ದೆಹಲಿ : ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ(corona) ಪ್ರಕರಣಗಳು ಹೆಚ್ಚುತ್ತಿರುವ ಕಾರಣದಿಂದಾಗಿ ಹಲವು ರಾಜ್ಯಗಳಲ್ಲಿ ನೈಟ್ ಕರ್ಫ್ಯೂ(Night curfew) ಜೊತೆ ವೀಕೆಂಡ್ ಕರ್ಫ್ಯೂ(Weekend curfew) ಜಾರಿ ತರಲಾಗಿದೆ. ಅದರ ನಡುವೆಯೂ ಸಹ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಆದ್ದರಿಂದ ದೆಹಲಿ (Delhi)ಯಲ್ಲಿ ಅಘೋಷಿತ ಬಂದ್ ಘೋಷಿಸಿದ್ದು, ತುರ್ತು ಸೇವೆಗಳಿಗೆ ಮಾತ್ರ(For emergency services only)ಅವಕಾಶ ನೀಡಿದ್ದು, ದೆಹಲಿಯಲ್ಲಿ ಎಲ್ಲಾ ಬಾರ್ ಗಳನ್ನು ಕ್ಲೋಸ್(Close all the bars) ಮಾಡುವಂತೆ ಸೂಚಿಸಲಾಗಿದೆ. ಹೋಟೆಲ್ ಹಾಗೂ ರೆಸ್ಟೋರೆಂಟ್ ಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಲಾಗಿದೆ. ಖಾಸಗಿ ಕಚೇರಿಗಳನ್ನು ಬಂದ್ ಮಾಡುವಂತೆ ಸೂಚಿಸಲಾಗಿದೆ. ಈ ಹಿಂದೆ ಕಚೇರಿಗಳಲ್ಲಿ 50:50 ರೂಲ್ಸ್ ಜಾರಿಗೆ ತಂದಿದ್ದರು. ನಿನ್ನೆ ದೆಹಲಿಯಲ್ಲಿ 19600 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಆದ್ದರಿಂದ ಇಂದು 20 ಸಾವಿರ ಗಡಿ ದಾಟುವ ಸಂಭವವಿರುವುದರಿಂದ. ಈ ರೀತಿಯ ರೂಲ್ಸ್ ಜಾರಿಗೆ ತಂದಿದ್ದು, ವರ್ಕ್ ಫ್ರಮ್ ಹೋಮ್ (Work from home) ನಲ್ಲಿ ಕೆಲಸ ಮಾಡುವಂತೆ ಸೂಚಿಸಿ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ (Delhi Disaster Management Authority)ದಿಂದ ಆದೇಶ ಹೊರಡಿಸಲಾಗಿದೆ.