ಸಕ್ಕರೆ ಖಾಯಿಲೆ ಇದ್ದವರು ಈ ಹಣ್ಣುಗಳನ್ನ ತಿನ್ನಬಹುದು..

ಸಕ್ಕರೆ ಖಾಯಿಲೆ ಇದ್ದವರಿಗೆ ಸಕ್ಕರೆ ಸೇವಿಸಬಾರದು ಅಂತಾ ಗೊತ್ತಿರುತ್ತೆ. ಆದ್ರೆ ಯಾವ ಹಣ್ಣು ಸೇವಿಸಬೇಕು ಮತ್ತು ಯಾವ ಹಣ್ಣು ಸೇವಿಸಬಾರದು ಅಂತಾ ಗೊತ್ತಿರೋದಿಲ್ಲಾ. ಆದ್ದರಿಂದ ನಾವಿವತ್ತು ಶುಗರ್ ಪೇಶೆಂಟ್‌ಗಳು ಯಾವ ಹಣ್ಣನ್ನ ತಿನ್ನಬೇಕು ಅನ್ನೋ ಬಗ್ಗೆ ಹೇಳಲಿದ್ದೇವೆ.

ಕಿವಿ ಫ್ರೂಟ್- ಕಿವಿ ಫ್ರೂಟ್‌ನಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯವಿರುತ್ತದೆ. ಅಲ್ಲದೇ, ಸಕ್ಕರೆ ಖಾಯಿಲೆ ಇದ್ದವರು ಇದನ್ನ ತಿನ್ನುವುದರಿಂದ, ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗದೇ ಇರಲು ಇದು ಸಹಾಯ ಮಾಡುತ್ತದೆ.

ಕಿತ್ತಳೆ- ಕಿತ್ತಳೆ ಹಣ್ಣು ತಿಂದರೆ ಸುಮಾರು ಪ್ರಯೋಜನಗಳಿದೆ. ಅದರಲ್ಲಿ ಸಕ್ಕರೆ ಖಾಯಿಲೆಯನ್ನ ಕಂಟ್ರೋಲ್‌ನಲ್ಲಿಡುವ ಗುಣ ಕೂಡಾ ಒಂದು. ವಿಟಾಮಿನ್ ಸಿಯಿಂದ ಭರಪೂರವಾಗಿರುವ ಕಿತ್ತಳೆ ಹಣ್ಣು, ಫೈಬರ್ ಅಂಶವನ್ನೂ ಹೊಂದಿದೆ. ಇದೆಲ್ಲ ಗುಣಗಳಿರುವ ಕಾರಣಕ್ಕೆ ಕಿತ್ತಳೆ ಹಣ್ಣು ಸೇವನೆಯಿಂದ ಶುಗರ್ ಕಂಟ್ರೋಲಿನಲ್ಲಿರುತ್ತದೆ.

ಬೆಣ್ಣೆ ಹಣ್ಣು- ಬೆಣ್ಣೆ ಹಣ್ಣಿನಿಂದ ನೀವು ಸಲಾಡ್ ಮಾಡಿ ಅಥವಾ ಮಿಲ್ಕ್‌ ಶೇಕ್ ಮಾಡಿ ಸೇವಿಸಬೇಕು. ಬೆಣ್ಣೆ ಹಣ್ಣು ಸಪ್ಪೆಯಾಗಿರುವ ಕಾರಣ, ಬೆಣ್ಣೆ ಹಣ್ಣಿನಲ್ಲಿ ಗ್ಲೂಕೋಸ್ ಪ್ರಮಾಣವಿರುವುದಿಲ್ಲ. ಹಾಗಾಗಿ ಇದು ಶುಗರ್ ಇದ್ದವರು ಬಳಸಬಹುದು.

ಪೇರಲೆ ಹಣ್ಣು- ಪೇರಲೆ ಹಣ್ಣು ಎಲ್ಲ ಹಣ್ಣಿಗಿಂತ ಉತ್ತಮ ಹಣ್ಣು. ಇದನ್ನು ತಿನ್ನುವುದರಿಂದ ಶುಗರ್ ಕಂಟ್ರೋಲಿನಲ್ಲಿರುವುದಲ್ಲದೇ, ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಇನ್ನು ನಿಮಗೆ ಆ್ಯಪಲ್ ಸೇವಿಸಲು ಆಗದಿದ್ದಲ್ಲಿ, ಈ ಹಣ್ಣನ್ನ ತಿನ್ನಬಹುದು. ಇದರಲ್ಲಿ ಆ್ಯಪಲ್‌ಗಿಂತ ಹೆಚ್ಚಿನ ಪೋಷಕಾಂಶಗಳಿದೆ.

ಸೇಬು ಹಣ್ಣು- ಸಕ್ಕರೆ ಖಾಯಿಲೆಯಿಂದ ಬಳಲುತ್ತಿರುವವರು ತಿನ್ನಬಹುದಾದ ಉತ್ತಮ ಹಣ್ಣು ಅಂದ್ರೆ ಸೇಬು ಹಣ್ಣು.  ಸೇಬು ಹಣ್ಣು ತಿಂದ್ರೆ ದೇಹದಲ್ಲಿ ರಕ್ತದ ಪ್ರಮಾಣ ಹೆಚ್ಚುತ್ತದೆ. ಅಲ್ಲದೇ, ಸಕ್ಕರೆ ಖಾಯಿಲೆ ಇದ್ದವರು ಇದನ್ನ ಆರಾಮವಾಗಿ ಸೇವಿಸಬಹುದು.

ಈ ಮೇಲೆ ತಿಳಿಸಿದ ಹಣ್ಣುಗಳನ್ನು ತಿನ್ನಬಹುದು. ಆದ್ರೆ ಅದನ್ನ ಮಿತಿಯಲ್ಲಿ ಸೇವಿಸಿ. ಮತ್ತು ಚೆನ್ನಾಗಿ ತೊಳೆದು ತಿನ್ನಿ. ಹೆಚ್ಚಾಗಿ ಸೇವಿಸಿದ್ರೆ ಸಕ್ಕರೆ ಪ್ರಮಾಣ ಹೆಚ್ಚಾಗಲೂಬಹುದು. ಹಾಗಾಗಿ ಯಾವ ಆಹಾರ, ಹಣ್ಣು ಹಂಪಲು ಸೇವಿಸುವುದಿದ್ದರೂ, ಮಿತಿಯಾಗಿ ಸೇವಿಸಿ.

About The Author