ರಾಯಚೂರು : ಮಂಗಳವಾರ ರಾತ್ರಿಯಿಂದ ಜ 7 ರವರೆಗೆ ಹತ್ತು ದಿನಗಳ ಕಾಲ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಹೇಳಿದರು. ನಗರದ ಎಸ್ಪಿ ಕಛೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕರೋನಾ ರೂಪಾಂತರಿ ಓಮಿಕ್ರಾನ್ ತಡೆಗಟ್ಟುವ ಹಿನ್ನಲೆಯಲ್ಲಿ ಸರ್ಕಾರ ನೈಟ್ ಕರ್ಫ್ಯೂ ಜಾರಿ ಮಾಡಿದ್ದು ತುರ್ತು ಸೇವೆ ಹೊರತು ಪಡಿಸಿ ಎಲ್ಲ ವ್ಯಾಪಾರ ವಹಿವಾಟು ಸಿನೆಮಾ ಮಂದಿರಗಳು, ಹೋಟೆಲ್ ಮತ್ತು ರೆಸ್ಟೋರೆಂಟ್ ಗಳು ರಾತ್ರಿ 10 ರೊಳಗಾಗಿ ಬಂದ್ ಮಾಡಬೇಕೇಂದು ಕೋರಿದರು. ಜಿಲ್ಲೆಯ ಮೂರು ಪೊಲೀಸ್ ಉಪವಿಭಾಗಗಳಾದ ರಾಯಚೂರು, ಸಿಂಧನೂರು ಮತ್ತು ಲಿಂಗಸ್ಗೂರು ಪೊಲೀಸ್ ಠಾಣೆಗಳ ಎಲ್ಲ ಅಧಿಕಾರಿಗಳು ನೈಟ್ ಕರ್ಫ್ಯೂ ಜಾರಿಗೊಳಿಸಲು ಕರ್ತವ್ಯ ನಿರತರಾ ಗಿದ್ದು ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗುತ್ತಿದ್ದು ರಾತ್ರಿ ವೇಳೆ ಅನಗತ್ಯ ತಿರುಗಾಡುವವರ ಮೇಲೆ ಮತ್ತು ನೈಟ್ ಕರ್ಫ್ಯೂ ಉಲ್ಲಂಘಿಸುವವರ ಮೇಲೆ ಯಾವುದೆ ಮುಲಾಜಿಗೆ ಒಳಗಾಗದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ನೂತನ ವರ್ಷಾಚರಣೆಗೆ ರಾತ್ರಿ 10 ನಂತರ ಅವಕಾಶವಿಲ್ಲವೆಂದ ಅವರು ನೂತನ ವರ್ಷಾಚರಣೆ ಮಾರ್ಗಸೂಚಿ ಪ್ರತ್ಯೇಕವಾಗಿ ಸರಕಾರ ಹೊರಡಿಸಲಿದ್ದು ಶೇ.50 ರಷ್ಟು ಆಸನಗಳು ಹೋಟೇಲ್ ಮತ್ತು ಸಿನೆಮಾ ಮಂದಿರಗಳಲ್ಲಿ ಅವಕಾಶವಿದೆ ರಾತ್ರಿ 10 ರೊಳಗಡೆ ಎಲ್ಲ ವ್ಯಾಪಾರ ಚಟುವಟಿಕೆಗಳನ್ನು ಮುಗಿಸಬೇಕೆಂದರು. ರಾಜಕೀಯ ಸಭೆ ಸಮಾರಂಭ, ಮದುವೆ ಇನ್ನಿತರ ಕಾರ್ಯಕ್ರಮಗಳನ್ನು ಸರ್ಕಾರ ಹೊರಡಿಸಿದ ಆದೇಶದ ಪಾಲನೆ ಮಾಡಬೇಕೆಂದ ಅವರು ಈ ಬಾರಿ ನೈಟ್ ಕರ್ಫ್ಯೂ ಉಲ್ಲಂಘಿಸುವವರ ಮೇಲೆ ಕಠಿಣ ಬಿಗಿ ಕ್ರಮ ಕೈಗೋಳ್ಳಲಾಗುವುದು ಎಂದರು .ರಾತ್ರಿ ಎಲ್ಲಾ ಪೋಲಿಸ್ ಠಾಣೆಯ ಅಧಿಕಾರಿಗಳು ಜಿಲ್ಲೆಯ ಮುಖ್ಯ ರಸ್ತೆಯಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಸಾರ್ವಜನಿಕರಿಗೆ ಓಮಿಕ್ರಾನ್ ಬಗ್ಗೆ ಅರಿವು ಮೂಡಿಸಿ ವಾಹನ ಸವಾರರಿಗೆ ಎಚ್ಚರಿಕೆ ನೀಡಿದರು.