Janardhana ರೆಡ್ಡಿಗೆ 55 ಬೆಳ್ಳಿ ನಾಣ್ಯ 55 ಬಂಗಾರದ ನಾಣ್ಯಗಳಿಂದ ತುಲಾಭಾರ.

ಬಳ್ಳಾರಿ: ಇಂದು ಮಾಜಿ ಸಚಿವ ಜನಾರ್ದನ ರೆಡ್ಡಿ(Janardhan Reddy) ತಮ್ಮ 55 ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಬಳ್ಳಾರಿಯಲ್ಲಿ ಕುಟುಂಬಸ್ಥರೊಂದಿಗೆ ಸೇರಿ ಅದ್ಧೂರಿಯಾಗಿ ಹುಟ್ಟು ಹಬ್ಬ ಮಾಡಿಕೊಳ್ಳುತ್ತಿದ್ದಾರೆ. ಆದ್ರೆ ಜನಾರ್ದನರೆಡ್ಡಿ ಹುಟ್ಟುಹಬ್ಬದಲ್ಲಿ ಕೊವಿಡ್ ರೂಲ್ಸ್ ಬ್ರೇಕ್ ಆಗಿದೆ.

ಹುಟ್ಟು ಹಬ್ಬ ಹಿನ್ನಲೆ ಬಳ್ಳಾರಿಯ ಕನಕದುರ್ಗಮ್ಮ ದೇವಸ್ಥಾನಕ್ಕೆ ಜನಾರ್ದನ ರೆಡ್ಡಿ ಆಗಮಿಸಿದ್ದು ಈ ವೇಳೆ ನೂಕು ನುಗ್ಗಲು ಕಂಡು ಬಂದಿದೆ. ಅಲ್ಲದೆ ಆಪ್ತ ಗೆಳೆಯನ ಹುಟ್ಟಹಬ್ಬಕ್ಕೆ ಸಚಿವ ಬಿ.ಶ್ರೀರಾಮುಲು ಕೂಡ ಮಾಸ್ಕ್ ಧರಿಸದೆ ದೇವಾಲಯಕ್ಕೆ ಆಗಮಿಸಿದ್ದಾರೆ. ಅಭಿಮಾನಿಗಳು ಮಾಜಿ ಸಚಿವ ರೆಡ್ಡಿಗೆ 55 ಬೆಳ್ಳಿ ನಾಣ್ಯ, 55 ಬಂಗಾರದ ನಾಣ್ಯಗಳಿಂದ ತುಲಾಭಾರ ನೆರವೇರಿಸಿದ್ದಾರೆ.

About The Author