ಬೆಂಗಳೂರು : Pro Kabaddi League ಈ ವರ್ಷದ ಪಂದ್ಯಾವಳಿ ಇಂದು 3 ನೇ ದಿನಕ್ಕೆ ಕಾಲಿಟ್ಟಿದೆ. ಕಬಡ್ಡಿಪ್ರಿಯರಿಗೆ ಎರಡು ದಿನದಲ್ಲಿ ಆರು ಪಂದ್ಯಗಳ ರಸದೌತಣ ಸಿಕ್ಕಿದೆ. ವೈಟ್ ಫೀಲ್ಡ್ನ ಶೆರಡಾನ್ ಗ್ರ್ಯಾಂಡ್ ಹೋಟೆಲ್ನ ಒಳಾಂಗಣದಲ್ಲಿ ಇಂದೂ ಕೂಡ ಮೂರು ಪಂದ್ಯಗಳು ನಡೆಯುತ್ತಿವೆ. ಮೊದಲ ಪಂದ್ಯದಲ್ಲಿ ಯು ಮುಂಬಾ ಮತ್ತು ದಬಂಗ್ ಡೆಲ್ಲಿ ತಂಡಗಳು ಸೆಣಸುತ್ತಿವೆ. ಎರಡನೇ ಪಂದ್ಯ ತಮಿಳ್ ತಲೈವಾಸ್ಗೆ ಬೆಂಗಳೂರು ಬುಲ್ಸ್ (Bengaluru Bulls vs Tamil Thalaivas) ತಂಡಗಳು ಸೆಣಸುತ್ತಿವೆ . ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಬೆಂಗಾಲ್ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ಮಧ್ಯೆ ಪೈಪೋಟಿ ಇದೆ.
ಬೆಂಗಳೂರು ಬುಲ್ಸ್ ತಂಡ ಈ ಬಾರಿ ತುಸು ನೀರಸ ಆರಂಭ ಪಡೆದಿದೆ. ಯು ಮುಂಬಾ ವಿರುದ್ಧದ ಪಂದ್ಯದಲ್ಲಿ ಬುಲ್ಸ್ 16 ಅಂಕಗಳ ಅಂತರದಲ್ಲಿ ಸೋತಿತ್ತು.ತಮಿಳ್ ತಲೈವಾಸ್ ಈ ಸೀಸನ್ನಲ್ಲಿ ಉತ್ತಮ ಅರಂಭಗೊಂಡಿದೆ. ತೆಲುಗು ಟೈಟಾನ್ಸ್ ವಿರುದ್ಧದ ಪಂದ್ಯ ಟೈ ಮಾಡಿಕೊಂಡಿತು. (ಪ್ರಪಂಚನ್) ಅವರು ಅವರು ತಮಿಳ್ ತಲೈವಾಸ್ ತಂಡದ ನಾಯಕನಾಗಿ ಅಮೋಘ ಪ್ರದರ್ಶನ ನೀಡುತ್ತಿದ್ಧಾರೆ. ಬೆಂಗಳೂರು ಬುಲ್ಸ್ ತಂಡವನ್ನ ಕಟ್ಟಿಹಾಕಬಲ್ಲ ಸಮರ್ಥ ಆಟಗಾರರ ಪಡೆ ಅವರೊಂದಿಗೆ ಇದೆ. ಆದರೆ, ಪವನ್ ಶೆರಾವತ್, ಜಿ ಬಿ ಮೋರೆ, ಚಂದ್ರನ್ ರಂಜಿತ್ ಮೊದಲಾದ ಪ್ರತಿಭಾನ್ವಿತ ಆಟಗಾರರನ್ನ ಹೊಂದಿರುವ ಬೆಂಗಳೂರು ಬುಲ್ಸ್ ಇಂದಿನ ಪಂದ್ಯದಲ್ಲಿ ಗೆದ್ದು ಬೀಗುವುದೇ ಎಂಬುವುದನ್ನು ಕಾದು ನೋಡಬೇಕಿದೆ.
Tamil Thalaivas VS ಬೆಂಗಳೂರು ಬುಲ್ಸ್
- Advertisement -
- Advertisement -