ರಾಷ್ಟ್ರಪತಿ ಭಾಷಣದ ವೇಳೆ ಮೊಬೈಲ್ ನಲ್ಲಿ ಬ್ಯುಸಿಯಾದ ರಾಹುಲ್ ಗಾಂಧಿ..!

ನವದೆಹಲಿ: ಸದಾ ತಮ್ಮ ಒಂದಿಲ್ಲೊಂದು ಚಟುವಟಿಕೆಗೆ ತೀವ್ರ ಟೀಕೆಗೆ ಗುರಿಯಾಗೋ ಎಐಸಿಸಿ ಅಧ್ಯಕ್ಷ, ಸಂಸದ ರಾಹುಲ್ ಗಾಂಧಿ ಇದೀಗ ಮತ್ತೊಮ್ಮೆ ಇಂಥದ್ದೇ ವಿಷಯಕ್ಕೆ ಸುದ್ದಿಯಾಗಿದ್ದಾರೆ.

ಲೋಕಸಭೆ ಮತ್ತು ರಾಜ್ಯ ಸಭೆ ಜಂಟಿ ಅಧಿವೇಶನಕ್ಕೆ ಚಾಲನೆ ನೀಡಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ ಮಾಡುತ್ತಿದ್ದ ವೇಳೆ ರಾಹುಲ್ ಗಾಂಧಿ ಮಾತ್ರ ತಮ್ಮ ಮೊಬೈಲ್ ನಲ್ಲಿ ಬ್ಯುಸಿಯಾಗಿದ್ರು. ಮೊದಲ ಸಾಲಿನಲ್ಲಿ ಸಾಲಿನಲ್ಲೇ ತಮ್ಮ ತಾಯಿಯ ಜೊತೆ ಕುಳಿತುಕೊಂಡಿದ್ದ ರಾಹುಲ್ ಗಾಂಧಿ ರಾಷ್ಟ್ರಪತಿಯವರ ಮಹತ್ವದ ಭಾಷಣಕ್ಕೆ ಕಿವಿಗೊಡದೆ ತಮ್ಮ ಮೊಬೈಲ್ ಸ್ಕ್ರೀನನ್ನೇ ನೋಡುತ್ತಾ ಕುಳಿತಿದ್ದು ಕಂಡುಬಂದಿದೆ.

ಇನ್ನು 4 ಬಾರಿ ಸಂಸದರಾಗಿ ಆಯ್ಕೆಯಾಗಿರೋ ರಾಹುಲ್ ಗಾಂಧಿಯವರ ಈ ನಡೆ ದೇಶಾದ್ಯಂತ ತೀವ್ರ ಟೀಕೆಗೆ ಕಾರಣವಾಗಿದೆ.

ಮೋದಿ ವಿರುದ್ಧ ಪ್ರಬಲ ಎದುರಾಳಿ ಯಾರು ಗೊತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=IDVlJe3yj_o

About The Author