Kalaburagiಯಲ್ಲಿ 2 ರಾಷ್ಟ್ರೀಕೃತ ಬ್ಯಾಂಕ್ ಬಂದ್.

ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹಬ್ಬುತ್ತಿದ್ದು, ಕೋವಿಡ್​-19 ಸೋಂಕಿನ ಹಾವಳಿಗೆ 2 ರಾಷ್ಟ್ರೀಕೃತ ಬ್ಯಾಂಕ್​ಗಳನ್ನೇ ಬಂದ್​ ಮಾಡಲಾಗಿದೆ. ಕಲಬುರಗಿಯ ಶಹಬಾದ್ ಪಟ್ಟಣದ ಎರಡು ಬ್ಯಾಂಕ್‌ ಸಿಬ್ಬಂದಿಯಲ್ಲಿ ಕೋವಿಡ್​-19 ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಇಲ್ಲಿನ ಭಾರತೀಯ ಸ್ಟೇಟ್ ಬ್ಯಾಂಕ್​ (SBI) ಮತ್ತು ಕೆನರಾ ಬ್ಯಾಂಕ್ (old syndicate​) ಶಾಖೆಗಳನ್ನು ಮುಚ್ಚಲಾಗಿದೆ.

ಬ್ಯಾಂಕ್​ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದು, ಗ್ರಾಹಕರು ಸಹಕರಿಸಬೇಕು ಎಂದು ಬ್ಯಾಂಕ್​ನಲ್ಲಿ ಪೋಸ್ಟರ್ ಹಾಕಲಾಗಿದೆ. ಇನ್ನೂ ಕಳೆದ ಕೆಲ ದಿನಗಳಲ್ಲಿ ಈ ಶಾಖೆಗಳಿಗೆ ಬಂದುಹೋಗಿರುವ ಖಾತೆದಾರರು ಚಿಂತೆಗೀಡಾಗುವಂತಾಗಿದೆ.

About The Author