Sunday, August 10, 2025

Latest Posts

ಗ್ರಾಹಕರ ಕೈಸುಡುತ್ತಿದೆ. ರೀಚಾರ್ಜ್

- Advertisement -

ದೇಶಾದ್ಯಂತ ಪ್ರಮುಖ 4, ಟೆಲಿಕಾಂ ಕಂಪನಿಗಳಲ್ಲಿ ಒಟ್ಟು 116.62 ಕೋಟಿ ಗ್ರಾಹಕ ರಿದ್ದು, ಈ ಪೈಕಿ 52.88 ಕೋಟಿ ಗ್ರಾಹಕರು ಗ್ರಾಮೀಣ ಪ್ರದೇಶದವರಾಗಿದ್ದಾರೆ. ಆರಂಭ ದಲ್ಲಿ ಉಚಿತ ಇಂಟರ್ನೆಟ್, ಕಡಿಮೆ ಕರೆ ಟಾರೀಫ್ ಆಫರ್‌ಗಳನ್ನು ನೀಡಿ ಪ್ರಸ್ತುತ ದೇಶದಲ್ಲಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಜಿಯೋ ಸಹ ತನ್ನ ದರಗಳನ್ನು ಹೆಚ್ಚಿಸಿದ ಹಿನ್ನೆಲೆ ಎಲ್ಲಾ ಕಂಪನಿಗಳು ಸ್ಪರ್ಧೆಗೆ ಬಿದ್ದಂತೆ ದರಗಳನ್ನು ಏರಿಸಿವೆ. ಹೀಗಾಗಿ, ಗ್ರಾಹಕರಿಗೆ ಟೆಲಿಕಾಂ ರೀಚಾರ್ಜ್ ತೀವ್ರ ಫಜೀತಿಯನ್ನು ಸೃಷ್ಟಿಸಿದೆ. ದೇಶದ 4 ಟೆಲಿಕಾಂ ಕಂಪ ನಿಗಳಲ್ಲಿ ಕನಿಷ್ಠ ರೀಚಾರ್ಜ್ 99ರೂ. ನಿಗದಿಗೊಳಿಸಿದ್ದು, ಗ್ರಾಹಕರು ಅನಗತ್ಯವಾಗಿ ಡೇಟಾ ಪಡೆಯಬೇಕಾಗಿದೆ. ಜಿಯೋ ಮೊಬೈಲ್ ಬಳಕೆದಾರರಿಗೆ ಮಾತ್ರ ಕಡಿಮೆ ರೀಚಾರ್ಜ್‌ಗೆ ಅವಕಾಶ ಮಾಡಿಕೊಡಲಾಗಿದೆ. ಉಳಿದಂತೆ 23, 24, 28, 54, 84ದಿನಗಳ ರೀಚಾರ್ಜ್‌ಗಳ ಮೇಲೆ ಶೇ.20ರಿಂದ ಶೇ.40ರಷ್ಟು ದರ ಏರಿಕೆ ಮಾಡಲಾಗಿದೆ.

- Advertisement -

Latest Posts

Don't Miss