ರಾಮನಗರ : ಮೇಕೆದಾಟು ಯೋಜನೆಯನ್ನು ಜಾರಿ ತರುವಂತೆ ಕಾಂಗ್ರೆಸ್ ಕನಕಪುರದ ಸಂಗಮದಿಂದ ಬೆಂಗಳೂರಿನವರೆಗೆ ಪಾದಯಾತ್ರೆಯನ್ನು ಕೈಗೊಂಡಿದೆ. ಮೊದಲನೇ ದಿನ 15 ಕಿಲೋ ಮೀಟರ್ ಪಾದಯಾತ್ರೆ ಮುಗಿಸಿದ್ದು ಎರಡನೇ ದಿನದ ಪಾದಯಾತ್ರೆ ಇಂದು 9 ಗಂಟೆಯಿಂದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಹಾಗೂ ಕಾರ್ಯಕರ್ತರು ಪಾದಯಾತ್ರೆ ಮಾಡುತ್ತಿದ್ದಾರೆ.
ನಿನ್ನೆ ಸಿದ್ದರಾಮಯ್ಯನವರಿಗೆ ಜ್ವರ ಬಂದ ಕಾರಣದಿಂದ ನಿನ್ನೆ ಮಧ್ಯಾಹ್ನ ಅವರು ಮನೆಗೆ ತೆರಳಿದ್ದು ಇವತ್ತಿನ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ತಿಳಿಸಿದರು. ಆದರೆ ಡಿ ಕೆ ಶಿವಕುಮಾರ್ ಫೋನ್ ಮಾಡಿ ಇವತ್ತಿನ ಪಾದಯಾತ್ರೆಗೆ ಬರುವುದು ಬೇಡ ಇವತ್ತು ವಿಶ್ರಾಂತಿ ಪಡೆದು ನಾಳೆ ಬನ್ನಿ ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಕಾರಣ ಸರ್ಕಾರ ವೀಕೆಂಡ್ ಕರ್ಫ್ಯೂಯನ್ನು ಜಾರಿಗೆ ತಂದಿತ್ತು. ಇದನ್ನು ಉಲ್ಲಂಘಿಸಿದ ಕಾರಣಕ್ಕಾಗಿ ಸೆಕ್ಷನ್ 141, 143, 290, 336 ಕಾನೂನಿನ ಅಡಿಯಲ್ಲಿ ಸಾತನೂರು ಪೊಲೀಸ್ ಠಾಣೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ 30 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಸೆಕ್ಷನ್ 141 ಪ್ರಕಾರ ಕಾನೂನು ಬಾಹಿರ, 143 ಪ್ರಕಾರ ಗುಂಪುಗೂಡುವಿಕೆ, ಸೆಕ್ಷನ್ 290 ಪ್ರಕಾರ ಸಾರ್ವಜನಿಕರು ತೊಂದರೆ ಕೊಡುವುದು, ಸೆಕ್ಷನ್ 366 ಪ್ರಕಾರ ನಿರ್ಲಕ್ಷದಿಂದ ಜೀವಹಾನಿ ಪ್ರಕರಣಕ್ಕೆ ಸೇರಿದಂತೆ ಎಫ್ಐಆರ್ ದಾಖಲಾಗಿದ್ದು , ಸರ್ಕಾರ ಕಾಂಗ್ರೆಸ್ ವಿರುದ್ಧ ಕಾನೂನು ಪ್ರಯೋಗಕ್ಕೆ ಮುಂದಾಗಿದೆ.