ಅಡಿಯಲ್ಲಿ ದಿನಕರ್ ತೂಗುದೀಪ ಜೊತೆಗಿನ ಸಿನಿಮಾ ಮಾಡಬೇಕಿತ್ತು. ಇವೆಲ್ಲವು ಮುಗಿದ ನಂತರ ಸತೋಷ್ ಸಿನಿಮಾ ಸೆಟ್ಟೇರಲಿದೆ ಎನ್ನುವ ಸುದ್ದಿಗಳು ಕೋಡ ಕೇಳಿ ಬಂದ್ದಿದ್ದವು. ಸಾಕಷ್ಟು ಸಮಯವಿದ್ದ ಕಾರಣ ಸಂತೋಷ್ ಜಗ್ಗೇಷ್ ಅವರೊಟ್ಟಿಗೆ ಹಾಸ್ಯ ಮನರಂಜನೆ ಕಥೆ `ರಾಘವೇಂದ್ರ ಸ್ಟೊರ‍್ಸ್’ ಸಿನಿಮಾ ಮಾಡುವುದಕ್ಕೆ ಮುಂದ್ದಾಗಿದ್ದರು. ಈ ಚಿತ್ರವನ್ನು ವಿಜಯ್ ಕಿರಗಂದೂರು ನಿರ್ಮಾಣ ಮಾಡುತ್ತಿದ್ದಾರೆ.
ಇದೀಗ ಕೆಲ ವಿಷಯಗಳು ಗಾಂಧಿನಗರದಲ್ಲಿ ಹರಿದಾಡುತಿದ್ದು, ಪುನೀತ್ ಅಕಾಲಿಕ ಮರಣದಿಂದಾಗಿ, ಸಂತೋಷ್ ಜೊತೆ ಮಾಡಬೇಕಿದ್ದ ಸಿನಿಮಾ ಕೆಲಸಗಳು ಸುಮ್ಮನಾಗಿದ್ದವು, ಆದರೀಗ ಕೆಲ ಸುದ್ದಿಗಳು ಕೇಳಿಬರುತ್ತಿದ್ದು, ಅಪ್ಪು ಮಾಡಬೇಕಿದ್ದ ಸಿನಿಮಾವನ್ನು ಯುವರಾಜ್‌ಕುಮಾರ್ ಮಾಡಲಿದ್ದಾರೆ ಎನ್ನುವಂತಹ ಮಾತುಗಳು ಕೇಳಿ ಬರುತ್ತಿವೆ. ಪುನೀತ್‌ಗಾಗಿಯೇ ಮಾಡಿದ್ದ ಈ ಕಥೆಗೆ ಯುವರಾಜ್ ಸೂಕ್ತವಾದ ಆಯ್ಕೆ ಎಂದು ಸಂತೋಷ್ ತೀರ್ಮಾನಿಸಿದ್ದಾರೆ. ಯುವರಾಜ್ ಅವರ `ಯುವ ರಣಧೀರ ಕಂಠೀರವ’ ಸಿನಿಮಾದ ಕೆಲಸಗಳು ಬಾಕಿಹಿದ್ದು ಅದಾದ ನಂತರ ಈ ಸಿನಿಮಾಗೆ ಕೈ ಆಕಲಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿವೆ.
ಪುನೀತ್ ಅವರ ಕನಸಿನಂತೆ ಅವರಿಗಾಗಿಯೇ ಬರೆದಿದ್ದ ಕತೆಯ ಮೂಲಕ ಯುವರಾಜ್ ಅವರನ್ನು ಸ್ಯಾಂಟಲ್‌ವುಡ್ ಪರಿಚಯಿಸುವ ಕೆಲಸಕ್ಕೆ ಮುಂದಾಗಿದ್ದು, ಸಂತೋಷ್ ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಎಲ್ಲವೂ ಅಂದುಕೊoಡoತೆ ಆದರೆ, ಜನವರಿ ಮೂರು ಇಲ್ಲ ನಾಲ್ಕನೇ ವಾರದಲ್ಲಿ ಈ ಸಿನಿಮಾ ಸೆಟ್ಟೇರಲದೆ. ಆದರೇ ಈ ಸಿನಿಮಾವನ್ನು ಯಾರು ನಿರ್ಮಾಣ ಮಾಡಲಿದ್ದಾರೆ ಎಂಬುದು ಖಚಿತವಾಗಿಲ್ಲ. ಮೂಲಗಳ ಪ್ರಕಾರ ಹೊಂಬಾಳೆ ಬ್ಯಾನರ್ ಅಥವಾ ಪಿ,ಆರ್,ಕೆ ಸಂಸ್ಥೆಯಿoದ ನಿರ್ಮಾಣವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

